Tuesday, November 17, 2020

ಸುರ್ಜೆವಾಲ ಹೇಳಿಕೆ: ಕಾಂಗ್ರೆಸ್ ಗುಪ್ಕರ್ ಮೈತ್ರಿಕೂಟದ ಭಾಗವಲ್ಲ

 ಸುರ್ಜೆವಾಲ ಹೇಳಿಕೆ: ಕಾಂಗ್ರೆಸ್ ಗುಪ್ಕರ್ ಮೈತ್ರಿಕೂಟದ ಭಾಗವಲ್ಲ

ನವದೆಹಲಿ: ಕಾಂಗ್ರೆಸ್ ಪಕ್ಷವು ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್ ಮೈತ್ರಿಕೂಟದ
(ಪಿಎಜಿಡಿ) ಭಾಗವಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು 2020 ನವೆಂಬರ್ 17ರ ಮಂಗಳವಾರ ಹೇಳಿದರು.

ಗುಪ್ಕರ್ ಮೈತ್ರಿಕೂಟವನ್ನು ಬೆಂಬಲಿಸುವ ಬಗೆಗಿನ ನಿಲುವನ್ನು ಸ್ಪಷ್ಟ ಪಡಿಸುವಂತೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ಮುಖಂಡ ರಾಹುಲ್ ಗಾಂಧಿ ಅವರನ್ನು ಆಗ್ರಹಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸುರ್ಜೆವಾಲಾ ತರಾಟೆಗೆ ತೆಗೆದುಕೊಂಡರು.

ಹಿಂದಿಯಲ್ಲಿ ಹೇಳಿಕೆ ನೀಡಿದ ಸುರ್ಜೆವಾಲಾ, "ಕಾಂಗ್ರೆಸ್ ಪಕ್ಷವು ಗುಪ್ಕರ್ ಮೈತ್ರಿಕೂಟದ ಭಾಗವಲ್ಲ ಅಥವಾ ಗುಪ್ಕರ್ ಘೋಷಣೆಗಾಗಿ ಪೀಪಲ್ಸ್ ಅಲೈಯನ್ಸ್ ಜೊತೆ ಸೇರಿಲ್ಲಎಂದು ನುಡಿದರು.

ಸುಳ್ಳನ್ನು ಹರಡುವುದು, ವಂಚನೆ ಮತ್ತು ಹೊಸ ಭ್ರಮೆಗಳನ್ನು ಸೃಷ್ಟಿಸುವುದು ಮೋದಿ ಸರ್ಕಾರದ ಮಾರ್ಗವಾಗಿದೆ. ಗೃಹ ಸಚಿವ ಅಮಿತ್ ಶಾ ಅವರು ರಾಷ್ಟ್ರೀಯ ಭದ್ರತೆಯ ಜವಾಬ್ದಾರಿಯನ್ನು ಬದಿಗಿಟ್ಟು ಜಮ್ಮು, ಕಾಶ್ಮೀರ ಮತ್ತು ಲಡಾಖ್ ಬಗ್ಗೆ ಸುಳ್ಳು ಹಾಗೂ ದಾರಿತಪ್ಪಿಸುವ ಮತ್ತು ಚೇಷ್ಟೆಯ ಹೇಳಿಕೆಗಳನ್ನು ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿಎಂದು ಟೀಕಿಸುವ ಮೂಲಕ ಅವರು ಕೇಂದ್ರದ ಬಿಜೆಪಿ ಸರ್ಕಾgಕ್ಕೆ ಚಾಟಿ ಬೀಸಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಡಿಡಿಸಿ ಚುನಾವಣೆಯ ವಿರುದ್ಧ ಕಾಂಗ್ರೆಸ್ ಹೋರಾಡುತ್ತಿದೆ ಎಂದು ಪ್ರತಿಪಾದಿಸಿದ ಸುರ್ಜೆವಾಲಾ, ’ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾತಾಂತ್ರಿಕ ಚುನಾವಣೆಯನ್ನು ಬೆಂಬಲಿಸುತ್ತದೆ ಮತ್ತು ಉದ್ದೇಶಕ್ಕಾಗಿ ಕಾಂಗ್ರೆಸ್ ಪಕ್ಷವು ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ರೀತಿಯಲ್ಲಿ ಸ್ಪರ್ಧಿಸುತ್ತಿದೆ ಎಂದು ಹೇಳಿದರು.

