Tuesday, December 1, 2020

ಪ್ರಾಣಬೆದರಿಕೆ:ಮಗಳ ವಿರುದ್ಧ ಅಪ್ಪನ ದೂರು-ಯಾರು ಈಕೆ?

 ಪ್ರಾಣಬೆದರಿಕೆ:ಮಗಳ ವಿರುದ್ಧ ಅಪ್ಪನ ದೂರು-ಯಾರು ಈಕೆ?

 ನವದೆಹಲಿ: ಶೆಹ್ಲಾ ರಶೀದ್ ಶೋರಾ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮಾಜಿ ನಾಯಕಿಯಾಗಿದ್ದು, ಆಕೆ ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವುದಾಗಿ ಆಕೆಯ ತಂದೆ ಅಬ್ದುಲ್ ರಶೀದ್ ಜೋರಾ ಆಪಾದಿಸಿದ್ದಾರೆ. ತನಗೆ ಪುತ್ರಿಯಿಂದ ಪ್ರಾಣ ಬೆದರಿಕೆ ಇದೆ ಎಂದೂ ರಶೀದ್ ದೂರಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಡಿಜಿಪಿಗೆ ಬರೆದ ಪತ್ರದಲ್ಲಿ, ಅಬ್ದುಲ್ ರಶೀದ್ ಶೋರಾ, ‘ನನ್ನ ಮಗಳು ಶೆಹ್ಲಾ ರಶೀದ್ ಶೋರಾಳಿಂದ ನಾನು ನಿರಂತರವಾಗಿ ಮಾರಣಾಂತಿಕ ಅಪಾಯಕ್ಕೆ ಒಳಗಾಗಿದ್ದೇನೆ. ಆಕೆಗೆ ನನ್ನ ಹಿರಿಯ ಪುತ್ರಿ ಅಸ್ಮಾ ರಶೀದ್ ಮತ್ತು ನನ್ನ ಹೆಂಡತಿ ಜುಬೈದಾ ಶೋರಾ ಹಾಗೂ ಸೆಕ್ಯುರಿಟಿ ಗಾರ್ಡ್ ಸಕೀಬ್ ಅಹ್ಮದ್ ಅವರ ಬೆಂಬಲವಿದೆಎಂದು ತಿಳಿಸಿದ್ದಾರೆ.

೨೦೧೭ ರಲ್ಲಿ ಶೆಹ್ಲಾ ಇದ್ದಕ್ಕಿದ್ದಂತೆ ಕಾಶ್ಮೀರ ರಾಜಕೀಯಕ್ಕೆ ನೆಗೆದ ಬಳಿಕ ತನಗೆ ಜೀವ ಬೆದರಿಕೆ ಗ್ರಹಿಕೆ ಪ್ರಾರಂಭವಾಯಿತು ಎಂದು ರಶೀದ್ ಹೇಳಿದ್ದಾರೆ.

"ಯುಎಪಿಎ ಅಡಿಯಲ್ಲಿ ಭಯೋತ್ಪಾzನೆಗೆ ಧನಸಹಾಯ ಪ್ರಕರಣದಲ್ಲಿ ಜಹೂರ್ ವಟಾಲಿಯನ್ನು ಬಂದಿಸುವುದಕ್ಕೆ ಕೇವಲ ಎರಡು ತಿಂಗಳ ಮೊದಲು, ನನ್ನನ್ನು ೨೦೧೭ರ ಜೂನ್ ತಿಂಗಳಲ್ಲಿ ಶ್ರೀನಗರದ ವಟಾಲಿಯ ನಿವಾಸಕ್ಕೆ ವಟಾಲಿ ಮತ್ತು ಮಾಜಿ ಶಾಸಕ ರಶೀದ್ ಎಂಜಿನಿಯರ್ ಕರೆದಿದ್ದರು. ಕುಖ್ಯಾv ಜೊತೆ ಶೆಹ್ಲಾ ಸೇರ್ಪಡೆಗಾಗಿ ಅವರು ನನಗೆ ಕೋಟಿ ರೂಪಾಯಿಗಳನ್ನು ನೀಡುವುದಾಗಿ ಹೇಳಿದ್ದರುಎಂದು ರಶೀದ್ ಹೇಳಿದ್ದಾರೆ.

