Thursday, November 5, 2020

ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಫೆಬ್ರುವರಿಯಲ್ಲಿ ಬಿಡುಗಡೆ

 ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಫೆಬ್ರುವರಿಯಲ್ಲಿ ಬಿಡುಗಡೆ

ನವದೆಹಲಿ: ಸರ್ಕಾರೀ ಬೆಂಬಲಿತ ಕೋವಿಡ್ -೧೯ ಲಸಿಕೆಯನ್ನು ನಿರೀಕ್ಷೆಗಿಂತ ತಿಂಗಳುಗಳಷ್ಟು ಮುಂಚಿತವಾಗಿ, ಫೆಬ್ರುವರಿಯಲ್ಲಿಯೇ ಬಿಡುಗಡೆ ಮಾಡಿ ಜನರಿಗೆ ನೀಡಲು ಆರಂಭಿಸಬಹುದು ಎಂದು ಸರ್ಕಾರದ ಹಿರಿಯ ವಿಜ್ಞಾನಿಯೊಬ್ಬರು 2020 ನವೆಂಬರ್ 05ರ ಗುರುವಾರ ಇಲ್ಲಿ ತಿಳಿಸಿದರು.

ಲಸಿಕೆಯ ಕೊನೆಯ ಹಂತದ ಪ್ರಯೋಗಗಳು ತಿಂಗಳು ಪ್ರಾರಂಭವಾಗುವುದರಿಂದ ಮತ್ತು ಅಧ್ಯಯನಗಳು ಇದು ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬುದಾಗಿ ಈಗಾಗಲೇ ತೋರಿಸಿರುವುದರಿಂದ ನಿರೀಕ್ಷೆಗಿಂತ ಮೊದಲೇ ಅದು ಬಳಕೆಗೆ ಲಭಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಭಾರತ ಸರ್ಕಾರಿ ಸ್ವಾಮ್ಯದ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ -ಐಸಿಎಂಆರ್) ಜೊತೆಗೆ ಕೋವಾಕ್ಸಿನ್ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿರುವ ಖಾಸಗಿ ಕಂಪನಿಯಾದ ಭಾರತ್ ಬಯೋಟೆಕ್, ಮುಂದಿನ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಇದನ್ನು ಬಿಡುಗಡೆ ಮಾಡಬಹುದು ಎಂದು ಮುನ್ನ ನಿರೀಕ್ಷಿಸಿತ್ತು.

ಕೋವಿಡ್ -೧೯ ಕಾರ್ಯಪಡೆಯ ಸದಸ್ಯರೂ ಆಗಿರುವ ಹಿರಿಯ ಐಸಿಎಂಆರ್ ವಿಜ್ಞಾನಿ ರಜನಿ ಕಾಂತ್ ಅವರು "ಲಸಿಕೆ ಉತ್ತಮ ಪರಿಣಾಮಕಾರಿತ್ವವನ್ನು ತೋರಿಸಿದೆ" ಎಂದು ಸಂಶೋಧನಾ ಸಂಸ್ಥೆಯ ನವದೆಹಲಿ ಕೇಂದ್ರ ಕಚೇರಿಯಲ್ಲಿ ಹೇಳಿದರು.

"ಮುಂದಿನ ವರ್ಷದ ಆರಂಭ, ಫೆಬ್ರ್ರುವರಿ ಅಥವಾ ಮಾರ್ಚ್ ವೇಳೆಗೆ ಲಸಿಕೆ ಲಭ್ಯವಿರುತ್ತದೆ ಎಂದು ನಿರೀಕ್ಷಿಸಲಾಗಿದೆಎಂದು ಅವರು ನುಡಿದರು.

ಆದಾಗ್ಯೂ, ಭಾರತ್ ಬಯೋಟೆಕ್ ಸಂಸ್ಥೆಯನ್ನು ತತ್‌ಕ್ಷಣ ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಸುದ್ದಿ ಸಂಸ್ಥೆ ತಿಳಿಸಿದೆ.

