ಮರಳಿ ಬಂದರು ಭುವಿಗೆ…
ಭಾರತದ ಗಗನಯಾತ್ರಿ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ನಾಸಾದ ಸ್ಪೇಸ್ ಎಕ್ಸ್ ಡ್ರ್ಯಾಗನ್ ಮೂಲಕ,
ಆಕ್ಸಿಯಮ್ 4ರ ಇತರ ಗಗನ ಯಾತ್ರಿಗಳ ಜೊತೆಗೆ 2025 ಜುಲೈ 15ರ ಮಂಗಳವಾರ ಮಧ್ಯಾಹ್ನ ಭೂಮಿಗೆ ಮರಳಿದರು.
ಗ್ರೂಪ್ ಕ್ಯಾಪ್ಟನ್
ಶುಕ್ಲಾ ಮತ್ತು ಇತರರನ್ನು ಹೊತ್ತ ಸ್ಪೇಸ್ಎಕ್ಸ್ ಸಿಬ್ಬಂದಿ ಕ್ಯಾಪ್ಸುಲ್ 'ಗ್ರೇಸ್' ಭಾರತೀಯ
ಕಾಲಮಾನ ಮಧ್ಯಾಹ್ನ 3 ಗಂಟೆಯ ನಂತರ ಸ್ಯಾನ್ ಡಿಯಾಗೋ ಬಳಿಯ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಸುರಕ್ಷಿತವಾಗಿ ಇಳಿಯಿತು.
ಆಕ್ಸಿಯಮ್-4 ಸಿಬ್ಬಂದಿಯಲ್ಲಿ ಅಮೆರಿಕದ ಗಗನಯಾತ್ರಿ ಕಮಾಂಡರ್ ಪೆಗ್ಗಿ ವಿಟ್ಸನ್, ಪೈಲಟ್ ಶುಭಾಂಶು ಶುಕ್ಲಾ, ಮತ್ತು ಮಿಷನ್ ಸ್ಪೆಷಲಿಸ್ಟ್ಗಳಾದ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮತ್ತು ಟಿಬೋರ್ ಕಪು ಸೇರಿದ್ದಾರೆ.
ಸಿಬ್ಬಂದಿ ಜುಲೈ 14
ರಂದು ಬೆಳಿಗ್ಗೆ 4:15 ಕ್ಕೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ಬೇರ್ಪಟ್ಟು
ತಮ್ಮ ಮಿಷನ್ ಮುಕ್ತಾಯಗೊಳಿಸಿದ್ದರು.
ಶುಭಾಂಶು ಶುಕ್ಲಾ ಮತ್ತು ಇತರ ಗಗನಯಾತ್ರಿಗಳು ಭೂಮಿಗೆ ಮರಳಿದ ಕ್ಷಣವನ್ನು ಶುಕ್ಲಾ ಕುಟುಂಬ ಸದಸ್ಯರು ಮತ್ತು ಇತರರು ಸಂಭ್ರಮಿಸಿದ ವಿಡಿಯೋ ಇಲ್ಲಿದೆ. ಕೆಳಗೆ ಕ್ಲಿಕ್ ಮಾಡಿ.
ಐತಿಹಾಸಿಕ ಕ್ಷಣ
ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಆಕ್ಸಿಯಮ್-4 ಸಿಬ್ಬಂದಿ 18 ದಿನಗಳ ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ವಾಸವನ್ನು ಪೂರೈಸಿ, ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಪೆಸಿಫಿಕ್ ಮಹಾಸಾಗರದಲ್ಲಿ ಇಳಿದ ಐತಿಹಾಸಿಕ ಕ್ಷಣ. ವಿಡಿಯೋ ನೋಡಲು ಕೆಳಗೆ ಕ್ಲಿಕ್ ಮಾಡಿ. (ವೀಡಿಯೊ ಮೂಲ: ಆಕ್ಸಿಯಮ್ ಸ್ಪೇಸ್/ಯೂಟ್ಯೂಬ್)
ಪ್ರಧಾನಮಂತ್ರಿ
ನರೇಂದ್ರ ಮೋದಿ ಸಂದೇಶ
"ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ತಮ್ಮ ಐತಿಹಾಸಿಕ ಬಾಹ್ಯಾಕಾಶ ಯಾನದಿಂದ ಭೂಮಿಗೆ ಮರಳುತ್ತಿರುವ ಈ ಹೊತ್ತಿನಲ್ಲಿ ಅವರನ್ನು ಸ್ವಾಗತಿಸಲು ನಾನು ದೇಶದೊಂದಿಗೆ ಸೇರಿಕೊಂಡಿದ್ದೇನೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಭಾರತದ ಮೊದಲ ಗಗನಯಾತ್ರಿಯಾಗಿ, ಅವರು ತಮ್ಮ ಸಮರ್ಪಣೆ, ಧೈರ್ಯ ಮತ್ತು ಪ್ರವರ್ತಕ ಮನೋಭಾವದ ಮೂಲಕ ಶತಕೋಟಿ ಕನಸುಗಳಿಗೆ ಸ್ಫೂರ್ತಿ ನೀಡಿದ್ದಾರೆ. ಇದು ನಮ್ಮ ಸ್ವಂತ ಮಾನವ ಬಾಹ್ಯಾಕಾಶ ಯಾನ ಮಿಷನ್ – ಗಗನಯಾನದ ಕಡೆಗೆ ಮತ್ತೊಂದು ಮೈಲಿಗಲ್ಲುʼ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿದರು.
ಈ ಕೆಳಗಿನದ್ದನ್ನೂ ಓದಿರಿ:



No comments:
Post a Comment