Monday, October 12, 2020

ಗಡಿಭಾಗದ ೪೪ ಸೇತುವೆಗಳಿಗೆ ರಾಜನಾಥ್ ಸಿಂಗ್ ಚಾಲನೆ

 ಗಡಿಭಾಗದ ೪೪ ಸೇತುವೆಗಳಿಗೆ ರಾಜನಾಥ್ ಸಿಂಗ್ ಚಾಲನೆ

ನವದೆಹಲಿ: ಸೇನೆಯ ಗಡಿ ರಸ್ತೆಗಳ ಸಂಸ್ಥೆ ಅಥವಾ ಬಿಆರ್‌ಒ ನಿರ್ಮಿಸಿದ ೪೪ ಸೇತುವೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ೨೦೨೦ ಅಕ್ಟೋಬರ್ ೧೨ ರ ಸೋಮವಾರ  ಔಪಚಾರಿಕವಾಗಿ ಉದ್ಘಾಟಿಸಿದರು. ೪೮ ಸೇತುವೆಗಳನ್ನು ನಿರ್ಮಿಸುವತ್ತ ಇದೀಗ ಬಿಆರ್‌ಒ ಗಮನ ಕೇಂದ್ರೀಕರಿಸಿದೆ.

ಬಿಆರ್‌ಒ ನಿರ್ಮಿಸುತ್ತಿರುವ ೧೦೨ ಸೇತುವೆಗಳಲ್ಲಿ ೪೪ ಸೇತುವೆಗಳು ಸೇರಿವೆ. ಸೇತುವೆಗಳನ್ನು ಭಾರತದ ಭಾರವಾದ ಯುದ್ಧ ಟ್ಯಾಂಕ್‌ಗಳ ಚಲನೆಯನ್ನು ತಡೆದುಕೊಳ್ಳಲು ಸಮರ್ಥವಾಗುವಂತೆ ವಿನ್ಯಾಸಗೊಳಿಸಲಾಗಿದೆ.

ಸೋಮವಾರ ಉದ್ಘಾಟಿಸಲಾದ ೪೪ ಸೇತುವೆಗಳಲ್ಲಿ ೩೦ ಸೇತುವೆಗಳು ಲಡಾಖ್‌ನಿಂದ ಅರುಣಾಚಲ ಪ್ರದೇಶಕ್ಕೆ ನೈಜ ನಿಯಂತ್ರಣ ರೇಖೆಯ ಮಾರ್ಗದಲ್ಲಿ ಬರುತ್ತವೆ.

ಉನ್ನತ ತಾಂತ್ರಿಕ ಗುಣಮಟ್ಟವನ್ನು ಹೊಂದಿರುವ ೭೦ ಸೇತುವೆಗಳು ೭೦ ಟನ್ ವಾಹನಗಳ ಭಾರವನ್ನು ಸಹಿಸಬಲ್ಲ ತಾಂತ್ರಿಕತೆಯನ್ನು ಹೊಂದಿವೆ.

ಭಾರತದ ಅತ್ಯಂತ ಭಾರವಾದ ಯುದ್ಧ ಟ್ಯಾಂಕ್ ಅರ್ಜುನ್ ತೂಕ ಸುಮಾರು ೬೦ ಟನ್. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ನೈಜ ನಿಯಂತ್ರಣ ರೇಖೆಯಿಂದ ಹಿಂದೆ ಸರಿಯಲು ಹಿಂಜರಿಯುತ್ತಿರುವ ಹಿನ್ನೆಲೆಯಲ್ಲಿ  ಪೂರ್ವ ಲಡಾಖ್ ವಲಯದ ಸ್ಥಳಗಳಿಗೆ ಸ್ಥಳಾಂತರಿಸಲಾದ ಟಿ -೯೦ ಭೀಷ್ಮ ಟ್ಯಾಂಕ್‌ಗಳು ಸುಮಾರು ೪೫ ಟನ್ ತೂಕ ಹೊಂದಿವೆ.

