Tuesday, August 11, 2020

ಕೊರೋನಾ ಸೋಂಕಿಗೆ ಖ್ಯಾತ ಉರ್ದು ಕವಿ ರಾಹತ್ ಇಂದೋರಿ ಬಲಿ

 ಕೊರೋನಾ ಸೋಂಕಿಗೆ ಉರ್ದು ಕವಿ ರಾಹತ್ ಇಂದೋರಿ ಬಲಿ

ಇಂದೋರ್ (ಮಧ್ಯಪ್ರದೇಶ): ಸಮಕಾಲೀನ ಉರ್ದು ಕವಿಗಳಲ್ಲಿ ಒಬ್ಬರಾದ ಖ್ಯಾತ ಉರ್ದು ಕವಿ ರಾಹತ್ ಇಂದೋರಿ ಅವರು 2020 ಆಗಸ್ಟ್  11ರ ಮಂಗಳವಾರ ಮಧ್ಯಪ್ರದೇಶದ ಇಂದೋರಿನ  ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ಅವರ ಪುತ್ರ ಸತ್ಲಾಜ್ ಇಂದೋರಿ ತಿಳಿಸಿದರು. ಅವರಿಗೆ ೭೦ ವರ್ಷ ವಯಸ್ಸಾಗಿತ್ತು.

ಇಂದೋರಿ ಅವರಿಗೆ ಕೊರೋನಾವೈರಸ್ ಸೋಂಕು ತಗುಲಿದ್ದು ಭಾನುವಾರ ದೃಢಪಟ್ಟಿತ್ತು.

"ಅವರನ್ನು ಕೊರೋನವೈರಸ್ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಹೃದಯಾಘಾತದಿಂದ ನಿಧನರಾದರು" ಎಂದು ಸತ್ಲಾಜ್ ಇಂದೋರಿ ಹೇಳಿದರು.

ಇಂದೋರಿ ಅವರಿಗೆ ಸೋಮವಾರ ಎರಡು ಬಾರಿ ಹೃದಯಾಘಾತವಾಗಿದೆ ಎಂದು ಶ್ರೀ ಅರಬಿಂದೋ ಆಸ್ಪತ್ರೆಯ ವೈದ್ಯರು ತಿಳಿಸಿದರು.

"ಕೋವಿಡ್ -೧೯ ಸೋಂಕು ತಗುಲಿದ್ದು ಖಚಿತವಾದ ಬಳಿಕ ಅವರನ್ನು ಭಾನುವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಶೇಕಡಾ ೬೦ರಷ್ಟು ನ್ಯುಮೋನಿಯಾ ಇತ್ತು" ಎಂದು ಡಾ.ವಿನೋದ್ ಭಂಡಾರಿ ಹೇಳಿದರು.

೭೦ ಹರೆಯದ ಇಂದೋರಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯರಾಗಿದ್ದರು ಮತ್ತು ಮಂಗಳವಾರ ಬೆಳಿಗ್ಗೆ ಅವರು ಕೋವಿಡ್ ದೃಢಪಟ್ಟ ವರದಿಯ ಬಗ್ಗೆ ಟ್ವೀಟ್ ಮಾಡಿ, ಸಾಮಾಜಿಕ ಮಾಧ್ಯಮಗಳ ಮೂಲಕ ಆರೋಗ್ಯದ ಬಗ್ಗೆ ವಿವರ ನೀಡುವುದಾಗಿ ತಿಳಿಸಿದ್ದರು.

"ಆರಂಭಿಕ ಕೋವಿಡ್ -೧೯ ರೋಗಲಕ್ಷಣಗಳ ನಂತರ, ನನ್ನನ್ನು ಸೋಮವಾರ ವೈರಸ್ ಕುರಿತಾಗಿ ಪರೀಕ್ಷಿಸಲಾಯಿತು ಮತ್ತು ಇಂದು ನನಗೆ ಸೋಂಕು ತಗುಲಿದ್ದು ದೃಢಪಟ್ಟಿದೆ. ನನ್ನನ್ನು ಅರಬಿಂದೋ ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಇಂದೋರಿ ಬರೆದಿದ್ದರು.

