Tuesday, November 24, 2020

ಕೊರೋನಾ ನಿಯಂತ್ರಣಕ್ಕೆ ೩ ಅಂಶ: ಮುಖ್ಯಮಂತ್ರಿಗಳಿಗೆ ಅಮಿತ್ ಶಾ ಗುರಿ

 ಕೊರೋನಾ  ನಿಯಂತ್ರಣಕ್ಕೆ ಅಂಶ: ಮುಖ್ಯಮಂತ್ರಿಗಳಿಗೆ ಅಮಿತ್ ಶಾ ಗುರಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕೋವಿಡ್ -೧೯ ವಿಮರ್ಶಾ ಸಭೆಯಲ್ಲಿ  2020 ನವೆಂಬರ್  24ರ ಮಂಗಳವಾರ  ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿಗಳಿಗೆ ಕೊರೋನಾ ನಿಯಂತ್ರಣಕ್ಕಾಗಿ -ಪಾಯಿಂಟ್ ಗುರಿಯನ್ನು ನಿಗದಿ ಪಡಿಸಿದರು.

ಕೋವಿಡ್ -೧೯ರಿಂದ ಸಂಭವಿಸುವ ಮರಣ ಪ್ರಮಾಣವು ಶೇಕಡಾ ೧ಕ್ಕಿಂತ ಕಡಿಮೆಯಾಗುವಂತೆ ನೋಡಿಕೊಳ್ಳಲು ಮತ್ತು ಹೊಸ ಪ್ರಕರಣಗಳು ಶೇಕಡಾ ೫ನ್ನು ಮೀರದಂತೆ ಖಚಿತಪಡಿಸಿಕೊಳ್ಳಲು ಅಮಿತ್ ಶಾ ಅವರು ಎಲ್ಲ  ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳನ್ನು ಕೋರಿದರು.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ನಡೆಸಿದ ವಾಸ್ತವ ಪರಿಶೀಲನಾ ಸಭೆಯಲ್ಲಿ ಷಾ ಮನವಿ ಮಾಡಿದ ಶಾ ಅವರು, ’ಕಂಟೈನ್ ಮೆಂಟ್ ವಲಯಗನ್ನು ಚುರುಕುಗೊಳಿಸುವುದು ಮುಖ್ಯಮಂತ್ರಿಗಳು ಕೈಗೊಳ್ಳಬೇಕಾದ ಪ್ರಮುಖ ಹೆಜ್ಜೆ ಎಂದು ಹೇಳಿದರು.

ಅಧಿಕಾರಿಗಳು ಪ್ರತಿ ವಾರ ಕೆಂಪು ವಲಯಗಳಿಗೆ ಭೇಟಿ ನೀಡಬೇಕು ಮತ್ತು ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ನಿರ್ದಿಷ್ಟ ಪ್ರದೇಶದ ಸ್ಥಿತಿಯನ್ನು ಬದಲಾಯಿಸಬೇಕು ಎಂದು ಶಾ ನುಡಿದರು. ಪ್ರಸ್ತುತ, ಕಂಟೈನ್ಮೆಂಟ್ ವಲಯಗಳಿಂದ ಹದಿನೈದು ದಿನಗಳವರೆಗೆ ಮಾಹಿತಿ ಸಂಗ್ರಹಿಸಲಾಗುತ್ತದೆ.

ಎಲ್ಲ ಮೂರು ಗುರಿಗಳನ್ನು ಶೀಘ್ರವಾಗಿ ಸಾಧಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವಂತೆ ಕೇಂದ್ರ ಗೃಹ ಸಚಿವರು ಮುಖ್ಯಮಂತ್ರಿಗಳಿಗೆ ಸೂಚಿಸಿದರು.

ಭಾರತದ ಕೋವಿಡ್ -೧೯ ಒಟ್ಟು ಪ್ರಕರಣಗಳು .೧೭ ದಶಲಕ್ಷವನ್ನು ಮೀರಿದೆ ಸಂದರ್ಭದಲ್ಲಿ ಪರಿಶೀಲನಾ ಸಭೆ ನಡೆಯಿತು. ಸೋಂಕುಗಳ ಹೆಚ್ಚಳ ಮತ್ತು ಮುಂಬರುವ ತಿಂಗಳುಗಳಲ್ಲಿ ಪ್ರಕರಣಗಳ ಹೆಚ್ಚಳವನ್ನು ಎದುರಿಸಲು ತಮ್ಮ ಸನ್ನದ್ಧತೆಯನ್ನು ತಿಳಿಸಲು ರಾಜ್ಯಗಳಿಗೆ ಮತ್ತು ಕೇಂದ್ರ ಸರ್ಕಾರಗಳಿಗೆ ಸೋಮವಾರ ಸುಪ್ರೀಂ ಕೋರ್ಟ್ ಎರಡು ದಿನಗಳ ಕಾಲಾವಕಾಶ ನೀಡಿತ್ತು. ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠವು ದೆಹಲಿ, ಮಹಾರಾಷ್ಟ್ರ, ಗುಜರಾತ್ ಮತ್ತು ಅಸ್ಸಾಮಿನಲ್ಲಿನ ಹಾಲಿ ಕೊರೋನಾ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು.

