ಲೆಹ್ ತಪ್ಪು ನಕ್ಷೆ ವಿವಾದ: ಟ್ವಿಟ್ಟರಿಗೆ ಕೇಂದ್ರ ನೋಟಿಸ್
ನವದೆಹಲಿ: ಲೆಹ್ ಭಾಗವನ್ನು ಲಡಾಖ್ ಕೇಂದ್ರಾಡಳಿತ ಪ್ರದೇಶದ ಭಾಗವಾಗಿ ತೋರಿಸುವ ಬದಲು ಜಮ್ಮು ಮತ್ತು ಕಾಶ್ಮೀರದ ಭಾಗವಾಗಿ ತೋರಿಸಿದ್ದಕ್ಕಾಗಿ ಕೇಂದ್ರ ಸರ್ಕಾರವು 2020 ನವೆಂಬರ್ ೯ ರ ಸೋಮವಾರ ಟ್ವಿಟ್ಟರ್ ಗೆ ನೋಟಿಸ್ ಜಾರಿ ಮಾಡಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊರಡಿಸಿರುವ ನೋಟಿಸ್,
ಮೈಕ್ರೋಬ್ಲಾಗಿಂಗ್ ಸೈಟ್ಗೆ ಐದು ದಿನಗಳಲ್ಲಿ ವಿವರಣೆ ನೀಡಲು ಸೂಚನೆ ನೀಡಿದೆ ಎಂದು ಸುದ್ದಿ ಸಂಸ್ಥೆಯ ವರದಿ ತಿಳಿಸಿದೆ.
ಭಾರತದ ಪ್ರಾದೇಶಿಕ ಸಮಗ್ರತೆಗೆ ಅಗೌರವ ತೋರಿದ ಕಾರಣ ಅದರ ವಿರುದ್ಧ ಕಾನೂನು ಕ್ರಮಗಳನ್ನು ಏಕೆ ಕೈಗೊಳ್ಳಬಾರದು ಎಂಬುದಕ್ಕೆ ಉತ್ತರ ನೀಡುವಂತೆ ನೋಟಿಸ್ ಸೂಚನೆ ಕೊಟ್ಟಿದೆ.
ಟ್ವಿಟರ್ನ ಜಾಗತಿಕ ಉಪಾಧ್ಯಕ್ಷರಿಗೆ ಭಾರತದ ರಾಷ್ಟ್ರೀಯ ಸೈಬರ್ ಸಮನ್ವಯ ಕೇಂದ್ರದ ನಿರ್ದೇಶಕರು ಈ ನೋಟಿಸ್ ಕಳುಹಿಸಿದ್ದಾರೆ ಎಂದು ವರದಿ ತಿಳಿಸಿದೆ.
"ಸಾರ್ವಜನಿಕ ಸಂಭಾಷಣೆಯನ್ನು ಪೂರೈಸುವಲ್ಲಿ ಭಾರತ ಸರ್ಕಾರ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದೊಂದಿಗೆ ಸಹಭಾಗಿತ್ವಕ್ಕೆ ಟ್ವಿಟ್ಟರ್ ಬದ್ಧವಾಗಿದೆ.
ನಾವು ಪತ್ರಕ್ಕೆ ಸರಿಯಾಗಿ ಪ್ರತಿಕ್ರಿಯಿಸಿದ್ದೇವೆ ಮತ್ತು ನಮ್ಮ ಪತ್ರವ್ಯವಹಾರದ ಭಾಗವಾಗಿ ಜಿಯೋ-ಟ್ಯಾಗ್ ಸಮಸ್ಯೆಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳೊಂದಿಗೆ ಸಮಗ್ರ ನವೀಕರಣವನ್ನು ಹಂಚಿಕೊಂಡಿದ್ದೇವೆ’ ಎಂದು ಟ್ವಿಟರ್ ವಕ್ತಾರರು ಹೇಳಿದರು.