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಇಂದೋರಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಸಿದ್ಧ ಉರ್ದು ಕವಿ, ಇಂದೋರಿ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಅವರ ಅಭಿಮಾನಿಗಳು ಕೋರಿದ್ದರು. ತಮ್ಮ ಯೋಗಕ್ಷೇಮದ ಬಗ್ಗೆ ವಿಚಾರಿಸಲು ತಮ್ಮ ಕುಟುಂಬವನ್ನು ಕರೆಯಬೇಡಿ, ಟ್ವಿಟರ್ ಮತ್ತು ಫೇಸ್‌ಬುಕ್ ಮೂಲಕ ಮಾಹಿತಿ ನವೀಕರಿಸುವೆ ಎಂದು ಇಂದೋರಿ ತಿಳಿಸಿದ್ದರು.

ಉರ್ದು ಕಾವ್ಯದ ಅನನ್ಯ ಕವಿಯಾಗಿದ್ದ ಇಂದೋರಿ, ದೇಶದ ಸಾಮಾಜಿಕ-ರಾಜಕೀಯ ಸನ್ನಿವೇಶಗಳ ಬಗ್ಗೆ vಮ್ಮ  ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಎಂದಿಗೂ ಹಿಂಜರಿಯುತ್ತಿರಲಿಲ್ಲ.

ಜನವರಿ , ೧೯೫೦ ರಂದು ಜನಿಸಿದ ಕವಿ ಇಂದೋರಿನ ನೂತನ್ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರೈಸಿದ್ದರು. ಭೋಪಾಲ್‌ನ ಬರ್ಕಾತುಲ್ಲಾ ವಿಶ್ವವಿದ್ಯಾಲಯದಲ್ಲಿ ಉರ್ದು ಭಾಷೆ ಅಧ್ಯಯನ ಮಾಡಿದ್ದರು. ಬಾಲ್ಯಕಾಲದಲ್ಲಿ ಅವರ  ಕುಟುಂಬವು ಚೆನ್ನಾಗಿರಲಿಲ್ಲ ಎಂದು ಸ್ಥಳೀಯರು ಹೇಳಿದರು. ಹೀಗಾಗಿ ಅವರು ೧೦ ನೇ ವಯಸ್ಸಿನಲ್ಲಿ ಸೈನ್ ಪೇಂಟರ್ ಆಗಿ ಕೆಲಸ ಸೇರಬೇಕಾಗಿ ಬಂದಿತ್ತು.

ವಿದ್ಯಾಭ್ಯಾಸ ಮುಗಿದ ನಂತರ ಇಂದೋರಿ ಇಂದೋರ್‌ನಲ್ಲಿ ಉರ್ದು ಶಿಕ್ಷಕರಾಗಿ ಇಸ್ಲಾಮಿಯಾ ಕರಿಮಿಯಾ ಕಾಲೇಜಿಗೆ ಸೇರಿದರು ಮತ್ತು ಕಾವ್ಯದ ಮೇಲಿನ ಪ್ರೀತಿಯಿಂದಾಗಿ ದೇಶಾದ್ಯಂತ ಮುಷೈರಸ್‌ನಲ್ಲಿ ತೊಡಗಿಸಿಕೊಳ್ಳಲು ಪ್ರಾರಂಭಿಸಿದರು. ಅವರು ೧೯ ವರ್ಷದವರಿದ್ದಾಗ ತಮ್ಮ ಮೊದಲಶೆರ್ ಅನ್ನು ಪಠಿಸಿದರು.

ಉರ್ದು ಕಾವ್ಯಕ್ಕಾಗಿ, ಅವರಿಗೆ ಭಾರತ ಮತ್ತು ವಿದೇಶಗಳಲ್ಲಿ ವಿವಿಧ ಪ್ರಶಸ್ತಿಗಳನ್ನು ನೀಡಲಾಗಿತ್ತು. ‘ಉರ್ದು ಮೇ ಮುಷೈರಾ ಸಂಶೋಧನೆಗಾಗಿ ೧೯೮೫ ರಲ್ಲಿ ಭೋಜ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದರು. ಹಿಂದಾಭಾಯ್ ಎಂಬಿಬಿಎಸ್, ಮಿಷನ್ ಕಾಶ್ಮೀರ, ಇಷ್ಕ್, ಘಟಕ್ ಮುಂತಾದ ಹಿಂದಿ ಚಿತ್ರಗಳಿಗೆ ಅವರು ಹಾಡುಗಳನ್ನು ಬರೆದಿದ್ದರು.

No comments:

Advertisement