ಹಣ ಅಕ್ರಮ ಮಾರ್ಗಗಳ ಮೂಲಕ ಬರುತ್ತಿರುವುದರಿಂದ ಮತ್ತು ಅದನ್ನು ಕಾನೂನುಬಾಹಿರ ಚಟುವಟಿಕೆಗಳನ್ನು ಬಳಸಲಾಗುತ್ತಿರುವುದರಿಂದ ಅದನ್ನು ತೆಗೆದುಕೊಳ್ಳಬೇಡ ಎಂಬುದಾಗಿ ಅಬ್ದುಲ್ ರಶೀದ್ ತಮ್ಮ ಪುತ್ರಿ ಶೆಹ್ಲಾಗೆ ಹೇಳಿದರು.

"ಆದರೆ ಶೆಹ್ಲಾ ಒಪ್ಪಂದದ ಭಾಗವಾಗಿದ್ದುದನ್ನು ನಾನು ನಂತರ ಕಂಡುಕೊಂಡೆಎಂದು ರಶೀದ್ ಹೇಳಿದರು.

ತಮ್ಮ ಪುತ್ರಿ ಹಣವನ್ನು ಸ್ವೀಕರಿಸಿರುವುದಾಗಿ ಬಳಿಕ ತನಗೆ ತಿಳಿಸಿದಳು ಮತ್ತು ವಹಿವಾಟಿನ ಬಗ್ಗೆ ಯಾರಿಗೂ ಬಹಿರಂಗ ಪಡಿಸಬೇಡಿ. ಇಲ್ಲದಿದ್ದಲ್ಲಿ ನಿಮ್ಮ ಜೀವಕ್ಕೆ ಅಪಾಯವಾಗುತ್ತದೆ ಎಂದು ಪುತ್ರಿ ನನಗೆ ತಿಳಿಸಿದಳು ಎಂದು ರಶೀದ್ ನುಡಿದರು.

ತನ್ನ ಮನೆಯಲ್ಲಿ ರಾಷ್ಟ್ರ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ ಮತ್ತು ತನ್ನ ಪುತ್ರಿಯೇ ತನ್ನನ್ನು ಮನೆಯಿಂದ ಹೊರzಬ್ಬಲು ಪ್ರಯತ್ನಿಸಿದಳು ಎಂದು ಪತ್ರದಲ್ಲಿ ತಿಳಿಸಿದ ಅಬ್ದುಲ್ ರಶೀದ್, ತಮಗೆ ಸಾಕಷ್ಟು ಭದ್ರತೆ ಒದಗಿಸುವಂತೆ ಜಮ್ಮು-ಕಾಶ್ಮೀರದ ಡಿಜಿಪಿಗೆ ಮನವಿ ಮಾಡಿದರು.

ತಂದೆಯ ವರ್ತನೆಗೆ ಪ್ರತಿಕ್ರಿಯಿಸಿದ ಶೆಹಾ, ತಂದೆಯ ಆರೋಪವನ್ನುಸ್ಟಂಟ್ಎಂದು ಬಣ್ಣಿಸಿ, ’ಆತ ಹೆಂಡತಿಯನ್ನು ಥಳಿಸುವ ನಿಂದನೀಯ, ವಂಚಕ ವ್ಯಕ್ತಿಎಂದು ಹೇಳಿದ್ದಾರೆ.

