Tuesday, September 29, 2020

ಪ್ರತಿಭಟನೆ ಹೆಸರಲ್ಲಿ ರೈತರಿಗೆ ಅವಮಾನ: ಪ್ರಧಾನಿ ಕಿಡಿ

 ಪ್ರತಿಭಟನೆ ಹೆಸರಲ್ಲಿ ರೈತರಿಗೆ ಅವಮಾನ: ಪ್ರಧಾನಿ ಕಿಡಿ

ನವದೆಹಲಿ: ಪ್ರತಿಭಟನೆಗಳ ಹೆಸರಿನಲಿ ರೈತರು ಪೂಜಿಸುವ ಸಲಕರಣೆಗಳಿಗೆ ಬೆಂಕಿ ಹಚ್ಚುವ ಮೂಲಕ ಅವರು ರೈತರನ್ನು ಅವಮಾನಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ 2020 ಸೆಪ್ಟೆಂಬರ್ 29ರ ಮಂಗಳವಾರ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

ದೆಹಲಿಯ ಹೃದಯ ಭಾಗದಲ್ಲಿರುವ ಇಂಡಿಯಾಗೇಟ್ ಹುಲ್ಲುಹಾಸಿನ ಬಳಿಯ ರಾಜಪಥದಲ್ಲಿ ಪಂಜಾಬ್ ಕಾಂಗ್ರೆಸ್ಸಿನ ಯುವ ಘಟಕದ ಸದಸ್ಯರು ಟ್ರ್ಯಾಕ್ಟರಿಗೆ ಬೆಂಕಿ ಹಚ್ಚಿದ ಘಟನೆಯನ್ನು ಉಲ್ಲೇಖಿಸಿದ ಪ್ರಧಾನಿ ವಿಪಕ್ಷಗಳ ವಿರುದ್ಧ ಹರಿ ಹಾಯುವುದರ ಜೊತೆಗೆ ಕೃಷಿ ಮಸೂದೆಗಳನ್ನು ಪ್ರಬಲವಾಗಿ ಸಮರ್ಥಿಸಿದರು.

ದೊಡ್ಡ ರೈತರ ಗುಂಪುಗಳು, ವಿಶೇಷವಾಗಿ ಪಂಜಾಬ್ ಮತ್ತು ಹರಿಯಾಣದಲ್ಲಿ, ಹೊಸ ಕಾನೂನುಗಳನ್ನು ಪ್ರತಿಭಟಿಸುವುದನ್ನು ಮುಂದುವರೆಸುತ್ತಿವೆ, ಕೃಷಿ ಉತ್ಪನ್ನಗಳ ಮಾರಾಟದ ಮೇಲಿನ ನಿಯಂತ್ರಣ ರದ್ದು ಕ್ರಮದಿಂದ ಕೃಷಿ ವ್ಯವಹಾರಗಳಲ್ಲಿ ಪ್ರಬಲ ಕಾರ್ಪೋರೇಟ್ ನಿಯಂತ್ರಣ ಹೆಚ್ಚಾಗುತ್ತದೆ ಮತ್ತು ರೈತರ ಚೌಕಾಶಿ ಬಲವು ಇನ್ನಷ್ಟು ಕುಗ್ಗುತ್ತದೆ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿವೆ.

ಕೃಷಿ ಸುಧಾರಣೆ ಕಾಯ್ದೆಯನ್ನು ವಿರೋಧಿಸಿರುವ ಭಾರತೀಯ ಜನತಾ ಪಕ್ಷದ ಹಳೆಯ ಮಿತ್ರ ಪಕ್ಷಗಳಲ್ಲಿ ಒಂದಾದ ಶಿರೋಮಣಿ ಅಕಾಲಿ ದಳವು ಆಡಳಿತಾರೂಢ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದಿಂದ (ಎನ್ ಡಿಎ) ಹೊರ ಬಂದಿದೆ.

ರೈತರ ಸ್ವಾತಂತ್ರ್ಯವನ್ನು ವಿರೋಧ ಪಕ್ಷಗಳು ವಿರೋಧಿಸುತ್ತಿವೆ ಎಂದು ಆಪಾದಿಸಿದ ಪ್ರಧಾನಿ, ರಾಷ್ಟ್ರ ಹಿತದ ಎಲ್ಲವನ್ನೂ ವಿರೋಧಿಸುವುದನ್ನು ಜನರು ಚಾಳಿಯಾಗಿ ಮಾಡಿಕೊಂಡಿದ್ದಾರೆ. ಇವರ ರಾಜಕೀಯದಲ್ಲಿ ಇರುವ ಏಕೈಕ ಮಾರ್ಗವೆಂದರೆ ವಿರೋಧಿಸುವುದು ಎಂದು ಚುಚ್ಚಿದರು.

