ಅಯೋಧ್ಯೆಯ ಬಾಲರಾಮ: ಮೊದಲ ದೃಶ್ಯ ಕಣ್ತುಂಬಿಕೊಳ್ಳಿ.
ಅಯೋಧ್ಯೆ: ಅಯೋಧ್ಯೆಯ ನೂತನ ರಾಮ ಮಂದಿರದ ಗರ್ಭಗುಡಿಯಲ್ಲಿ 2024 ಜನವರಿ 18ರಂದು ಇರಿಸಲಾದ ನೂತನ ಬಾಲರಾಮನ ವಿಗ್ರಹದ ಮೊದಲ ಚಿತ್ರವನ್ನು ವಿಶ್ವ ಹಿಂದೂ ಪರಿಷತ್ 2024 ಜನವರಿ 19ರ ಶುಕ್ರವಾರ ಬಿಡುಗಡೆ ಮಾಡಿತು.
ವಿಶ್ವ ಹಿಂದೂ ಪರಿಷತ್ತಿನ ಮಾಧ್ಯಮ ಉಸ್ತುವಾರಿ ನೋಡಿಕೊಳ್ಳುತ್ತಿರುವ ಶರದ್ ಶರ್ಮ ಅವರು ಈ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.
ಕನ್ನಡಿಗ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿರುವ ಬಾಲರಾಮನ
ವಿಗ್ರಹವನ್ನು ಅಯೋಧ್ಯೆಯ ನೂತನ ರಾಮ ಮಂದಿರದದ ಗರ್ಭಗುಡಿಗೆ 2024 ಜನವರಿ 18ರ ಗುರುವಾರ ತಂದು ಪೀಠದ
ಮೇಲೆ ಕೂರಿಸಲಾಗಿತ್ತು.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನೇತೃತ್ವದಲ್ಲಿ ವೇದಘೋಷಗಳ
ನಡುವೆ ಅರ್ಚಕರು ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ್ದರು. ಇದರೊಂದಿಗೆ ಭಗವಾನ್ ರಾಮನ
500 ವರ್ಷಗಳ ಸುದೀರ್ಘ ವನವಾಸ ಅಂತ್ಯಗೊಂಡಿತ್ತು.
ಈ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಮಂದಿರ ಸ್ಮರಣಾರ್ಥ
ವಿಶೇಷ ಅಂಚೆ ಚೀಟಿಯನ್ನು ನವದೆಹಲಿಯಲ್ಲಿ ಬಿಡುಗಡೆ ಮಾಡಿದ್ದರು.
ಅರುಣ್ ಯೋಗಿರಾಜ್ ಅವರು ಕಪ್ಪು ಶಿಲೆಯಲ್ಲಿ ಕೆತ್ತಿರುವ ಈ ಬಾಲರಾಮನ
ವಿಗ್ರಹ 51 ಅಂಗುಲ ಎತ್ತರವಿದೆ.
ಇವುಗಳನ್ನೂ ಓದಿ:
No comments:
Post a Comment