ಕೋವಿಡ್ -೧೯ ಪರಿಶೀಲನಾ ಸಭೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನೆರೆಯ ರಾಜ್ಯಗಳಲ್ಲಿ ಬೆಳೆತ್ಯಾಜ್ಯ/ ಕೂಳೆ ಸುಡುವುದರಿಂದ ಉಂಟಾಗುವ ಮಾಲಿನ್ಯವು ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ -೧೯ ಮೂರನೇ ಅಲೆ ತೀವ್ರಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು. ನವೆಂಬರ್ ೧೦ ರಂದು ದೆಹಲಿಯು ಕೋವಿಡ್ -೧೯ರ ಮೂರನೇ ಅಲೆಯ ಗರಿಷ್ಠ ಮಟ್ಟವನ್ನು ಕಂಡಿದೆ. ಆದಿನ ,೬೦೦ ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಬಳಿಕ  ಪ್ರಕರಣಗಳು ಮತ್ತು ಸಕಾರಾತ್ಮಕತೆಯ ಪ್ರಮಾಣವು ಸ್ಥಿರವಾಗಿ ಕಡಿಮೆಯಾಗುತ್ತಿದೆ ಎಂದು ಕೇಜ್ರಿವಾಲ್ ಮಾಹಿತಿ ನೀಡಿದರು.

ರಾಜ್ಯಗಳಲ್ಲಿನ ಕೂಳೆ ಸುಡುವಿಕೆಯಿಂದ ನಗರದಲ್ಲಿ ಉಂಟಾಗುತ್ತಿರುವ ಮಾಲಿನ್ಯವನ್ನು ತೊಡೆದುಹಾಕಲು ಮಧ್ಯಪ್ರವೇಶ ಮಾಡುವಂತೆ ಕೇಜ್ರಿವಾಲ್ ಅವರು ಪ್ರಧಾನಿ ಮೋದಿ ಅವರನ್ನು ಕೋರಿದರು. ಕೊರೋವೈರಸ್ ರೋಗಿಗಳಿಗೆ ದೆಹಲಿಯ ಕೇಂದ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚುವರಿ ,೦೦೦ ಐಸಿಯು ಹಾಸಿಗೆಗಳನ್ನು ಮೀಸಲಿಡುವಂತೆಯೂ ಅವರು ಮನವಿ ಮಾಡಿದರು.

ಪಶ್ಚಿಮ ಬಂಗಾಳದ ಪರಿಸ್ಥಿತಿ ಕುರಿತು ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜ್ಯದ ಜನರು ವೈರಲ್ ಸೋಂಕಿನ ಬಗ್ಗೆ ಅಜ್ಞಾನ ಹೊಂದಿದ್ದಾರೆ ಮತ್ತು ಮುಖಗವಸು ಧರಿಸುವಂತಹ ಶಿಷ್ಟಾಚಾರಗಳ ಅನುಸರಣೆಯನ್ನು ನಿಲ್ಲಿಸಿದ್ದಾರೆ. ಕೋವಿಡ್ -೧೯ ಸಾಂಕ್ರಾಮಿಕ ರೋಗವು ಮುಗಿದಿದೆ ಎಂದು ಇಲ್ಲಿನ ಜನರು ಭಾವಿಸಿದ್ದಾರೆ ಎಂದು ಹೇಳಿದರು.

ಉತ್ತರ ೨೪ ಪರಗಣ ಜಿಲ್ಲೆಯಲ್ಲಿ ಮಾತ್ರ ಜನರು ಮುಖಗವಸುಗಳನ್ನು ಧರಿಸುತ್ತಾರೆ ಮತ್ತು ಬಂಕುರಾದಲ್ಲಿ ಯಾರೂ ಮುನ್ನೆಚ್ಚರಿಕೆಗಳ ವಹಿಸುವುದಿಲ್ಲ ಎಂದು ಅವರು ನುಡಿದರು.

ಸಭೆಯಲ್ಲಿ ಬ್ಯಾನರ್ಜಿಯವರು ರಾಜ್ಯಗಳ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಬಾಕಿಗಳನ್ನು ಕೇಂದ್ರದಿಂದ ತೆರವುಗೊಳಿಸುವಂತೆ ಕೇಳಿಕೊಂಡರು. ಅವರು ಮಾತ್ರವೇ ವಿಷಯವನ್ನು ಸಭೆಯಲ್ಲಿ ಪ್ರಸ್ತಾಪಿಸಿದರು.

ಆರೋಗ್ಯ ಸಚಿವ ರ್ಷ ವರ್ಧನ್, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಛತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಸಭೆಯಲ್ಲಿ ಭಾಗವಹಿಸಿದ್ದರು.

No comments:

Advertisement