ಕೋವಿಡ್ -೧೯ ಲಸಿಕೆ: ನ್ಯಾಯಯುತ ವಿತರಣೆಗೆ ಬ್ರಿಕ್ಸ್ ಕರೆ
ನವದೆಹಲಿ: ಕೋವಿಡ್ -೧೯ ಲಸಿಕೆಗಳಿಗೆ ಪೇಟೆಂಟ್ ರಕ್ಷಣೆಯನ್ನು ಮನ್ನಾ ಮಾಡುವ ಪ್ರಸ್ತಾಪವನ್ನು ವಿಶ್ವ ವಾಣಿಜ್ಯ ಸಂಸ್ಥೆಯಲ್ಲಿ (ಡಬ್ಲ್ಯೂಟಿಒ) ಭಾರತ ಮತ್ತು ದಕ್ಷಿಣ ಆಫ್ರಿಕಾ ಕೈಗೆತ್ತಿಕೊಳ್ಳುವುದಕ್ಕೆ ಮುಂಚಿತವಾಗಿಯೇ, ಬ್ರೆಜಿಲ್-ರಷ್ಯಾ-ಭಾರತ-ಚೀನಾ-ದಕ್ಷಿಣ ಆಫ್ರಿಕಾ (ಬ್ರಿಕ್ಸ್) ಗುಂಪು ‘ನ್ಯಾಯಯುತ, ಸಮಾನ ಮತ್ತು ಕೈಗೆಟುಕುವ’ ರೀತಿಯಲ್ಲಿ ಲಸಿಕೆಗಳ ವಿತರಣೆಗಾಗಿ ಶ್ರಮಿಸುವುದಾಗಿ 2020 ನವೆಂಬರ್ 18ರ ಬುಧವಾರ ಘೋಷಿಸಿತು.
ಮಂಗಳವಾರ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ, ಲಸಿಕೆಗಳಿಗೆ ಬೌದ್ಧಿಕ ಆಸ್ತಿ ಒಪ್ಪಂದಗಳಿಂದ ವಿನಾಯಿತಿ ಪಡೆಯಲು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡೆಸಿದ ಯತ್ನವನ್ನು ಬೆಂಬಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಆಗ್ರಹಿಸಿದ್ದರು.
ಲಸಿಕೆಗಳನ್ನು ಬೌದ್ಧಿಕ ಆಸ್ತಿ ಒಪ್ಪಂದಗಳಿಂದ ಮತ್ತು ಪೇಟೆಂಟ್ ರಕ್ಷಣೆಯಿಂದ ಹೊರಗಿಡಬೇಕು ಎಂಬ ಈ ಪ್ರಸ್ತಾಕ್ಕೆ ಈಗಾಗಲೇ ಅಮೆರಿಕ ಮತ್ತು ಐರೋಪ್ಯ ಒಕ್ಕೂಟ (ಇಯು) ಸದಸ್ಯ ರಾಷ್ಟ್ರಗಳು ಸೇರಿದಂತೆ ಅಭಿವೃದ್ಧಿ ಹೊಂದಿದ ದೇಶಗಳಿಂದ ವಿರೋಧ ವ್ಯಕ್ತವಾಗಿದೆ.
ವಿಶ್ವ ವಾಣಿಜ್ಯ ಸಂಸ್ಥೆಯ (ಡಬ್ಲ್ಯುಟಿಒ) ಬೌದ್ಧಿಕ ಆಸ್ತಿ ಹಕ್ಕುಗಳ (ಟಿಆರ್ಪಿಎಸ್) ವ್ಯಾಪಾರ-ಸಂಬಂಧಿತ ಅಂಶಗಳು ಶುಕ್ರವಾರ ಪೇಟೆಂಟ್ ರಕ್ಷಣೆ ಮನ್ನಾ ಮಾಡುವ ಪ್ರಸ್ತಾಪವನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ ಎಂದು ಸುದ್ದಿ ಮೂಲಗಳು ಬುಧವಾರ ತಿಳಿಸಿವೆ.
