ಅಯೋಧ್ಯಾ ರಾಮ ಮಂದಿರ ಕಾಮಗಾರಿ ಆರಂಭ
ಅಯೋಧ್ಯೆ: ಅಯೋಧ್ಯಾ ರಾಮ ಮಂದಿರ ನಿರ್ಮಾಣ ಕಾಮಗಾರಿಯು ಆರಂಭವಾಗಿದ್ದು, ೩೬-೪೦ ತಿಂಗಳಲ್ಲಿ ಮಂದಿರ ಪೂರ್ಣಗೊಳ್ಳಲಿದೆ ಎಂದು ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ 2020 ಆಗಸ್ಟ್ 20ರ ಗುರುವಾರ ತಿಳಿಸಿತು.
ಟ್ರಸ್ಟಿನ
ಅಧಿಕೃತ ಟ್ವಿಟರ್ ಖಾತೆಯೂ ದೇಗುಲ ನಿರ್ಮಾಣ ಆರಂಭದ ಕುರಿತು ಮಾಹಿತಿ ನೀಡಿತು.
‘ರಾಮ
ಜನ್ಮಭೂಮಿ ಮಂದಿರ ನಿರ್ಮಾಣ ಪ್ರಾರಂಭವಾಗಿದೆ. ಉತ್ತರಾಖಂಡದ ರೂರ್ಕಿಯಲ್ಲಿರುವ ಕೇಂದ್ರ ಕಟ್ಟಡ ಅಧ್ಯಯನ ಸಂಸ್ಥೆ (ಸಿಬಿಆರ್‌ಐ), ಚೆನ್ನೈಯ
ಐಐಟಿ ಮತ್ತು ‘ಎಲ್ ಅಂಡ್
ಟಿ (ಲಾರ್ಸೆನ್ ಮತ್ತು ಟೂಬ್ರೊ)’ ಎಂಜಿನಿಯರುಗಳು ಮಂದಿರದ
ಸ್ಥಳದಲ್ಲಿ ಮಣ್ಣು ಪರೀಕ್ಷೆಯಲ್ಲಿ ತೊಡಗಿದ್ದಾರೆ. ನಿರ್ಮಾಣ ಕಾರ್ಯವು ೩೬-೪೦ ತಿಂಗಳಲ್ಲಿ
ಮುಗಿಯುವ ನಿರೀಕ್ಷೆಯಿದೆ,’ ಎಂದು ಟ್ವೀಟ್
ತಿಳಿಸಿತು.
‘ಭಾರತದ
ಪ್ರಾಚೀನ ಮತ್ತು ಸಾಂಪ್ರದಾಯಿಕ ಶೈಲಿಯನ್ನು ಅನುಸರಿಸಿ ಮಂದಿರದ ನಿರ್ಮಾಣ ಮಾಡಲಾಗುವುದು. ಭೂಕಂಪ, ಬಿರುಗಾಳಿ ಮತ್ತು ಇತರ ನೈಸರ್ಗಿಕ ವಿಕೋಪಗಳನ್ನು ತಾಳಿಕೊಳ್ಳುವಂತೆ ದೇಗುಲವನ್ನು ನಿರ್ಮಿಸಲಾಗುತ್ತಿದೆ. ಮಂದಿರ ನಿರ್ಮಾಣದಲ್ಲಿ ಕಬ್ಬಿಣವನ್ನು ಬಳಸದೇ ಇರಲು ನಿರ್ಧರಿಸಲಾಗಿದೆ,’ ಎಂದು ಟ್ರಸ್ಟ್
ಹೇಳಿತು.
ಟ್ರಸ್ಟಿನ
ಪ್ರಧಾನ ಕಾರ್ಯದರ್ಶಿ, ವಿಶ್ವ ಹಿಂದೂ ಪರಿಷತ್ತಿನ ಹಿರಿಯ ಕಾರ್ಯವಾಹಕ ಚಂಪತ್ ರಾಯ್ ಅವರು ಸುದ್ದಿಗಾರರ ಜೊತೆ ಮಾತನಾಡಿ, ‘ಅಯೋಧ್ಯಾ ರಾಮ
ಮಂದಿರ ನಿರ್ಮಿಸಲು ಕಲ್ಲುಗಳನ್ನು ಮಾತ್ರ ಬಳಸಲಾಗುತ್ತದೆ. ಈ ದೇಗುಲವು ೧,೦೦೦ ವರ್ಷಗಳಿಗೂ ಹೆಚ್ಚು ಕಾಲ ಅನಿರ್ಭಾಧಿತವಾಗಿ ಉಳಿಯಲಿದೆ,’ ಎಂದು ಹೇಳಿದರು.
ದೇವಾಲಯದ
ನಿರ್ಮಾಣದ ಉಸ್ತುವಾರಿಯನ್ನು ‘ಎಲ್ ಅಂಡ್
ಟಿ’
ನೋಡಿಕೊಳ್ಳುತ್ತಿದೆ.
ಚೆನ್ನೈಯ ಐಐಟಿಯು ಮಣ್ಣಿನ ಬಲವನ್ನು ಪರೀಕ್ಷಿಸುತ್ತಿದೆ. ಕಟ್ಟಡದ ಭೂಕಂಪ ನಿರೋಧಕಕತೆಯನ್ನು ಖಚಿತಪಡಿಸಿಕೊಳ್ಳಲು ಸಿಬಿಆರ್‌ಐ ಸೇವೆ
ಪಡೆದುಕೊಳ್ಳಲಾಗಿದೆ’ ಎಂದು
ಅವರು ತಿಳಿಸಿದರು.
‘ದೇವಾಲಯವನ್ನು
ನಿರ್ಮಿಸಲು ಸುಮಾರು ೧೦,೦೦೦ ತಾಮ್ರದ
ಸರಳುಗಳು ಬೇಕಾಗುತ್ತವೆ. ಜನರು ನಿರ್ಮಾಣ ಪ್ರಕ್ರಿಯೆಯ ಭಾಗವಾಗಲು ಬಯಸಿದರೆ, ಅವರು ತಾಮ್ರವನ್ನು ದಾನ ಮಾಡುವ ಮೂಲಕ ಪಾಲ್ಗೊಳ್ಳಬಹುದು. ಕೇವಲ ಕಲ್ಲುಗಳನ್ನು ಬಳಸಿ ದೇವಾಲಯವನ್ನು ನಿರ್ಮಿಸುತ್ತಿರುವುದರಿಂದ ಗಾಳಿ, ಬಿಸಿಲು, ನೀರಿನಿಂದ ಯಾವುದೇ ತೊಂದರೆಯಾಗುವುದಿಲ್ಲ. ಹೀಗಾಗಿ ದೇವಾಲಯವು ಕನಿಷ್ಠ ೧,೦೦೦ ವರ್ಷಗಳವರೆಗೆ
ಇರುತ್ತದೆ’ ಎಂದು
ಚಂಪತ್ ರಾಯ್ ನುಡಿದರು.
ಆಗಸ್ಟ್
೫ರಂದು ಪ್ರಧಾನಿ ನರೇಂದ್ರ ಮೋದಿ ಭವ್ಯ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು.
No comments:
Post a Comment