Sunday, August 31, 2025

ವಿದುಷಿ ವಿ. ದೀಕ್ಷಾ ಭರತನಾಟ್ಯ ವಿಶ್ವದಾಖಲೆ

 ವಿದುಷಿ ವಿ. ದೀಕ್ಷಾ ಭರತನಾಟ್ಯ ವಿಶ್ವದಾಖಲೆ

ಡುಪಿ ಜಿಲ್ಲೆಯ ಭರತನಾಟ್ಯ ಕಲಾವಿದೆ ವಿದುಷಿ ವಿ. ದೀಕ್ಷಾ ಅವರು ಸತತ 216 ಗಂಟೆಗಳ ಕಾಲ ನಿರಂತರವಾಗಿ ನೃತ್ಯ ಮಾಡಿ, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೇರಿದ್ದಾರೆ.
2025 ಆಗಸ್ಟ್
21 ರಂದು ಮಧ್ಯಾಹ್ನ 3:30 ಕ್ಕೆ ಆರಂಭವಾದ ಈ ಮ್ಯಾರಥಾನ್ ನೃತ್ಯ ಪ್ರದರ್ಶನವು ಒಂಬತ್ತು ದಿನಗಳ ಕಾಲ ನಿರಂತರವಾಗಿ ನಡೆದು ಆಗಸ್ಟ್ 30 ರಂದು ಯಶಸ್ವಿಯಾಗಿ ಮುಕ್ತಾಯಗೊಂಡಿತು. ಈ ಮೂಲಕ ಅವರು ಈ ಹಿಂದೆ ಮಂಗಳೂರಿನ ರೆಮೋನಾ ಎವೆಟ್ಟೆ ಪಿರೇರಾ ಅವರು 170 ಗಂಟೆಗಳ ಕಾಲ ನಿರಂತರ ನೃತ್ಯ ಮಾಡಿದ ದಾಖಲೆಯನ್ನು ಮುರಿದು ಹೊಸ ವಿಶ್ವದಾಖಲೆ ನಿರ್ಮಿಸಿದರು.
ಬ್ರಹ್ಮಾವರ ತಾಲೂಕಿನ ಮುಂಡಿಂಜಿದ್ದು ಗ್ರಾಮದವರಾದ ದೀಕ್ಷಾ ಅವರಿಗೆ ಭರತನಾಟ್ಯದಲ್ಲಿ ಮಹತ್ತರ ಸಾಧನೆ ಮಾಡುವ ಮಹದಾಸೆಯಿತ್ತು. ಈ ಪ್ರಯತ್ನವು ಒಂಬತ್ತು ದಿನಗಳ ನಿರಂತರ ನೃತ್ಯಕ್ಕೆ ಅವರನ್ನು ಪ್ರೇರೇಪಿಸಿತು. ಅವರ ಈ ಭರ್ಜರಿ ಸಾಧನೆಯು ಭಾರತದ ನೃತ್ಯಲೋಕದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ ಅಥವಾ ಈ ಯೂ ಟ್ಯೂಬ್‌ ಲಿಂಕ್‌ ಕ್ಲಿಕ್‌ ಮಾಡಿರಿ. ಇಲ್ಲವೇ ಮೇಲಿನ ಸಾಧನೆ/ಸಾಧಕರು ಪುಟಕ್ಕೆ ಭೇಟಿ ನೀಡಿ.

No comments:

Advertisement