ಕೋವಿಡ್: ಇಂಟರ್ಪೋಲ್ ಸಾಮಾನ್ಯಸಭೆ ಮುಂದೂಡಿಕೆ
ನವದೆಹಲಿ: ಕೋವಿಡ್-೧೯ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ತನ್ನ ೧೯೪ ಸದಸ್ಯರ ಸಾಮಾನ್ಯ ಸಭೆಯನ್ನು ಇಂಟರ್ ಪೋಲ್ ಇದೇ ಮೊದಲ ಬಾರಿಗೆ ಮುಂದೂಡಿದೆ
ಕೊರೊನಾವೈರಸ್ ಕಾಯಿಲೆ (ಕೋವಿಡ್ -೧೯) ಸಾಂಕ್ರಾಮಿಕ ಸಂಬಂಧಿತ ಕಾರಣ ಪ್ರಪಂಚದಾದ್ಯಂತ ಸಂಭವಿಸಿದ ಸಾವುಗಳ ಹಿನ್ನೆಲೆಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ (ಯುಎಇ) ಡಿಸೆಂಬರ್ ತಿಂಗಳಲ್ಲಿ ನಡೆಯಬೇಕಾಗಿದ್ದ ತನ್ನ ೮೯ ನೇ ಸಾಮಾನ್ಯ ಸಭೆಯನ್ನು (ಜಿಎ) ಮುಂದೂಡಲು ಇಂಟರ್ಪೋಲ್ 2020 ನವೆಂಬರ್ 03ರ ಮಂಗಳವಾರ ನಿರ್ಧರಿಸಿತು.
ಎಲ್ಲಾ ೧೯೪ ಸದಸ್ಯ ರಾಷ್ಟ್ರಗಳ ವಾರ್ಷಿಕ ಸಭೆಯಲ್ಲಿ ಭಯೋತ್ಪಾದನೆ, ಸಂಘಟಿತ ಅಪರಾಧಗಳು ಪೊಲೀಸಿಂಗ್ ಮತ್ತು ಕ್ರಿಮಿನಲ್ ನೆಟ್ವರ್ಕ್ಗಳ ಸಹಕಾರ್ದ ಬಗ್ಗೆ ಚರ್ಚೆ ನಡೆಯಬೇಕಾಗಿತ್ತು.
ಇಂಟರ್ಪೋಲ್ನ ಕಾರ್ಯಕಾರಿ ಸಮಿತಿಯು ಈ ವರ್ಷ ವಿಶ್ವದ ಎಲ್ಲಿಯಾದರೂ ೮೯ ನೇ ಸಾಮಾನ್ಯ ಸಭೆಯನ್ನು ನಡೆಸುವುದು ಭೌತಿಕವಾಗಿ ಅಸಾಧ್ಯವೆಂದು ತೀರ್ಮಾನಿಸಿತು.
"ಕಾನೂನು, ತಾಂತ್ರಿಕ ಮತ್ತು ವ್ಯವಸ್ಥಾಪನಾ ಕಾರಣಗಳಿಂದಾಗಿ, ಪ್ರಸ್ತುತ ವರ್ಚುವಲ್ ಸಾಮಾನ್ಯ ಸಭೆಗೆ ಹೊರತಾಗಿ ಬೇರೆ ಯಾವುದೇ ಕಾರ್ಯಸಾಧ್ಯವಾದ ಆಯ್ಕೆಗಳಿಲ್ಲ’ ಎಂದು ಇಂಟರ್ಪೋಲ್ ಹೇಳಿಕೆಯಲ್ಲಿ ತಿಳಿಸಿದೆ.
’ಕೋವಿಡ್ -೧೯ ಸಾಂಕ್ರಾಮಿಕ ರೋಗವು ಪ್ರಸ್ತುತಪಡಿಸಿದ ಸಮಸ್ಯೆಗಳಿಗೆ ಪರಿಹಾರಗಳನ್ನು ಗುರುತಿಸಲು ಯುಎಇ ಅಧಿಕಾರಿಗಳು ಬಹಳ ಶ್ರಮಿಸಿದರು. ಆದಾಗ್ಯೂ, ದುರದೃಷ್ಟವಶಾತ್ ಯೋಜಿಸಿದಂತೆ ಸಾಮಾನ್ಯ ಸಭೆ ನಡೆಸಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ’ ಎಂದು ಇಂಟರ್ಪೋಲ್ನ ಪ್ರಧಾನ ಕಾರ್ಯದರ್ಶಿ ಜುರ್ಗೆನ್ ಸ್ಟಾಕ್ ಹೇಳಿದರು.
