Wednesday, October 14, 2020

ಯುದ್ಧಕ್ಕೆ ಸಜ್ಜಾಗಿ: ಪಿಎಲ್ ಎ ಪಡೆಗಳಿಗೆ ಕ್ಷಿ ಜಿನ್ ಪಿಂಗ್ ಕರೆ

  ಯುದ್ಧಕ್ಕೆ ಸಜ್ಜಾಗಿ: ಪಿಎಲ್ ಎ ಪಡೆಗಳಿಗೆ ಕ್ಷಿ ಜಿನ್ ಪಿಂಗ್ ಕರೆ

ನವದೆಹಲಿ: ವಿವಾದಾತ್ಮಕ ನಡೆಯೊಂದರಲ್ಲಿ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಪಡೆಗಳನ್ನು ಭಾರತದ ಗಡಿ ಬಿಕ್ಕಟ್ಟಿನ ಮಧ್ಯೆ ಯುದ್ಧಕ್ಕೆ ಸಿದ್ಧತೆ ನಡೆಸುವಂತೆ ಕೇಳಿಕೊಂಡಿದ್ದಾರೆ ಎಂದು 2020 ಅಕ್ಟೋಬರ್ 14ರ ಬುಧವಾರ ವರದಿಗಳು ತಿಳಿಸಿದವು.

ಅಕ್ಟೋಬರ್ ೧೩ ರಂದು (ಮಂಗಳವಾರ) ಗುವಾಂಗ್‌ಡಾಂಗ್ ಪ್ರಾಂತ್ಯದ ಮಿಲಿಟರಿ ನೆಲೆಗೆ ಭೇಟಿ ನೀಡಿದಾಗ "ಎಲ್ಲರ (ಅವರ) ಮನಸ್ಸು ಮತ್ತು ಶಕ್ತಿಯನ್ನು ಯುದ್ಧಕ್ಕೆ ಸಜ್ಜು ಪಡಿಸಿಕೊಳ್ಳಿ’ ಎಂದು ಗ್ ಚೀನಾದ ಸೈನಿಕರಿಗೆ ಕರೆ ನೀಡಿದ್ದಾರೆ ಎಂದು ಸಿಎನ್‌ಎನ್ ಚೀನಾದ ಸುದ್ದಿ ಸಂಸ್ಥೆ ಕ್ಸಿನ್ಹುವಾವನ್ನು ಉಲ್ಲೇಖಿಸಿ ವರದಿ ಮಾಡಿತು.

ಚಾವೋಝುವು ನಗರದಲ್ಲಿ ಪಿಎಲ್‌ಎಯ ಮೆರೈನ್ ಕೋರನ್ನು ಪರಿಶೀಲಿಸುತ್ತಿರುವಾಗ ಈ ಹೇಳಿಕೆ ನೀಡಲಾಗಿದೆ ಎಂದು ಕ್ಸಿನ್ಹುವಾವನ್ನು ಉಲ್ಲೇಖಿಸಿ ಸಿಎನ್‌ಎನ್ ಹೇಳಿತು. ಕ್ಸಿನ್ಹುವಾ ಪ್ರಕಾರ, ಕ್ಸಿ ಸೈನಿಕರಿಗೆ "ಹೆಚ್ಚಿನ ಎಚ್ಚರಿಕೆಯ ಸ್ಥಿತಿಯನ್ನು ಕಾಪಾಡಿಕೊಳ್ಳಲು" ಆದೇಶಿಸಿದರು ಮತ್ತು ಅವರನ್ನು "ಸಂಪೂರ್ಣವಾಗಿ ನಿಷ್ಠಾವಂತ, ಸಂಪೂರ್ಣವಾಗಿ ಶುದ್ಧ ಮತ್ತು ಸಂಪೂರ್ಣವಾಗಿ ವಿಶ್ವಾಸಾರ್ಹ" ಎಂದು ಶ್ಲಾಘಿಸಿದರು.

No comments:

Advertisement