"ನನ್ನ ಜೈವಿಕ ತಂದೆ ನನ್ನ ವಿರುದ್ಧ, ಮತ್ತು ನನ್ನ ತಾಯಿ ಹಾಗೂ ಸಹೋದರಿಯ ವಿರುದ್ಧ ತೀವ್ರ ಆರೋಪಗಳನ್ನು ಮಾಡುವ ವಿಡಿಯೋವನ್ನು ನಿಮ್ಮಲ್ಲಿ ಹಲವರು ನೋಡಿರಬಹುದು. ಚಿಕ್ಕದಾಗಿ ಮತ್ತು ನೇರವಾಗಿ ಹೇಳಬೇಕೆಂದರೆ, ಅವರು ಪತ್ನಿಯನ್ನು ಥಳಿಸುವ, ನಿಂದನೀಯ ಮತ್ತು ವಂಚಕ ವ್ಯಕ್ತಿ. ನಾವು ಅಂತಿಮವಾಗಿ ಅವರ ವಿರುದ್ಧ ಕಾರ್ಯನಿರತರಾಗಲು ನಿರ್ಧರಿಸಿದ್ದೇವೆ ಮತ್ತು ಅದಕ್ಕೆ ಪ್ರತಿಕ್ರಿಯೆಯಾಗಿ ಅವರು ಆರೋಪಗಳನ್ನು ಮಾಡಿದ್ದಾರೆಎಂದು ಶೆಹ್ಲಾ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಅಬ್ದುಲ್ ರಶೀದ್, ಸಿಪಿಐ-ಎಂ ಜೊತೆ ಶೆಹ್ಲಾ ಇರುವವರೆಗೂ ತನಗೆ ಯಾವುದೇ ಸಮಸ್ಯೆ ಇರಲಿಲ್ಲ ಏಕೆಂದರೆ ಅದು ಬಿಜೆಪಿಯಷ್ಟೇ ಒಳ್ಳೆಯದು ಮತ್ತು ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿದೆ. ಆದರೆ ವಿಷಯಗಳ ಬಗ್ಗೆ ಮಾತನಾಡುವಾಗ ತಮ್ಮನ್ನು ಕೌಟುಂಬಿಕ ಹಿಂಸಾಚಾರ ಪ್ರಕರಣದಲ್ಲಿ ಸಿಲುಕಿಸಲಾಯಿತು ಎಂದು ಹೇಳಿದರು.

"ನಾನು ನನ್ನ ಮಗಳ ವಿರುದ್ಧ ಮಾತನಾಡುವಾಗ, ಕೌಟುಂಬಿಕ ಹಿಂಸಾಚಾರ ಪ್ರಕರಣವೊಂದರಲ್ಲಿ ಸಿಲುಕಿಸಿ ಮನೆಯಿಂದ ಹೊರಹೋಗುವ ಮಾರ್ಗವನ್ನು ತೋರಿಸಲಾಯಿತು. ನಂತರ ಆಕೆ ಕಾಶ್ಮೀರ ರಾಜಕೀಯಕ್ಕೆ ಪ್ರವೇಶಿಸಿದಾಗ ನನಗೆ ಆಶ್ಚರ್ಯವಾಯಿತು" ಎಂದು ಅಬ್ದುಲ್ ರಶೀದ್ ಹೇಳಿದರು. "ನಾನು ಡಿಜಿಪಿಂi ಬಳಿ ರಕ್ಷಣೆ ಕೋರಿದ್ದೇನೆ ಮತ್ತು ಅವರ ಹಣ ಎಲ್ಲಿಂದ ಬರುತ್ತದೆ ಎಂದು ತನಿಖೆ ನಡೆಸಲು ಕೂಡಾ ಕೇಳಿದ್ದೇನೆ" ಎಂದು ಅವರು ಹೇಳಿದರು. "ಶೆಹ್ಲಾಗೆ ಕೆಲಸವಿಲ್ಲ, ಅವಳ ತಂಗಿಗೂ ಕೆಲಸವಿಲ್ಲ, ಆದ್ದರಿಂದ ಅವರ ಖಾತೆಗಳನ್ನು ಪರಿಶೀಲಿಸಬೇಕು" ಎಂದು ಅಬ್ದುಲ್ ಹೇಳಿದರು.

"ಅವರ ನಿಧಿಯ ಮೂಲ ಏನೇ ಇರಲಿ ಅದನ್ನು ತನಿಖೆ ಮಾಡಬೇಕು ಮತ್ತು ಅವರು ನನ್ನ ವಿರುದ್ಧ ಏಕೆ ಒಂದು ವೇದಿಕೆ ಆರಂಭಿಸಿದ್ದಾರೆ ಎಂಬುದನ್ನು ಕಂಡುಹಿಡಿಯಬೇಕು. ಆಕೆ ಸೇರಿಕೊಂಡ ಪಕ್ಷ, ಪಕ್ಷಕ್ಕೆ  ಸಂಬಂಧಿಸಿದ ಜನg ವಿರುದ್ಧ ಭಯೋತ್ಪಾದಕ ನಿಧಿಗೆ ಸಂಬಂಧಿಸಿದ ಪ್ರಕರಣ ದಾಖಲಿಸಲಾಗಿದೆ. ಇದgಲ್ಲಿ ಆಕೆಯ ಶಾಮೀಲು ಬಗ್ಗೆ ತನಿಖೆ ಸಂಸ್ಥೆಗಳಿಗೆ ಬಿಟ್ಟದ್ದುಎಂದು ಅವರು ನುಡಿದರು.