’ಸಾಮಾನ್ಯ ಸಭೆ ಮುಂದೂಡಿಕೆಯಾಗಿರುವುದರ ಹೊರತಾಗಿಯೂ, ನಮ್ಮ ೧೯೪ ಸದಸ್ಯ ರಾಷ್ಟ್ರಗಳನ್ನು ಬೆಂಬಲಿಸುವ ದೈನಂದಿನ ಕೆಲಸ, ಎಲ್ಲ ರೀತಿಯ ದೇಶೀಯ ಅಪರಾಧಗಳ ವಿರುದ್ಧದ ಹೋರಾಟ ಮತ್ತು ಭಯೋತ್ಪಾದ ವಿರುದ್ಧ ಸಮರದ ಮೇಲೆ ಸಾಮಾನ್ಯ ಸಭೆ ಮುಂದೂಡಿಕೆಯ ಪರಿಣಾಮ ಬೀರುವುದಿಲ್ಲ’ ಎಂದು ಸ್ಟಾಕ್ ನುಡಿದರು.
ಜಿಎಗೆ ಹೊಸ ದಿನಾಂಕಗಳನ್ನು ಇನ್ನೂ ಘೋಷಿಸಲಾಗಿಲ್ಲ.
ಭಾರತವು ೨೦೨೨ ರಲ್ಲಿ ಇಂಟರ್ಪೋಲ್ನ ೯೧ ನೇ ಸಾಮಾನ್ಯಸಭೆಗೆ ಆತಿಥ್ಯ ವಹಿಸಲಿದೆ. ಸಾಮಾನ್ಯ ಸಭೆಯ ಮುಂದೂಡುವಿಕೆಯು ಭವಿಷ್ಯದ ವಾರ್ಷಿಕ ಸಭೆಗಳ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಿಲ್ಲ.
ಮುಂದೂಡುವಿಕೆಯಿಂದಾಗಿ ಕಾರ್ಯಕಾರಿ ಸಮಿತಿಯು ಅಸಾಧಾರಣವಾಗಿ ಅಂಗೀಕರಿಸಬಹುದಾದ ಬಜೆಟ್ ಜೊತೆಗೆ, ಇತರ ಸಾಮಾನ್ಯ ಸಭೆಯ ಎಲ್ಲ ಶಾಸನಬದ್ಧ ಕ್ರಮಗಳು ಮುಂದಿನ ಸಾಮಾನ್ಯ ಸಭೆಯವರೆಗೂ ಬಾಕಿ ಉಳಿಯುತ್ತವೆ ಎಂದು ಇಂಟರ್ ಪೋಲ್ ಹೇಳಿದೆ.
ಸಾಮಾನ್ಯ ಸಭೆಯು ಇಂಟರ್ಪೋಲ್ನ ಕಾರ್ಯಕಾರಿ ಸಮಿತಿಗೆ ಚುನಾವಣೆ ಮತ್ತು ನಿಯಂತ್ರಣ ಆಯೋಗದ (ಸಿಸಿಸಿ) ಇಂಟರ್ ಪೋಲ್ ಕಡತಗಳನ್ನು ಒಳಗೊಂಡಿದೆ.
ಪರಾರಿಯಾದವರು ಮಂಡಿಸುವ ಪ್ರಸ್ತುತಿಗಳನ್ನು ವಿಶ್ಲೇಷಿಸಿದ ನಂತರ ರೆಡ್ ನೋಟಿಸ್ ಪ್ರಕರಣಗಳನ್ನು ನಿರ್ಧರಿಸಲು ಸಿಸಿಸಿ ಕಡತ ಮುಖ್ಯವಾಗಿದೆ.
ಯಾವುದೇ ಕಾರಣಕ್ಕಾಗಿ ತಮ್ಮ ತಾಯ್ನಾಡಿನಿಂದ ಪಲಾಯನಗೈದ ಆರೋಪಿಗಳು, ರಾಜಕೀಯ ಮತ್ತು ಧಾರ್ಮಿಕ ಕಾರಣಗಳಿಗಾಗಿ ತಮ್ಮ ಮೇಲೆ ಗುರಿ ಇಟ್ಟಿರುವ ಬಗ್ಗೆ, ಇಂಟರ್ ಪೋಲ್ಗೆ ಹೇಳಿಕೊಳ್ಳುವ ಅವಕಾಶವೂ ಇದೆ.
No comments:
Post a Comment