Monday, August 10, 2020

ಕಾಂಗ್ರೆಸ್ಸಿನಲ್ಲಿ ಸಂಧಾನ: ಪೈಲಟ್ ಸಮಸ್ಯೆ ಆಲಿಕೆಗೆ ಉನ್ನತ ಸಮಿತಿ

 ಕಾಂಗ್ರೆಸ್ಸಿನಲ್ಲಿ  ಸಂಧಾನ: ಪೈಲಟ್ ಸಮಸ್ಯೆ
ಆಲಿಕೆಗೆ ಉನ್ನತ ಸಮಿತಿ

ನವದೆಹಲಿ:  ಸಚಿನ್ ಪೈಲಟ್  ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಕೆಲವು ಗಂಟೆಗಳ ಬಳಿಕ ಬಂಡಾಯ ಶಾಸಕರ ಸಮಸ್ಯೆಗಳನ್ನು ಆಲಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 2020 ಆಗಸ್ಟ್ 10ರ ಸೋಮವಾರ ಉನ್ನತ ಮಟ್ಟದ ತ್ರಿಸದಸ್ಯ ಸಮಿತಿಯೊಂದನ್ನು ರಚಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದವು.

ರಾಜಸ್ಥಾನ ಕಾಂಗ್ರೆಸ್ಸಿನಲ್ಲಿ ಬಂಡಾಯವೆದ್ದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಪಕ್ಷದ ಮಾಜಿ ಅಧ್ಯಕ್ಷ ಸಚಿನ್ ಪೈಲಟ್ ಅವರು ಸೋಮವಾರ ಪಕ್ಷದ ವರಿಷ್ಠ ನಾಯಕತ್ವವನ್ನು ಸಂಪರ್ಕಿಸಿದ್ದು, ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಸೋಮವಾರ ದೆಹಲಿಯಲ್ಲಿ ಸಭೆ ನಡೆಸಿದರು ಎಂದು ಇಬ್ಬರು ಹಿರಿಯ ನಾಯಕರು ತಿಳಿಸಿದರು.

ದೆಹಲಿಯಲ್ಲಿ ನಡೆದ ಸಭೆಯಲ್ಲಿ ಏನು ಚರ್ಚಿಸಲಾಯಿತು ಎಂಬುದು ತತ್ ಕ್ಷಣಕ್ಕೆ ಸ್ಪಷ್ಟವಾಗಿಲ್ಲ. "ಆದಾಗ್ಯೂ, ಅವರು ಭೇಟಿಯಾದಾಗಿನಿಂದ, ಧನಾತ್ಮಕ ಫಲಿತಾಂಶವನ್ನು ನಿರೀಕ್ಷಿಸಲಾಗಿದೆಎಂದು ನಾಯಕರ ಪೈಕಿ ಒಬ್ಬರು ನುಡಿದರು.

ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ವಿರುದ್ಧ ದಂಗೆ ಏಳಲು ಪೈಲಟ್ ಮತ್ತು ೧೮ ಭಿನ್ನಮತೀಯ ರಾಜಸ್ಥಾನ ಶಾಸಕರು ಜೈಪುರದಿಂದ ಹೊರಟ ಒಂದು ತಿಂಗಳ ನಂತರ ಬೆಳವಣಿಗೆ ನಡೆದಿದೆ. ಪಕ್ಷದ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ ಅವರೊಂದಿಗೆ ಪೈಲಟ್ ಭೇಟಿಗೆ ಕಾಲಾವಕಾಶ ಕೋರಿದ್ದಾರೆ ಮತ್ತು ಹಿರಿಯ ನಾಯಕರಾದ ಅಹ್ಮದ್ ಪಟೇಲ್ ಮತ್ತು ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಪೈಲಟ್ ಮಾತನಾಡುತ್ತಿದ್ದಾರೆ ಎಂದು ಇನ್ನೊಬ್ಬ ನಾಯಕ ಹೇಳಿದರು.

ಸೋಮವಾರದ ಬೆಳವಣಿಗೆಯು ಸಚಿನ್ ಪೈಲಟ್ ಅವರು ತಮ್ಮ ಪಟ್ಟನ್ನು ಮೃದುಗೊಳಿಸುತ್ತಿದ್ದಾರೆ ಎಂಬುದನ್ನು ಸೂಚಿಸಿದೆ ಎಂದು ಮೂಲಗಳು ಹೇಳಿವೆ.