ಸೇತುವೆಗಳು ಸಂಪರ್ಕವನ್ನು ಸುಧಾರಿಸುತ್ತದೆ ಜೊತೆಗೆ ಎಲ್‌ಎಸಿಯ ಉದ್ದಕ್ಕೂ ಯಾವುದೇ ಪರಿಸ್ಥಿತಿಗೆ ಸ್ಪಂದಿಸುವ ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಹೆಚ್ಚು ಸುಧಾರಿಸಲು ಸೇನೆ ಮತ್ತು ಇತರ ಬೆಂಬಲದ ವ್ಯವಸ್ಥೆಯನ್ನು ತ್ವರಿತವಾಗಿ ಅಭಿವೃದ್ಧಿ ಪಡಿಸಲು ಅನುವು ಮಾಡಿಕೊಡುತ್ತವೆ.

ವಾರ್ಷಿಕ ಸರಾಸರಿ ೫೦ ಸೇತುವೆಗಳನ್ನು ನಿರ್ಮಿಸುವ ಬದಲಿಗೆ ಅದನ್ನು ದ್ವಿಗುಣಗೊಳಿಸಿ ವರ್ಷ ೧೦೨ ಸೇತುವೆಗಳನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿತ್ತು.

ದಶಕಗಳಿಂದ ಗಡಿ ಮೂಲಸೌಕರ್ಯಗಳನ್ನು ಹೆಚ್ಚಿಸಲು ಹೆಚ್ಚಿನ ಹೂಡಿಕೆ ಮಾಡಿದ ಚೀನಾವನ್ನು ಭಾರತ ಹಿಡಿಯಬೇಕಾಗಿದ್ದು, ಗಡಿ ಮೂಲಸೌಕರ್ಯವನ್ನು ನವೀಕರಿಸದಿರಲು ಹಿಂದಿನ ಸರ್ಕಾರಗಳು ತೆಗೆದುಕೊಂಡ ನಿರ್ಧಾರವನ್ನು ಉಲ್ಲೇಖಿಸಿ "ನಾವು ಈಗಾಗಲೇ ಹೆಚ್ಚು ಸಮಯವನ್ನು ಕಳೆದುಕೊಂಡಿದ್ದೇವೆ ಮತ್ತು ವ್ಯವಹಾರದಲ್ಲಿ ಎಂದಿನಂತೆ ವಿಧಾನವನ್ನು ಅನುಸರಿಸಲು ಸಾಧ್ಯವಾಗಲಿಲ್ಲ" ಎಂದು ಬಿಆರ್‌ಒ ಅಧಿಕಾರಿಯೊಬ್ಬರು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಿಂಗಳ ಆರಂಭದಲ್ಲಿ ಅಟಲ್ ಸುರಂಗವನ್ನು ತೆರೆದಾಗ ಇದನ್ನು ಉಲ್ಲೇಖಿಸಿದ್ದರು. ಹಿಂದಿನ ಸರ್ಕಾರಗಳು ತಪ್ಪಾದ ಆದ್ಯತೆಗಳು ಮತ್ತು ಚೀನಾದ ಗಡಿಯುದ್ದಕ್ಕೂ ಗಡಿ ರಸ್ತೆಗಳತ್ತ ಗಮನ ಹರಿಸಲು ರಾಜಕೀಯ ಇಚ್ಛಾಶಕ್ತಿಯ ಕೊರತೆ ಹೊಂದಿದ್ದುದು ಗಡಿ ಮೂಲ ಸವಲತ್ತು ನಿರ್ಲಕ್ಷ್ಯಕ್ಕೆ ಕಾರಣವಾಗಿತ್ತು ಎಂದು ಪ್ರಧಾನಿ ಆಪಾದಿಸಿದ್ದರು.

ಪ್ರಧಾನಿ ಮೋದಿ ಅವರು ೨೦೧೪ ರಲ್ಲಿ ಭರ್ಜರಿ ಗೆಲುವಿನೊಂದಿಗೆ ಅಧಿಕಾರ ವಹಿಸಿಕೊಂಡಾಗಿನಿಂದ ಭಾರತ-ಚೀನಾ ಗಡಿಯಲ್ಲಿ ಮೂಲಸೌಕರ್ಯಗಳನ್ನು ಬಲಪಡಿಸುವತ್ತ ಗಮನ ಹರಿಸಿದ್ದಾರೆ.

