Thursday, June 26, 2025

ಶಿರಾಡಿ ಘಟ್ಟದಲ್ಲಿ ಭೂಕುಸಿತ: ಹೆದ್ದಾರಿ ಬಂದ್‌

 ಶಿರಾಡಿ ಘಟ್ಟದಲ್ಲಿ ಭೂಕುಸಿತ: ಹೆದ್ದಾರಿ ಬಂದ್‌

ಹಾಸನ: ಸಕಲೇಶಪುರದ ಮಾರೆಹನಳ್ಳಿ ಬಳಿ ಭೂಕುಸಿತ ಸಂಭವಿಸಿದ ಪರಿಣಾಮವಾಗಿ  ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ರದ್ದಾಗಿದೆ.

ಭೂಕುಸಿತದ ಹಿನ್ನೆಲೆಯಲ್ಲಿ  ಶಿರಾಡಿ ಘಟ್ಟ ರಸ್ತೆಯಲ್ಲಿ ವಾಹನ ಸಂಚಾರವನ್ನು ಜಿಲ್ಲಾಡಳಿತವು ನಿಷೇಧಿಸಿದೆ. ಈ ರಾಷ್ಟ್ರೀಯ ಹೆದ್ದಾರಿ ನಂಬರ್‌ 75 ಮಂಗಳೂರು ಕರಾವಳಿ ನಗರವನ್ನು ಬೆಂಗಳೂರಿನೊಂದಿಗೆ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದೆ.

ಜಿಲ್ಲಾಧಿಕಾರಿ ಲತಾ ಕುಮಾರಿ ಹೊರಡಿಸಿದ ಆದೇಶದ ಪ್ರಕಾರ, ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ವಾಹನಗಳನ್ನು ಬೆಂಗಳೂರು-ಹಾಸನ-ಬೇಲೂರು-ಚಾರ್ಮಾಡಿ ಘಟ್ಟದ ಮೂಲಕ ಕಳುಹಿಸಲಾಗುತ್ತಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ವಾಹನಗಳು ಸಂಪಾಜೆ ರಸ್ತೆ ಅಥವಾ ಚಾರ್ಮಾಡಿ ಘಟ್ಟ ರಸ್ತೆಯನ್ನು ಬಳಸಲು ಸೂಚಿಸಲಾಗಿದೆ.

ಏತನ್ಮಧ್ಯೆ, ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ.

No comments:

Advertisement