"ಕೆಲವು ದಿನಗಳ ಹಿಂದೆ ಹೊಸ ಕಾನೂನುಗಳೊಂದಿಗೆ, ದೇಶವು ತನ್ನ ರೈತರನ್ನು ಅನೇಕ ಸಂಕೋಲೆಗಳಿಂದ ಮುಕ್ತಗೊಳಿಸಿದೆ. ಈಗ ರೈತ ತನ್ನ ಉತ್ಪನ್ನಗಳನ್ನು ಯಾರಿಗಾದರೂ, ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಆದರೆ ಕೇಂದ್ರ ಸರ್ಕಾರವು ರೈತರಿಗೆ ತಮ್ಮ ಹಕ್ಕುಗಳನ್ನು ನೀಡುತ್ತಿರುವಾಗಲೂ, ಜನರು ಪ್ರತಿಭಟಿಸಲು ಇಳಿಯುವ ಮೂಲಕ ರೈತನ ಸ್ವಾತಂತ್ರ್ಯವನ್ನು ವಿರೋಧಿಸುತ್ತಿದ್ದಾರೆ. ಜನರು ಈಗ ರೈತರು ಪೂಜಿಸುವ ಸರಕು ಮತ್ತು ಸಲಕರಣೆಗಳಿಗೆ ಬೆಂಕಿ ಹಚ್ಚಿ ರೈತರನ್ನು ಅವಮಾನಿಸುತ್ತಿದ್ದಾರೆ ಎಂದು ಪ್ರಧಾನಿ, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉತ್ತರಾಖಂಡದ ಆರು ಮಹಾ ಯೋಜನೆಗಳನ್ನು ಉದ್ಘಾಟಿಸುತ್ತಾ ಹೇಳಿದರು.

ಒಂದು, ಕಾನೂನುಗಳು ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಗೆ ಖರೀದಿಸುವುದನ್ನು ಖಾತರಿಪಡಿಸುವುದಿಲ್ಲ (ಕನಿಷ್ಠ, ಪತ್ರದಲ್ಲಿಲ್ಲ), ಮತ್ತು ಎರಡು, ಸಂಸದೀಯ ಸಮಿತಿಯ ವಿಸ್ತೃತ ಪರಿಶೀಲನೆಗೆ ಒಪ್ಪಿಸಬೇಕೆಂಬ ಬೇಡಿಕೆಯನ್ನು ನಿರಾಕರಿಸಿ, ಬೆಂಬಲದ ಬಗ್ಗೆ ಅನುಮಾನವಿದ್ದ ಹೊತ್ತಿನಲ್ಲಿ ಧ್ವನಿಮತದ ಮೂಲಕ ಮಸೂದೆಗಳಿಗೆ ಮಂಜೂರಾತಿ ಪಡೆದ ರೀತಿ ಎರಡು ಕಾರಣಗಳಿಗಾಗಿ ಸರ್ಕಾರದ ಹೊಸ ಕೃಷಿ ಕಾನೂನುಗಳು ಎರಡು ಕಾರಣಗಳಿಗಾಗಿ ವಿವಾದಾಸ್ಪದವಾಗಿವೆ.

ರೈತರು ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಪಡೆಯುವುದರೊಂದಿಗೇ ಮಧ್ಯವರ್ತಿಗಳನ್ನು ದೂರವಿಡುವುದರ ಜೊತೆಗೆ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವ ಮೂಲಕಕಪ್ಪು ಹಣ ಸಂಪಾದಿಸುವ ಇನ್ನೊಂದು ವಿಧಾನವನ್ನು ನಿರ್ಬಂಧಿಸಿದ ಕಾರಣಕ್ಕಾಗಿ ವಿರೋಧ ಪಕ್ಷಗಳು ಕೃಷಿ ಕಾಯ್ದೆಗಳನ್ನು ಪ್ರತಿಭಟಿಸುತ್ತಿವೆ ಎಂದು ಪ್ರಧಾನಿ ಆಪಾದಿಸಿದರು.

"ಒಂದೇ ಕುಟುಂಬದ ನಾಲ್ಕು ತಲೆಮಾರುಗಳು ದೇಶವನ್ನು ಆಳಿದ ಪಕ್ಷವು, ಇಂದು ಇತರರ ಹೆಗಲ ಮೇಲೆ ಹತ್ತಿ ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ಎಲ್ಲಾ ಉಪಕ್ರಮಗಳನ್ನು ವಿರೋಧಿಸುವ ಮೂಲಕ vನ್ನ ಸ್ವಾರ್ಥವನ್ನು ಸಾಬೀತುಪಡಿಸಲು ಬಯಸಿದೆ ಎಂದು ಪ್ರಧಾನಿ ಟೀಕಿಸಿದರು.

ಕೋವಿಡ್ -೧೯ ಸಾಂಕ್ರಾಮಿಕ ಸಮಯದಲ್ಲಿ, ದೇಶವು ಡಿಜಿಟಲ್ ಇಂಡಿಯಾ ಅಭಿಯಾನದಲ್ಲಿ ಭರಾಟೆ ಕಂಡಿದೆ ಎಂದು ಮೋದಿ ಹೇಳಿದರು. ‘ಬಡವರು ಕೂಡಾ ಜನ ಧನ ಬ್ಯಾಂಕ್ ಖಾತೆಗಳನ್ನು ಬಳಸುತ್ತಿದ್ದಾರೆ, ರುಪೇ ಕಾರ್ಡ್ ಬಳಸುತ್ತಾರೆ ಮತ್ತು ಡಿಜಿಟಲ್ ವಹಿವಾಟು ನಡೆಸುತ್ತಾರೆ ಎಂದು ಪ್ರಧಾನಿ ಹೇಳಿದರು.