೨೦೦೮-೨೦೧೬ರಲ್ಲಿ ,೩೦೦ ಕೋಟಿ ರೂ.ಗಳಿಂದ ೪೬,೦೦ ಕೋಟಿ ರೂ.ಗಳವರೆಗೆ ಇದ್ದ ಬಿಆರ್‌ಒ ವಾರ್ಷಿಕ ಬಜೆಟ್‌ನಲ್ಲಿ ಗಣನೀಯ ಏರಿಕೆ ಕಂಡಿದ್ದು, ೨೦೨೦ ರಲ್ಲಿ ೧೧,೦೦೦ ಕೋಟಿ ರೂ.ಗೆ ತಲುಪಿದೆ ಎಂಬುದು ಸರ್ಕಾರದ ಕಠಿಣ ಕ್ರಮದ ಪ್ರತಿಫಲನವಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

೪೪ ಸೇತುವೆಗಳನ್ನು ಔಪಚಾರಿಕವಾಗಿ ಉದ್ಘಾಟಿಸುವ ಸೋಮವಾರದ ಕಾರ್ಯಕ್ರಮದಲ್ಲಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬಿಆರ್‌ಒ ಮತ್ತು ಅದರ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಹರ್ಪಾಲ್ ಸಿಂಗ್ ಅವರ ಗುರಿಗಳನ್ನು ಅತ್ಯಂತ ಪ್ರತಿಕೂಲ ಭೂಪ್ರದೇಶ ಮತ್ತು ಹವಾಮಾನ ಪರಿಸ್ಥಿತಿಗಳಲ್ಲಿ ತಲುಪಿಸಿದ್ದಕ್ಕಾಗಿ ಪ್ರಶಂಸೆಯನ್ನು ವ್ಯಕ್ತಪಡಿಸಿದರು.

ವರ್ಷದ ಆರಂಭದಲ್ಲಿ ಪೂರ್ಣಗೊಂಡ ೧೦ ಸೇತುವೆಗಳ ಜೊತೆಗೆ ಸೋಮವಾರ ಉದ್ಘಾಟಿಸಲಾದ ೪೪ ಸೇತುವೆಗಳು ಸೇರಿ ಒಟ್ಟು ೫೫ ಸೇತುವೆಗಳು ಇದೀಗ ಸಜ್ಜಾಗಿವೆ ಎಂದು ಬಿಆರ್‌ಒ ಲೆಫ್ಟಿನೆಂಟ್ ಜನರಲ್ ಹರ್ಪಾಲ್ ಸಿಂಗ್ ಹೇಳಿದರು.

೪೪ ಸೇತುವೆಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ೧೦, ಲಡಾಖ್‌ನ , ಹಿಮಾಚಲ ಪ್ರದೇಶದ , ಪಂಜಾಬಿನ , ಉತ್ತರಾಖಂಡದ , ಅರುಣಾಚಲ ಪ್ರದೇಶದ ಮತ್ತು ಸಿಕ್ಕಿಂನ ಸೇತುವೆಗಳು ಸೇರಿವೆ.

"ಬಿಆರ್‌ಒ ನಿರ್ಮಿಸಿದ ವಿವಿಧ ವ್ಯಾಪ್ತಿಯ ಸೇತುವೆಗಳು ೩೦ ಮೀಟರ್ ನಿಂದ ೪೮೪ ಮೀಟರ್ ವರೆಗೆ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಹೊಂದಿವೆ ಮತ್ತು ಗಡಿ ಪ್ರದೇಶಗಳಲ್ಲಿ ಭಾರೀ ನಾಗರಿಕ ಮತ್ತು ಮಿಲಿಟರಿ ಸಂಚಾರಕ್ಕೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ" ಎಂದು ಹರ್ಪಾಲ್ ಸಿಂಗ್ ಹೇಳಿದರು.

No comments:

Advertisement