ಶೆಹ್ಲಾ ರಶೀದ್ ಶೋರಾ ಪ್ರಸ್ತುತ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಓದುತ್ತಿದ್ದಾರೆ. ಅವರು ೨೦೧೫-೧೬ರಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ (ಜೆಎನ್ಯುಎಸ್ಯು) ಉಪಾಧ್ಯಕ್ಷರಾಗಿದ್ದರು ಮತ್ತು ಅಖಿಲ ಭಾರತ ವಿದ್ಯಾರ್ಥಿ ಸಂಘದ (ಎಐಎಸ್) ಸದಸ್ಯರಾಗಿದ್ದರು.

೨೦೧೬ ಫೆಬ್ರವರಿಯಲ್ಲಿ ದೇಶದ್ರೋಹದ ಆರೋಪದ ಮೇಲೆ ಬಂಧನಕ್ಕೊಳಗಾದ ಕನ್ಹಯ್ಯ ಕುಮಾರ್, ಉಮರ್ ಖಾಲಿದ್ ಮತ್ತು ಇತರರನ್ನು ಬಿಡುಗಡೆ ಮಾಡುವಂತೆ ಕೋರಿ ವಿದ್ಯಾರ್ಥಿ ಆಂದೋಲನ ನಡೆದಾಗ ಶೋರಾ ಪ್ರಾಮುಖ್ಯತೆ ಪಡೆದರು. ಶೋರಾ ಕಾಶ್ಮೀರದ ಮಾನವ ಹಕ್ಕುಗಳ ಪರಿಸ್ಥಿತಿಯ ಬಗ್ಗೆ ಬಹಳ ಧ್ವನಿ ಎತ್ತಿದ್ದಾರೆ, ವಿಶೇಷವಾಗಿ ವಿಚಾರಣೆಗೆ ಕಾಯುತ್ತಿರುವ ಬಂಧನದಲ್ಲಿದ್ದ ಅಪ್ರಾಪ್ತ ವಯಸ್ಕರ ದುಃಸ್ಥಿತಿಯನ್ನು ಎತ್ತಿ ತೋರಿಸುತ್ತಾರೆ ಮತ್ತು ಕಾಶ್ಮೀರದಲ್ಲಿ ಯುವ ನಾಯಕತ್ವ ಕಾರ್ಯಕ್ರಮವನ್ನು ಆಯೋಜಿಸಿದ ನಂತರ ೨೦೧೦ ರಿಂದ ಸಕ್ರಿಯರಾಗಿದ್ದಾರೆ.

ಕಾಶ್ಮೀರಿ ಬಾಲಕಿಯgನ್ನು ಡೆಹ್ರಾಡೂನ್ ವಸತಿಗೃಹದಿಂದ ಹೊರಹಾಕಬೇಕು ಎಂದು ಜನರ ಗುಂಪೊಂದು ಒತ್ತಾಯಿಸುತ್ತಿದೆ ಎಂದು ೨೦೧೯ರ ಫೆಬ್ರ್ರುವರಿ ೧೬ರಂದು ಶೋರಾ ಅವರು ಟ್ವೀಟ್ ಮಾಡಿದ್ದರು. ಬಳಿಕ ಉತ್ತರಾಖಂಡ ಪೊಲೀಸರು ವದಂತಿ ಹರಡಿ ಶಾಂತಿ ಭಂಗ ಮಾಡಿದ್ದಕ್ಕಾಗಿ ಆಕೆಯ ವಿರುದ್ಧ ಪ್ರಕರಣ ದಾಖಲಿಸಿದ್ದರು.

೨೦೧೯ರ ಮಾರ್ಚ್ ೧೭ರಂದು ಷಾ ಫಾಸಲ್ ಸ್ಥಾಪಿಸಿದ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂವ್ಮೆಂಟ್ ರಾಜಕೀಯ ಪಕ್ಷಕ್ಕೆ ಶೆಹ್ಲಾ ಶೋರಾ ಸೇರಿದ್ದರು.

No comments:

Advertisement