Friday, January 1, 2021

ಭಾರತದಲ್ಲಿ ಇನ್ನೂ ೪ ಮಂದಿಗೆ ಲಂಡನ್ ವೈರಸ್

 ಭಾರತದಲ್ಲಿ ಇನ್ನೂ ಮಂದಿಗೆ ಲಂಡನ್ ವೈರಸ್

ನವದೆಹಲಿ: ಇಂಗ್ಲೆಂಡಿನಲ್ಲಿ ಕಂಡುಬಂದ ರೂಪಾಂತರೀ ಕೋವಿಡ್ -೧೯ ಸೋಂಕು ಭಾರತದಲ್ಲಿ ಇನ್ನೂ ನಾಲ್ಕು ಮಂದಿಗೆ ತಗುಲಿದ್ದು, ’ಇಂಗ್ಲೆಂಡ್ ವೈರಸ್ ಸೋಂಕಿತರ ಸಂಖ್ಯೆ 2021ರ ಜನವರಿ 01ರ ಶುಕ್ರವಾರ ೨೯ಕ್ಕೆ ಏರಿತು.

ಮಂಗಳವಾರ ಮತ್ತು ಬುಧವಾರ ೨೦ ಜನರಲ್ಲಿ ಸೋಂಕು ಕಂಡು ಬಂದಿದ್ದರೆ, ಗುರುವಾರ ಮಂದಿಯಲ್ಲಿ ಮತ್ತು ಶುಕ್ರವಾರ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

೨೯ ಪ್ರಕರಣಗಳಲ್ಲಿ ಎಂಟು ಪ್ರಕರಣಗಳು ನವದೆಹಲಿಯ ಎನ್ಸಿಡಿಸಿ, ಐಜಿಐಬಿ ನವದೆಹಲಿಯಲ್ಲಿ ಎರಡು, ಎನ್ಐವಿ ಪುಣೆಯಲ್ಲಿ ಐದು, ಸಿಸಿಎಂಬಿ ಹೈದರಾಬಾದ್ನಲ್ಲಿ ಮೂರು, ನಿಮ್ಹಾನ್ಸ್ ಬೆಂಗಳೂರಿನಲ್ಲಿ ೧೦ ಮತ್ತು ಎನ್ಐಬಿಎಂಜಿ ಕಲ್ಯಾಣಿಯಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಡಿಸೆಂಬರಿನಲ್ಲಿ ಮೊದಲ ಬಾರಿಗೆ ಇಂಗ್ಲೆಂಡಿನಲ್ಲಿ ಪತ್ತೆಯಾದ ಹೊಸ ತಳಿ ಪ್ರಪಂಚದಾದ್ಯಂತ ಹೊಸ ಆತಂಕಗಳನ್ನು ಹರಡಿದೆ.

ಹೆಚ್ಚಿನ ದೇಶಗಳು ತಮ್ಮ ವಾಯುಪ್ರದೇಶವನ್ನು ಹೊಸ ತಳಿ ಕಂಡುಬಂದ ದೇಶಗಳಿಗೆ ಮುಚ್ಚಿವೆ. ಭಾರತವೂ ಇಂಗ್ಲೆಂಡಿನಿಂದ ಜನವರಿ ರವರೆಗೆ ವಿಮಾನಯಾನವನ್ನು ಅಮಾನತುಗೊಳಿಸಿದೆ.

ಹೆಚ್ಚು ಸಾಂಕ್ರಾಮಿಕ ಮತ್ತು ಇತರ ಆರೋಗ್ಯ ಸಮಸ್ಯೆಗಳಿಲ್ಲದ ಯುವಜನರಿಗೆ ಸೋಂಕು ತಗಲಿಸುವಂತಹ ಹೊಸ ವೈರಸ್ ತಳಿಯು ಹಲವಾರು ರಾಜ್ಯಗಳನ್ನು ಹೊಸ ನಿರ್ಬಂಧಗಳನ್ನು ಮರುಪರಿಶೀಲಿಸುವಂತೆ ಮಾಡಿದೆ.

ಇಂಗ್ಲೆಂಡಿನಿಂದ ಹಿಂತಿರುಗಿದ ಎಲ್ಲ ಪ್ರಯಾಣಿಕರನ್ನು ಪರೀಕ್ಷಿಸಲಾಗಿದೆ ಮತ್ತು ಅವರ ಮಾದರಿಗಳನ್ನು ಜಿನೊಮ್ ಪರೀಕ್ಷೆಗಾಗಿ ಕಳುಹಿಸಲಾಗಿದೆ.

ಇನ್ಸಾಕೋಗ್ (ಇಂಡಿಯನ್ ಎಸ್ಎಆರ್ಎಸ್-ಕೋವಿ - ಜೀನೋಮಿಕ್ ಕನ್ಸೋರ್ಟಿಯಾ) ಅಡಿಯಲ್ಲಿನ ೧೦ ಸರ್ಕಾರಿ ಲ್ಯಾಬ್ಗಳ ಒಕ್ಕೂಟವು ಸೋಂಕಿತರ ಜಿನೋಮ್ ಪರೀಕ್ಷೆ ನಡೆಸುತ್ತಿವೆ.

ರೂಪಾಂತರೀ ವೈರಸ್ ಸೋಂಕು ತಗುಲಿದ ಜನರನ್ನು ಆರೋಗ್ಯ ಸೌಲಭ್ಯಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗುತ್ತಿದೆ. ಸಹ ಪ್ರಯಾಣಿಕರು, ಕುಟುಂಬ ಸಂಪರ್ಕಗಳು ಮತ್ತು ಇತರರಿಗಾಗಿ ಸಂಪರ್ಕ ಪತ್ತೆಹಚ್ಚುವಿಕೆಯನ್ನೂ ಮಾಡಲಾಗುತ್ತಿದೆ.

ಭಾರತದ ಹೊರತಾಗಿ, ಹೊಸ ರೂಪಾಂತರವನ್ನು ವರದಿ ಮಾಡಿದ ದೇಶಗಳಲ್ಲಿ ಡೆನ್ಮಾರ್ಕ್, ನೆದರ್ಲ್ಯಾಂಡ್ಸ್,  ಆಸ್ಟ್ರೇಲಿಯಾ, ಇಟಲಿ, ಸ್ವೀಡನ್, ಫ್ರಾನ್ಸ್, ಸ್ಪೇನ್, ಸ್ವಿಜರ್ಲೆಂಡ್, ಜರ್ಮನಿ, ಕೆನಡಾ, ಜಪಾನ್, ಲೆಬನಾನ್ ಮತ್ತು ಸಿಂಗಾಪುರ ಸೇರಿವೆ.

No comments:

Advertisement