ಮಾತುಕತೆ: ರೈತ ಸಂಘಗಳಿಗೆ ಮತ್ತೆ ಕೇಂದ್ರ ಪತ್ರ
ನವದೆಹಲಿ: “ನೀವು ಆಯ್ಕೆ ಮಾಡಿದ ದಿನಾಂಕ ಮತ್ತು ಸಮಯ” ದಲ್ಲಿ ಮಾತುಕತೆಗೆ ಬನ್ನಿ ಎಂದು ಕೇಂದ್ರ ಕೃಷಿ ಸಚಿವಾಲಯವು 2020 ಡಿಸೆಂಬರ್ 24ರ ಗುರುವಾರ ರೈತ ಸಂಘಗಳಿಗೆ ಮತ್ತೊಮ್ಮೆ ಪತ್ರ ಬರೆದು, ಆರನೇ ಸುತ್ತಿನ ಮಾತುಕತೆಗೆ ಆಹ್ವಾನಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಪ್ರತಿಭಟನಾ
ನಿರತ ರೈತರು ಈ ವಿಷಯದಲ್ಲಿ ತನ್ನ
ಹಿಂದಿನ ಪ್ರಸ್ತಾಪವನ್ನು ತಿರಸ್ಕರಿಸಿದ ಒಂದು ದಿನದ ನಂತರ ಸಚಿವಾಲಯವು ಪತ್ರ ಬರೆದಿದೆ. ಸರ್ಕಾರವು "ಹೊಸ ಕಾರ್ಯಸೂಚಿಯನ್ನು ರೂಪಿಸುವವರೆಗೆ" ಯಾವುದೇ ಮಾತುಕತೆಗಳು ನಡೆಯುವುದಿಲ್ಲ ಎಂದು ಪ್ರತಿಭಟನಾ ನಿರತ ರೈತ ಮುಖಂಡರು ಬುಧವಾರ ಹೇಳಿದ್ದರು.
ಕೃಷಿ
ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್ ಅಗರವಾಲ್ ಅವರು ಸಹಿ ಮಾಡಿದ ಪತ್ರದಲ್ಲಿ, ರೈತ ಸಂಘಗಳು ಸರ್ಕಾರದ ಹಿಂದಿನ ಪ್ರಸ್ತಾಪವನ್ನು ತಿರಸ್ಕರಿಸಿ ಸರ್ಕಾರಕ್ಕೆ ಬುಧವಾರ ಕಳುಹಿಸಿದ ಪತ್ರವನ್ನು ಉಲ್ಲೇಖಿಸಿ, ಪ್ರತಿಭಟನಾ ನಿರತ ರೈತರು ಎತ್ತಿದ ಎಲ್ಲ ಸಮಸ್ಯೆಗಳಿಗೆ ‘ತಾರ್ಕಿಕ ಪರಿಹಾರಗಳನ್ನು’ ತಲುಪುವ
ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದೆ. ದೇಶದ ವಿವಿಧ ರೈತರ ಸಂಸ್ಥೆಗಳೊಂದಿಗೆ ಮಾತುಕತೆಗಳನ್ನು ಮುಕ್ತವಾಗಿರಿಸಿಕೊಳ್ಳುವುದು ಸರ್ಕಾರಕ್ಕೆ ನಿರ್ಣಾಯಕವಾಗಿದೆ ಎಂದೂ ಪತ್ರ ಹೇಳಿದೆ.
"ಸರ್ಕಾರವು
ಗೌರವಯುತವಾಗಿ ಮತ್ತು ಮುಕ್ತ ಮನಸ್ಸಿನಿಂದ ಹಲವಾರು ಸುತ್ತಿನ ಮಾತುಕತೆಗಳನ್ನು ನಡೆಸಿದೆ ಮತ್ತು ಮುಂದಿನ ಸುತ್ತಿನ ಮಾತುಕತೆಗಳನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಡೆಸಲು ಪ್ರಸ್ತಾಪಿಸಿದೆ’ ಎಂದು
ಪತ್ರದಲ್ಲಿ ತಿಳಿಸಲಾಗಿದೆ.