ಫೆಬ್ರ್ರುವರಿಯಲ್ಲಿ ಬಿಡುಗಡೆಯಾಗಲಿರುವ ಕೋವಾಕ್ಸಿನ್ ಭಾರತ ತಯಾರಿಸುತ್ತಿರುವ ಮೊದಲ ಕೊರೋನಾವೈರಸ್ ವಿರೋಧಿ ಲಸಿಕೆಯಾಗಿದೆ.

ಭಾರತzಲ್ಲಿ ಗುರುವಾರ ಕೊರೊನಾವೈರಸ್ ಸೋಂಕಿನ ೫೦,೨೦೧ ಪ್ರಕರಣಗಳು ಹೊಸದಾಗಿ ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ .೩೬ ದಶಲಕ್ಷಕ್ಕೆ ಏರಿತು, ಅಮೆರಿಕದ ನಂತರ ಇದು ಅತಿ ಹೆಚ್ಚು ಕೊರೋನಾಪ್ರಕರಣಗಳು ದಾಖಲಾದ ದೇಶಗಳಲ್ಲಿ ಎರಡನೇಯದಾಗಿದೆ. ಭಾರತದಲ್ಲಿ ಗುರುವಾರ  ೭೦೪ ಸಾವುಗಳು ಸಂಭವಿಸಿದ್ದು ಒಟ್ಟು ಸಾವಿನ ಸಂಖ್ಯೆ ,೨೪,೩೧೫ ಕ್ಕೆ ತಲುಪಿದೆ. ಸೆಪ್ಟೆಂಬರ್ ಮಧ್ಯದಲ್ಲಿ ಗರಿಷ್ಠ ಮಟ್ಟಕ್ಕೆ ಏರಿದ್ದ ದೈನಂದಿನ ಕೋವಿಡ್ ಸೋಂಕು ಪ್ರಕರಣ ಮತ್ತು ಸಾವುಗಳ ಸಂಖ್ಯೆ ಇದೀಗ ಇಳಿಯುತ್ತಿದ್ದು ಕೊರೋನಾ ಪ್ರಸರಣ ವೇಗ ನಿಧಾನಗೊಂಡಿದೆ.

ಐಸಿಎಂಆರ್‌ನ ಸಂಶೋಧನಾ ನಿರ್ವಹಣೆ, ನೀತಿ, ಯೋಜನೆ ಮತ್ತು ಸಮನ್ವಯ ಕೋಶದ ಮುಖ್ಯಸ್ಥರಾಗಿರುವ ರಜನಿ ಕಾಂತ್, ಮೂರನೇ ಹಂತದ ಪ್ರಯೋಗಗಳು ಮುಗಿಯುವ ಮೊದಲೇ ಜನರಿಗೆ ಕೊವಾಕ್ಸಿನ್ ಲಸಿಕೆಯನ್ನು ನೀಡಬಹುದೇ ಎಂಬುದಾಗಿ ನಿರ್ಧರಿಸುವ ಜವಾಬ್ದಾರಿ ಆರೋಗ್ಯ ಸಚಿವಾಲಯದ್ದು ಎಂದು ಹೇಳಿದರು.

"ಕೊವಾಕ್ಸಿನ್ ಹಂತ ಮತ್ತು ಹಂತ ೨ರ ಪ್ರಯೋಗಗಳಲ್ಲಿ ಮತ್ತು ಪ್ರಾಣಿಗಳ ಅಧ್ಯಯನಗಳಲ್ಲಿ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ತೋರಿಸಿದೆ. ಆದ್ದರಿಂದ ಇದು ಸುರಕ್ಷಿತವಾಗಿದೆ ಆದರೆ ಹಂತ ೩ರ ಪ್ರಯೋಗಗಳು ಮುಗಿಯದ ಹೊರತು ನೀವು ಶೇಕಡಾ ೧೦೦ ಖಚಿತತೆ ಪಡೆಯಲು ಸಾಧ್ಯವಿಲ್ಲಎಂದು ಕಾಂತ್ ಹೇಳಿದರು.