ಸದರಿ ಸಭೆಯ ಬಗ್ಗೆ ಪೈಲಟ್ ಅಥವಾ ರಾಹುಲ್ ಗಾಂಧಿಯವರ ಕಚೇರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗೆಹ್ಲೋಟ್ ಅವರ ಸಚಿವಾಲಯದ ವಿಶೇಷ ಕಾರ್ಯಾಚರಣಾ ಸಮೂಹದ ಸಭೆ ಮುಗಿರಿ ಜೈಪುರವನ್ನು ಬಿಟ್ಟ ನಂತರ ರಾಹುಲ್ ಗಾಂಧಿಯವರು ಪೈಲಟ್ ಅವರನ್ನು ಭೇಟಿಯಾದದ್ದು ಇದೇ ಮೊದಲು, ಸರ್ಕಾರವನ್ನು ಉರುಳಿಸುವ ಸಂಚಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೈಲಟ್ ಅವರಿಗೆ ಪಕ್ಷವು ಶೋ-ಕಾಸ್ ನೋಟಿಸ್ ನೀಡಿತು.

ಗೆಹ್ಲೋಟ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಹಾಕುವುದು ಯಾವುದೇ ರೀತಿಯ ಹೊಂದಾಣಿಕೆಗೆ ಪೂರ್ವಭಾವಿ ಷರತ್ತು ಎಂದು ಪೈಲಟ್ ಈವರೆಗೂ ಒತ್ತಾಯಿಸುತ್ತಾ ಬಂದಿದ್ದರು.

ಆದರೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ‘ಆತಿಥ್ಯದಿಂದ ಹೊರಬರುವಂತೆ ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗ ಶಾಸಕರನ್ನು ಕಾಂಗ್ರೆಸ್ ಪ್ರಸ್ತುತ ಬಿಕ್ಕಟ್ಟು ಇತ್ಯರ್ಥಕ್ಕಾಗಿ ಮಾತುಕತೆ ಪ್ರಾರಂಭಿಸುವ ಮುನ್ನ  ಆಗ್ರಹಸಿತ್ತು.

ಐಟಿಸಿ ಗ್ರ್ಯಾಂಡ್ ಭಾರತ್ ಹೋಟೆಲ್‌ನಲ್ಲಿ ಹಲವಾರು ದಿನಗಳ ಕಾಲ ಕಳೆದ ನಂತರ ಫರಿದಾಬಾದಿನಿಂದ ಮಾನೇಸರ್‌ವರೆಗೆ ವಿವಿಧ ಸ್ಥಳಗಳಲ್ಲಿ ಶಿಬಿರ ಹೂಡುತ್ತಿರುವ ಪೈಲಟ್ ತಂಡದ ಸದಸ್ಯರೊಬ್ಬರು, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯು ಬಂಡುಕೋರರ ಮರಳುವಿಕೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ ಎಂದು ತಿಳಿಸಿದರು

ಗೆಹ್ಲೋಟ್ ಕಾರ್ಯಾಚರಣೆ ಶೈಲಿಯ ವಿರುದ್ಧದ ದೂರುಗಳ ಪರಿಣಾಮವಾಗಿ ಪೈಲಟ್‌ನ ಬಂಡಾಯ ಸಂಭವಿಸಿದೆ ಎಂದು ನಾಯಕರೊಬ್ಬರು ನುಡಿದರು.

ರಾಜ್ಯ ಸರ್ಕಾರವು ಸಮಂಜಸ ಮತ್ತು ಸುರಕ್ಷಿತವಾಗಿ ಕಾಣುತ್ತಿರುವುದರಿಂದ ಪೈಲಟ್‌ಗೆ ಬೆಂಬಲ ನೀಡುವ ಕೆಲವು ಶಾಸಕರು ಉದ್ವಿಗ್ನರಾಗಿದ್ದಾರೆ ಮತ್ತು ಪಕ್ಷದ ಕೇಂದ್ರ ನಾಯಕತ್ವದೊಂದಿಗೆ ಹೊಂದಾಣಿಕೆಗೆ ಬರಬೇಕೆಂದು ಬಯಸಿದ್ದಾರೆ ಎಂದು ಅವರು ಹೇಳಿದರು.