ಕನಿಷ್ಠ
ಬೆಂಬಲ ಬೆಲೆ (ಎಂಎಸ್ಪಿ) ಸೇರಿದಂತೆ ರೈತ ಸಂಘಗಳು ಎತ್ತಿದ ವಿವಿಧ ಆಕ್ಷೇಪಣೆಗಳ ಬಗ್ಗೆ ಮತ್ತು ಡಿಸೆಂಬರ್ ೧, ೩ ಮತ್ತು
೫ ರಂದು ನಡೆದ ಮಾತುಕತೆಗಳು ಸೇರಿದಂತೆ ಇದುವರೆಗಿನ ಐದು ಸುತ್ತಿನ ಸಭೆಗಳಲ್ಲಿ ಉಭಯ ಕಡೆಯವರ ನಡುವೆ ಚರ್ಚಿಸಲಾದ ಅಂಶಗಳ ಬಗ್ಗೆಯೂ ಪತ್ರ ಉಲ್ಲೇಖಿಸಿದೆ.
"ಸರ್ಕಾರವು
ನಿಮ್ಮೊಂದಿಗೆ ನೀವು ಎತ್ತಿದ ವಿಷಯಗಳ ಬಗ್ಗೆ ಮುಕ್ತ ಮನಸ್ಸಿನಿಂದ ಮಾತನಾಡಿದೆ ಮತ್ತು ಭವಿಷ್ಯದಲ್ಲಿಯೂ ಸಹ ಅದನ್ನು ಮಾಡಲು
ಸಿದ್ಧವಾಗಿದೆ ಎಂದು ನಾನು ಮತ್ತೊಮ್ಮೆ ಒತ್ತಿ ಹೇಳಲು ಬಯಸುತ್ತೇನೆ. ಮುಂದಿನ ಸುತ್ತಿನ ಮಾತುಕತೆಗೆ ನಿಮಗೆ ಅನುಕೂಲಕರವಾದ ದಿನಾಂಕ ಮತ್ತು ಸಮಯವನ್ನು ದಯವಿಟ್ಟು ನಮಗೆ ತಿಳಿಸಿ. ನವದೆಹಲಿಯ ವಿಜ್ಞಾನ ಭವನದಲ್ಲಿ ಮಂತ್ರಿಮಂಡಲ ಮಟ್ಟದ ಸಮಿತಿಯೊಂದಿಗೆ ಚರ್ಚೆ ನಡೆಯಲಿದೆ’
ಎಂದು ಅಗರವಾಲ್ ಪತ್ರದಲ್ಲಿ ತಿಳಿಸಿದ್ದಾರೆ.
ಸರ್ಕಾರ
ಈ ಹಿಂದೆ ಭಾನುವಾರ ರೈತ ಸಂಘಗಳಿಗೆ ಪತ್ರ ಬರೆದು ಅವರ ಅನುಕೂಲಕ್ಕೆ ಅನುಗುಣವಾಗಿ ಆರನೇ ಸುತ್ತಿನ ಮಾತುಕತೆಗೆ ಆಹ್ವಾನಿಸಿತ್ತು. ಕೃಷಿ ವಿರೋಧಿ ಕಾನೂನು ಪ್ರತಿಭಟನೆಗಳು ಗುರುವಾರ ೨೯ ನೇ ದಿನವನ್ನು
ಪ್ರವೇಶಿಸಿದವು.
ಇದಕ್ಕೆ
ಮುನ್ನ ಗುರುವಾರ ರಾಹುಲ್ ಗಾಂಧಿ ಸೇರಿದಂತೆ ಮೂವರು ಕಾಂಗ್ರೆಸ್ ನಾಯಕರ ನಿಯೋಗವು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ, ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಅವರ ಹಸ್ತಕ್ಷೇಪವನ್ನು ಕೋರಿತು. ರಾಷ್ಟ್ರಪತಿ ಭವನಕ್ಕೆ ಮೆರವಣಿಗೆ ನಡೆಸಲು ಯತ್ನಿಸುತ್ತಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರನ್ನು ದೆಹಲಿ ಪೊಲೀಸರು ವಶಕ್ಕೆ ತೆಗೆದುಕೊಂಡರು.
No comments:
Post a Comment