ಸ್ವಲ್ಪ ಅಪಾಯವಿರಬಹುದು, ನೀವು ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿದ್ದರೆ, ನೀವು ಲಸಿಕೆ ತೆಗೆದುಕೊಳ್ಳಬಹುದು. ಅಗತ್ಯವಿದ್ದರೆ, ತುರ್ತು ಪರಿಸ್ಥಿತಿಯಲ್ಲಿ ಲಸಿಕೆ ನೀಡುವ ಬಗ್ಗೆ ಸರ್ಕಾರ ಯೋಚಿಸಬಹುದುಎಂದು ಅವರು ನುಡಿದರು.

ವಿಶೇಷವಾಗಿ ವೃದ್ಧರು ಮತ್ತು ಹೆಚ್ಚಿನ ಅಪಾಯದ ಕೆಲಸದ ಸ್ಥಳಗಳಲ್ಲಿರುವ ಜನರಿಗೆ ಕೋವಿಡ್ -೧೯ ಲಸಿಕೆ ನೀಡುವ ಬಗೆಗಿನ ತುರ್ತು ಅಧಿಕಾರವನ್ನು ನೀಡುವ ಬಗ್ಗೆ ಸರ್ಕಾರ ಪರಿಗಣಿಸುತ್ತಿದೆ ಎಂದು ಆರೋಗ್ಯ ಸಚಿವ ಹರ್ಷ ವರ್ಧನ್ ಅವರು ಸೆಪ್ಟೆಂಬರಿನಲ್ಲಿ ಹೇಳಿದ್ದರು.

ಹಲವಾರು ಪ್ರಮುಖ ಲಸಿಕೆ ತಯಾರಕರು ಈಗಾಗಲೇ ಅಂತಿಮ ಹಂತದ ಪರೀಕ್ಷೆ ನಿರತರಾಗಿದ್ದಾರೆ. ಬ್ರಿಟನ್ನಿನ  ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ ಪ್ರಾಯೋಗಿಕ ಲಸಿಕೆ ಅತ್ಯಂತ ಸುಧಾರಿತವಾದದ್ದು, ಮತ್ತು ಡಿಸೆಂಬರ್ ಅಂತ್ಯದಲ್ಲಿ ಅಥವಾ ೨೦೨೧ ಆರಂಭದಲ್ಲಿ ಇದನ್ನು ಬಿಡುಗಡೆ ಮಾಡಬಹುದು ಎಂದು ಬ್ರಿಟನ್ ನಿರೀಕ್ಷಿಸುತ್ತಿದೆ.

ಅಸ್ಟ್ರಾಜೆನೆಕಾ ಸಂಸ್ಥೆಯು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸೇರಿದಂತೆ ವಿಶ್ವಾದ್ಯಂತದ ಕಂಪೆನಿಗಳು ಮತ್ತು ಸರ್ಕಾರಗಳೊಂದಿಗೆ ಹಲವಾರು ಪೂರೈಕೆ ಮತ್ತು ಉತ್ಪಾದನಾ ಒಪ್ಪಂದಗಳಿಗೆ ಸಹಿ ಹಾಕಿದೆ.

ಇತರ ಕೊನೆಯ ಹಂತದ ಲಸಿಕೆಗಳನ್ನು ಮಾಡರ್ನಾ ಇಂಕ್, ಪಾಲುದಾರ ಬಯೋಟೆಕ್ ಎಸ್‌ಇ ಜೊತೆ ಫಿಜರ್ ಇಂಕ್ ಮತ್ತು ಜಾನ್ಸನ್ ಮತ್ತು ಜಾನ್ಸನ್ ಅಭಿವೃದ್ಧಿಪಡಿಸಿದ್ದಾರೆ.

No comments:

Advertisement