"ನಮ್ಮ ಸರ್ಕಾರ ಕೆಲಸವನ್ನು ಪ್ರಾರಂಭಿಸಿದಾಗ, ಜನರು ಇದನ್ನು ವಿರೋಧಿಸಿದರು ಮತ್ತು ದೇಶದ ಬಡವರು ಬ್ಯಾಂಕ್ ಖಾತೆ ತೆರೆಯುವುದನ್ನು ಯಾವಾಗಲೂ ವಿರೋಧಿಸಿದ್ದಾರೆ ಎಂದು ಮೋದಿ ನುಡಿದರು.

ಮತ್ತೊಂದು ಉದಾಹರಣೆಯ ಮೇಲೆ ಬೆಳಕು ಚೆಲ್ಲುತ್ತಾ ಪ್ರಧಾನಿ, ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಹಾಗೂ ಏಕ ಶ್ರೇಣಿ, ಏಕ ಪಿಂಚಣಿಯಂತಹ (ಒನ್ ರ್ಯಾಂಕ್ ಒನ್ ಪೆನ್ಷನ್) ಯೋಜನೆಗಳನ್ನು ವಿರೋಧ ಪಕ್ಷಗಳು ಪ್ರತಿಭಟಿಸಿದ್ದಾನ್ನು ಉಲ್ಲೇಖಿಸಿದರು.

"ಒನ್ ರ್ಯಾಂಕ್ -ಒನ್ ಪೆನ್ಷನ್ ಜಾರಿಗೆ ಬಂದಾಗಿನಿಂದ, ಸರ್ಕಾರವು ಮಾಜಿ ಸೈನಿಕರಿಗೆ ಸುಮಾರು ೧೧,೦೦೦ ಕೋಟಿ ರೂಪಾಯಿಗಳನ್ನು ಕೇವಲ ಉತ್ತರಾಖಂಡದಲ್ಲಿ ವಿತರಿಸಿದ್ದು, ಇಲ್ಲಿನ ಒಂದು ಲಕ್ಷಕ್ಕೂ ಹೆಚ್ಚು ಮಾಜಿ ಸೈನಿಕರು ಇದರಿಂದ ಪ್ರಯೋಜನ ಪಡೆದಿದ್ದಾರೆ. ಆದರೆ ಜನರು (ವಿರೋಧ ಪಕ್ಷಗಳು) ಯಾವಾಗಲೂ ಒನ್ ರ್ಯಾಂಕ್ ಒನ್ ಪೆನ್ಷನ್ ಅನುಷ್ಠಾನಕ್ಕೆ ವಿರುದ್ಧವಾಗಿದ್ದರು ಎಂದು ಮೋದಿ ಹೇಳಿದರು.

ರಫೇಲ್ ಜೆಟ್ಗಳನ್ನು ಭಾರತೀಯ ವಾಯುಪಡೆಗೆ ಸೇರ್ಪಡೆ ಮಾಡುವುದನ್ನು ಕೂಡಾ ವಿರೋಧ ಪಕ್ಷಗಳು ವಿರೋಧಿಸಿವೆ. ಭದ್ರತಾ ಪಡೆಗಳನ್ನು ಬಲಪಡಿಸುವ ಸಲುವಾಗಿ ಉಪಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಧಾನಿ ನುಡಿದರು.

"ನಾಲ್ಕು ವರ್ಷಗಳ ಹಿಂದೆ, ನಮ್ಮ ಯೋಧರು ಸರ್ಜಿಕಲ್ ದಾಳಿಗಳನ್ನು ನಡೆಸಿ ಭಯೋತ್ಪಾದನೆಯ ನೆಲೆಗಳನ್ನು ನಾಶಪಡಿಸಿದರು. ಆದರೆ ನಮ್ಮ ಭದ್ರತಾ ಸಿಬ್ಬಂದಿಯ ಧೈರ್ಯವನ್ನು ಶ್ಲಾಘಿಸುವ ಬದಲು ಪ್ರತಿಪಕ್ಷಗಳು ಸರ್ಜಿಕಲ್ ದಾಳಿಗಳಿಗೆ ಪುರಾವೆಗಳನ್ನು ಕೇಳುತ್ತಿದ್ದವು. ದೇಶಕ್ಕಾಗಿ ನಡೆಯುತ್ತಿರುವ ಎಲ್ಲವನ್ನೂ ವಿರೋಧಿಸುವುದು ಜನರಿಗೆ ಚಾಳಿಯಾಗಿದೆ. ಅವರಿಗೆ ಈಗ ತಿಳಿದಿರುವ ರಾಜಕೀಯದ ಏಕೈಕ ಮಾರ್ಗವೆಂದರೆ ವಿರೋಧಎಂದು ಪ್ರಧಾನಿ ಛೇಡಿಸಿದರು.

No comments:

Advertisement