ಬ್ರಿಕ್ಸ್ ಶೃಂಗಸಭೆಯ ಮುಕ್ತಾಯದಲ್ಲಿ ಅಂಗೀಕರಿಸಿದ ಮಾಸ್ಕೋ ಘೋಷಣೆಯು ಗುಂಪಿನ ಸದಸ್ಯರು "[ಲಸಿಕೆ] ಲಭ್ಯವಾದಾಗ ಅದನ್ನು ಸಮಾನವಾಗಿ, ನ್ಯಾಯಸಮ್ಮತ ಮತ್ತು ಕೈಗೆಟುಕುವ ಆಧಾರದ ಮೇಲೆ ವಿತರಣೆ ಮಾಡುವ ಬಗ್ಗೆ ಖಚಿತಪಡಿಸಿಕೊಳ್ಳಲು ಶ್ರಮಿಸುತ್ತದೆ" ಎಂದು ಹೇಳಿದೆ. ಮಾಸ್ಕೋ ಘೋಷಣೆಯು ಭಾರತ ಮತ್ತು ದಕ್ಷಿಣ ಆಫ್ರಿಕಾದ ಪ್ರಸ್ತಾಪದ ಬಗ್ಗೆ ಯಾವುದೇ ನೇರ ಉಲ್ಲೇಖವನ್ನು ಮಾಡಿಲ್ಲ.
ಕೊರೊನಾವೈರಸ್ ಹರಡುವುದನ್ನು ತಡೆಗಟ್ಟುವಲ್ಲಿ ಮತ್ತು ನಿಗ್ರಹಿಸುವಲ್ಲಿ ‘ವ್ಯಾಪಕವಾದ ರೋಗನಿರೋಧಕ’ ದ ಮಹತ್ವವನ್ನು ಈ ಘೋಷಣೆಯು ಗುರುತಿಸಿತು ಮತ್ತು ಲಸಿಕೆ ಮತ್ತು ಚಿಕಿತ್ಸಕಗಳ ಸಂಶೋಧನೆ, ಅಭಿವೃದ್ಧಿ ಮತ್ತು ಉತ್ಪಾದನೆಯನ್ನು ತ್ವರಿತಗೊಳಿಸಲು ಸಹಕಾರಿ ವಿಧಾನಗಳನ್ನು ಬೆಂಬಲಿಸಿತು.
ಮಂಗಳವಾರ ನಡೆದ ಆನ್ಲೈನ್ ಚರ್ಚೆಯಲ್ಲಿ ಭಾಗವಹಿಸಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಲಸಿಕೆಗಳನ್ನು ಕೈಗೆಟುಕುವಂತೆ ಮತ್ತು ವಿಶ್ವದಾದ್ಯಂತ ಜನರಿಗೆ ಲಭ್ಯವಾಗುವಂತೆ ಮಾಡಲು ಭಾರತವು ಸರ್ವ ಪ್ರಯತ್ನಗಳನ್ನು ಮಾಡುತ್ತದೆ ಎಂದು ಹೇಳಿದ್ದರು.
ಅಕ್ಟೋಬರ್ ೨ ರಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ಟಿಆರ್ಪಿಎಸ್ ಕೌನ್ಸಿಲ್ಗೆ ಸಲ್ಲಿಸಿದ ಪ್ರಸ್ತಾವನೆಯಲ್ಲಿ ’ಲಸಿಕೆಗಳು ಮತ್ತು ಔಷಧಗಳನ್ನು ಒಳಗೊಂಡಂತೆ ಕೈಗೆಟುಕುವ ವೈದ್ಯಕೀಯ ಉತ್ಪನ್ನಗಳಿಗೆ ಸಮಯೋಚಿತ ಲಭ್ಯತೆಗೆ ಅಥವಾ ಕೋವಿಡ್ -೧೯ ಸಾಂಕ್ರಾಮಿಕವನ್ನು ಎದುರಿಸಲು ಅಗತ್ಯವಾದ ವೈದ್ಯಕೀಯ ಉತ್ಪನ್ನಗಳ ಸಂಶೋಧನೆ, ಅಭಿವೃದ್ಧಿ, ಉತ್ಪಾದನೆ ಮತ್ತು ಪೂರೈಕೆಯನ್ನು ಹೆಚ್ಚಿಸಲು ಪೇಟೆಂಟ್, ಕೈಗಾರಿಕಾ ವಿನ್ಯಾಸಗಳು, ಹಕ್ಕುಸ್ವಾಮ್ಯ ಮತ್ತು ಬಹಿರಂಗಪಡಿಸದ ಮಾಹಿತಿಯ ರಕ್ಷಣೆಯಂತಹ ಬೌದ್ಧಿಕ ಆಸ್ತಿ ಹಕ್ಕುಗಳು ಅಡೆತಡೆಗಳನ್ನು ಸೃಷ್ಟಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಡಬ್ಲ್ಯುಟಿಒ ಸದಸ್ಯರು ಒಟ್ಟಾಗಿ ಕೆಲಸ ಮಾಡುವುದು ಮುಖ್ಯ’ ಎಂದು ತಿಳಿಸಲಾಗಿದೆ.