ಟ್ವಿಟ್ಟರ್ ಈ ಹಿಂದೆ ಲೆಹ್ ಭಾಗವನ್ನು ಚೀನಾದ ಭಾಗವಾಗಿ ತೋರಿಸಿತ್ತು.
ಇದರ ವಿರುದ್ಧ ಸಚಿವಾಲಯದ ಕಾರ್ಯದರ್ಶಿಯವರು ಟ್ವಿಟ್ಟರ್ ಸಿಇಒ ಜ್ಯಾಕ್ ಡಾರ್ಸಿಗೆ ಆಕ್ಷೇಪಣೆ ಸಲ್ಲಿಸಿದ್ದರು.
ಇದಕ್ಕೆ ಪ್ರತಿಕ್ರಿಯೆಯಾಗಿ,
ಟ್ವಿಟ್ಟರ್ ದೋಷವನ್ನು ಸರಿಪಡಿಸಿದೆ.
ಆದರೆ ಲೆಹ್ ಅನ್ನು ಕೇಂದ್ರಾಡಳಿತ ಪ್ರದೇಶವಾದ ಲಡಾಖ್ನ ಭಾಗವಾಗಿ ತೋರಿಸಲು ಇದು ಇನ್ನೂ ನಕ್ಷೆಯನ್ನು ಸರಿಪಡಿಸಿಲ್ಲ.
ಸಚಿವಾಲಯದ ಕಾರ್ಯದರ್ಶಿ ಅಜಯ್ ಸಾಹ್ನಿ ಬರೆದಿರುವ ಹಿಂದಿನ ಪತ್ರವು ಭಾರತದ ನಕ್ಷೆಯ ತಪ್ಪಾಗಿ ನಿರೂಪಿಸುವುದನ್ನು ಸರಿಪಡಿಸುವಂತೆ ಟ್ವಿಟ್ಟರಿಗೆ ಒತ್ತಾಯಿಸಿತ್ತು,
ಡೋರ್ಸಿಗೆ ಲೆಹ್ ಕೇಂದ್ರ ಪ್ರಾಂತ್ಯದ ಲಡಾಖ್ನ ಪ್ರಧಾನ ಕಚೇರಿ ಎಂಬುದನ್ನು ನೆನಪಿಸಿತ್ತು.
ಲಡಾಖ್ ಹಾಗೂ ಜಮ್ಮು ಮತ್ತು ಕಾಶ್ಮೀರ ಎರಡೂ ಭಾರತದ ಅವಿಭಾಜ್ಯ ಮತ್ತು ಅಳಿಸಲಾಗದ ಭಾಗಗಳಾಗಿವೆ ಮತ್ತು ಇದನ್ನು ಭಾರತೀಯ ಸಂವಿಧಾನ ನಿಯಂತ್ರಿಸುತ್ತದೆ
ಎಂದು ಪತ್ರ ಹೇಳಿತ್ತು.
ಇಂತಹ ತಪ್ಪು ನಿರೂಪಣೆಯು ಟ್ವಿಟರ್ನ ಪ್ರತಿಷ್ಠೆಗೆ ಕಳಂಕ ತರುತ್ತದೆ ಎಂದು ಸಾಹ್ನಿ ಎಚ್ಚರಿಸಿದ್ದು,
ಸರ್ಕಾರದ ಪರವಾಗಿ ಭಾರತೀಯರ ಸೂಕ್ಷ್ಮತೆಗಳನ್ನು ಗೌರವಿಸುವಂತೆ ಒತ್ತಾಯಿಸಿದ್ದಾರೆ.
ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಅಗೌರವ ತೋರಿಸಲು ಸಾಮಾಜಿಕ ಮಾಧ್ಯಮ ದೈತ್ಯರು ಮಾಡುವ ಯಾವುದೇ ಪ್ರಯತ್ನವು ಸ್ವೀಕಾರಾರ್ಹವಲ್ಲ ಮತ್ತು ಕಾನೂನುಬಾಹಿರವಾದದ್ದು ಎಂದು ಕೂಡಾ ಸಾಹ್ನಿ ಬರೆದಿದ್ದರು.
No comments:
Post a Comment