ಮಧ್ಯೆ, ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯಲ್ಲಿ ಗುಪ್ಕರ್ ಘೋಷಣೆಗಾಗಿ ಪೀಪಲ್ಸ್ ಅಲೈಯನ್ಸ್ ಸ್ಪರ್ಧಿಸಲಿದೆ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಕಾನೂನುಗಳನ್ನು ಬಲವಂತವಾಗಿ ಜಾರಿಗೊಳಿಸುತ್ತಿರುವವರನ್ನು ಸೋಲಿಸಲು ಪ್ರಯತ್ನಿಸುತ್ತೇವೆ ಎಂದು ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಮುಖ್ಯಸ್ಥ ಗುಲಾಮ್ ಅಹ್ಮದ್ ಮೀರ್ ಹೇಳಿದ್ದಾರೆ.

"ಈದಿನ ಫಾರೂಕ್ ಸಾಬ್ (ಫಾರೂಕ್ ಅಬ್ದುಲ್ಲ) ಅವರು ಸಭೆಯನ್ನು ಕರೆದು ಸೀಟು ಹಂಚಿಕೆಗೆ ಅಂತಿಮ ಸ್ಪರ್ಶವನ್ನು ನೀಡಿದರು, ಮತ್ತು ನಾವು ಬಗ್ಗೆ ತೃಪ್ತರಾಗಿದ್ದೇವೆ. ರಾಜಕೀಯದಲ್ಲಿ, ಶೇಕಡಾ ೧೦೦ ರಷ್ಟು ತೃಪ್ತಿಕರವಾದುದು ಏನೂ ಇಲ್ಲ, ಆದರೆ ಇಡೀ ವ್ಯವಸ್ಥೆಯನ್ನು ಅಂತಿಮಗೊಳಿಸಿದ ಶಾಂತಿಯುತ ವಾತಾವರಣವು, ಮೈತ್ರಿಗಳಲ್ಲಿರುವ ಎಲ್ಲಾ ಪಕ್ಷಗಳು ಕಾಯಿದೆಗಳು ಮತ್ತು ಕಾನೂನುಗಳನ್ನು ಬಲವಂತವಾಗಿ ಜಾರಿಗೊಳಿಸುತ್ತಿರುವವರನ್ನು ಸೋಲಿಸಲು ಪ್ರಯತ್ನಿಸುತ್ತವೆ ಎಂಬ ಭರವಸೆ ನೀಡುತ್ತದೆ. ಕೇಂದ್ರಾಡಳಿತ ಮತ್ತು ನೀತಿಗಳಲ್ಲಿ ಜನರ ಪರವಾಗಿ ಏನೂ ಕಾಣುತ್ತಿಲ್ಲಎಂದು ಶ್ರೀನಗರದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಅವರ ನಿವಾಸದಲ್ಲಿ ನಡೆದ ಸಭೆಯ ಬಳಿಕ ಮೀರ್ ಹೇಳಿದರು.

ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಪೀಪಲ್ಸ್ ಕಾನ್ಫರೆನ್ಸ್ ಮತ್ತು ಸಿಪಿಐ (ಎಂ) ಸೇರಿದಂತೆ ಮುಖ್ಯವಾಹಿನಿಯ ಪಕ್ಷಗಳು ಕಳೆದ ತಿಂಗಳು ಪಿಎಜಿಡಿ ರಚಿಸಿದ್ದು, ಮೊದಲ ಡಿಡಿಸಿ ಚುನಾವಣೆಗಳಲ್ಲಿ ಒಟ್ಟಾಗಿ ಹೋರಾಡಲು ನಿರ್ಧರಿಸಿವೆ.

ನವೆಂಬರ್ ೨೮ ಮತ್ತು ಡಿಸೆಂಬರ್ ೧೯ ನಡುವೆ ಎಂಟು ಹಂತಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಡಿಡಿಸಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ ೨೨ ರಂದು ಮತ ಎಣಿಕೆ ನಡೆಯಲಿದೆ.

ಇದಕ್ಕೆ ಮುನ್ನ, ಅಮಿತ್ ಶಾ ಅವರು ಗುಪ್ಕರ್ ಘೋಷಣೆಗಾಗಿ ಪೀಪಲ್ಸ್ ಅಲೈಯನ್ಸ್ ಜಮ್ಮು ಮತ್ತು ಕಾಶ್ಮೀರದಲ್ಲಿ ವಿದೇಶಿ ಪಡೆಗಳು ಮಧ್ಯಪ್ರವೇಶಿಸಬೇಕೆಂದು ಬಯಸುತ್ತಿದೆ ಎಂದು ಹೇಳಿದ್ದರು. ಭಾರತೀಯ ಜನರು ಇನ್ನು ಮುಂದೆ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದಅಪವಿತ್ರ ಜಾಗತಿಕ ಮೈತ್ರಿಯನ್ನು ಸಹಿಸುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದರು.

No comments:

Advertisement