೨೦೦ ಸದಸ್ಯ ಬಲದ ಸದನದಲ್ಲಿ ೧೦೨ ಶಾಸಕರ ಬೆಂಬಲ ತಮಗಿದೆ ಎಂದು ಗೆಹ್ಲೋಟ್ ಶಿಬಿರವು ಪ್ರತಿಪಾದಿಸುತ್ತಿದ್ದರೆ, ಪೈಲಟ್ ಅವರಿಗೆ ತಮ್ಮ ಬೆಂಬಲಿಗರ ಸಂಖ್ಯೆಯನ್ನು ೧೯ಕ್ಕಿಂತ ಮೇಲಕ್ಕೆ ಏರಿಸಲು ಸಾಧ್ಯವಾಗಲಿಲ್ಲ, ಆದರೂ ಬಂಡಾಯ ಬೆಂಬಲಿಗರ ಸಂಖ್ಯೆ ಕನಿಷ್ಠ ೩೦ ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಸಹಾಯಕರು ಹೇಳಿದ್ದರು.

ಸೋಮವಾರದ ಬೆಳವಣಿಗೆಗಳು ಕನಿಷ್ಠ ರಾಜ್ಯ ಮಟ್ಟದಲ್ಲಿ, ಪೈಲಟ್ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳುವಂತೆ ಕಾಂಗ್ರೆಸ್ ಸೂಚಿಸಿರುವ ಹಿನ್ನೆಲೆಯಲ್ಲಿ ನಡೆದಿವೆ. ರಾಜಸ್ಥಾನದ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಅವರು ಭಾನುವಾರ ಪೈಲಟ್ ಮತ್ತು ಅವರ ಬೆಂಬಲಿಗರನ್ನು ಪಕ್ಷಕ್ಕೆ ಮರಳುವ ಸಾಧ್ಯತೆಯನ್ನು ತಳ್ಳಿಹಾಕಿದ್ದರು.


"ರಾಜಕೀಯದಲ್ಲಿ, ಕೆಲವೊಮ್ಮೆ ಪ್ರಜಾಪ್ರಭುತ್ವವನ್ನು ಉಳಿಸಲು, ಹೃದಯ ಕಲ್ಲು ಮಾಡಿಕೊಳ್ಳಬೇಕಾಗುತ್ತದೆ (ದಿಲ್ ಪರ್ ಪತ್ಥರ್ ರಖ್ನಾ ಪಡ್ತಾ ಹೈ)’ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದರು.

ಆಗಸ್ಟ್ ೧೪ ರಿಂದ ನಡೆಯಲಿರುವ ವಿಧಾನಸಭಾ ಅಧಿವೇಶನದಲ್ಲಿ ಬಲಾಬಲ ಪರೀಕ್ಷೆ ನಡೆಯುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷ ಬಿಜೆಪಿ ತನ್ನ ೭೨ ಶಾಸಕರ ಪೈಕಿ ೨೦ ಮಂದಿಯನ್ನು ಗುಜರಾತಿಗೆ ಸ್ಥಳಾಂತರಿಸಿತು. ಕಾಂಗ್ರೆಸ್ ಪಕ್ಷದ ಬೇಟೆ ಸಾಧ್ಯತೆಯಿಂದ ರಕ್ಷಸಲು ಬಿಜೆಪಿ ಕ್ರಮ ಕೈಗೊಂಡಿತು.

ರಾಜಸ್ಥಾನ ಬಿಜೆಪಿ ಮುಖ್ಯಸ್ಥ ಸತೀಶ್ ಪೂನಿಯಾ ಯಾವುದೇ ಆಂತರಿಕ ಬಿರುಕುಗಳನ್ನು ನಿರಾಕರಿಸಿದ್ದರೆ, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಕಳೆದ ವಾರ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ತಮ್ಮ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದರು.

ಬಿಜೆಪಿ ತನ್ನ ಶಾಸಕರು ಮತ್ತು ಅದರ ಮೈತ್ರಿ ಪಾಲುದಾರ ಹನುಮಾನ್ ಬೆನಿವಾಲ್ ಅವರ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ (ಆರ್‌ಎಲ್‌ಪಿ) ಸಭೆಯನ್ನು ಮಂಗಳವಾರ ನಡೆಸಲಿz. ಮಧ್ಯೆ, ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಆರು ಶಾಸಕರನ್ನು ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಳಿದ್ದನ್ನು ಪ್ರಶ್ನಿಸಿರುವ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ಮಂಗಳವಾರ ವಿಚಾರಣೆ ನಡೆಸಲಿದೆ.

ಈಮಧ್ಯೆ, ಬಿಎಸ್ಪಿ ಶಾಸಕರು ತಮ್ಮ ಪ್ರಕರಣವನ್ನು ರಾಜಸ್ಥಾನ ಹೈಕೋರ್ಟ್‌ನಿಂದ ಸುಪ್ರೀಂಕೋರ್ಟಿಗೆ ವರ್ಗಾಯಿಸುವಂತೆ ಕೋರಿ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾರೆ.

No comments:

Advertisement