"ಕೋವಿಡ್ -೧೯ ಸೋಂಕಿಗಾಗಿ ಹೊಸ ರೋಗನಿರ್ಣಯ, ಚಿಕಿತ್ಸಕ ಮತ್ತು ಲಸಿಕೆಗಳನ್ನು ಅಭಿವೃದ್ಧಿಪಡಿಸಿದಂತೆ, ಇವುಗಳು ತ್ವರಿತವಾಗಿ, ಸಾಕಷ್ಟು ಪ್ರಮಾಣದಲ್ಲಿ ಮತ್ತು ಜಾಗತಿಕ ಬೇಡಿಕೆಯನ್ನು ಪೂರೈಸಲು ಕೈಗೆಟುಕುವ ಬೆಲೆಯಲ್ಲಿ ಹೇಗೆ ಲಭ್ಯವಾಗಬೇಕು ಎಂಬ ಬಗ್ಗೆ ಗಮನಾರ್ಹ ಕಾಳಜಿಗಳಿವೆ" ಎಂದು ಪ್ರಸ್ತಾಪವು ಹೇಳಿದೆ.
ಬ್ರಿಕ್ಸ್ ರಾಜ್ಯಗಳಲ್ಲಿ, ರಷ್ಯಾ ಲಸಿಕೆಯನ್ನು ಅನುಮೋದಿಸಿದೆ, ಆದರೆ ಇದನ್ನು ಸಾಕಷ್ಟು ಪರೀಕ್ಷೆಯಿಲ್ಲದೆ ಮಾಡಲಾಗಿದೆ ಎಂದು ತಜ್ಞರು ಹೇಳುತ್ತಾರೆ, ಮತ್ತು ಚೀನಾ ಮೂರು ಲಸಿಕೆಗಳಿಗೆ ತುರ್ತು ಅನುಮೋದನೆಯನ್ನು ನೀಡಿದೆ, ಇದರಲ್ಲಿ ಒಂದು ಮಿಲಿಟರಿ ಸಿಬ್ಬಂದಿಗೆ ಮಾತ್ರ. ಭಾರತದಲ್ಲಿ ಮೂರು ಲಸಿಕೆಗಳು ಇವೆ, ಅದು ಮಾನವ ಪ್ರಯೋಗದಲ್ಲಿದೆ.
ಪ್ರಸ್ತುತ ಭಾರತ-ಚೀನಾ ಸಂಬಂಧಗಳ ಹೊರತಾಗಿಯೂ, ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಕೂಡ ಬ್ರಿಕ್ಸ್ ಶೃಂಗಸಭೆಯಲ್ಲಿ ಲಸಿಕೆಗಳ ಬಗ್ಗೆ ಭಾರತದೊಂದಿಗೆ ಕೆಲಸ ಮಾಡಲು ಮುಂದಾದರು. "ಚೀನೀ ಕಂಪೆನಿಗಳು ತಮ್ಮ ರಷ್ಯನ್ ಮತ್ತು ಬ್ರೆಜಿಲಿಯನ್ ಪಾಲುದಾರರೊಂದಿಗೆ ಲಸಿಕೆಗಳ ಹಂತ -೩ ಕ್ಲಿನಿಕಲ್ ಪ್ರಯೋಗಗಳಲ್ಲಿ ಕೆಲಸ ಮಾಡುತ್ತಿವೆ ಮತ್ತು ದಕ್ಷಿಣ ಆಫ್ರಿಕಾ ಮತ್ತು ಭಾರತದೊಂದಿಗೆ ಸಹಕರಿಸಲು ನಾವು ಸಿದ್ಧರಿದ್ದೇವೆ" ಎಂದು ಕ್ಷಿ ಹೇಳಿದರು.
ಅಭಿವೃದ್ಧಿಶೀಲ ರಾಷ್ಟ್ರಗಳು ಸಹಾಯಕ್ಕಾಗಿ ಭಾರತದ ವ್ಯಾಪಕವಾದ ಲಸಿಕೆ ತಯಾರಿಕೆ ಮತ್ತು ವಿತರಣಾ ಸಾಮರ್ಥ್ಯಗಳನ್ನು ನೋಡುತ್ತಿವೆ ಮತ್ತು ಲಸಿಕೆಗಳ ಬಗ್ಗೆ ಸಂಭಾವ್ಯ ಸಹಯೋಗವನ್ನು ಚರ್ಚಿಸಲು ಸರ್ಕಾರವು ನವೆಂಬರ್ ೬ ರಂದು ರಾಜತಾಂತ್ರಿಕರಿಗೆ ವಿಶೇಷ ವಿವರಣೆಯನ್ನು ನೀಡಿತ್ತು.
No comments:
Post a Comment