ಹಿಮಾಚಲ ʼದಿಮ್ಮಿ ಪ್ರವಾಹʼ ಕರ್ನಾಟಕಕ್ಕೂ ಎಚ್ಚರಿಕೆಯ ಗಂಟೆ
ಹಿಮಾಚಲ ಪ್ರದೇಶದ
ಚಂಬಾದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಚಿತ್ರಿಸಿದ ವಿಡಿಯೋ ಪೋಸ್ಟ್ ಒಂದು ಸಾಮಾಜಿಕ
ಜಾಲಗಳಲ್ಲಿ ವೈರಲ್ ಆಗಿದೆ. @GoHimachal_
ಎಂಬ X (ಟ್ವಿಟರ್) ಎಂಬ
ಈ ಟ್ವೀಟ್ ಸಂದೇಶದಲ್ಲಿ ಹಿಮಾಚಲ ಪ್ರದೇಶದ ಚಂಬಾದ ರಾವಿ ನದಿಯು ಮರದ
ದಿಮ್ಮಿಗಳಿಂದ ತುಂಬಿಹೋಗಿರುವ ಪುಟ್ಟ ವಿಡಿಯೋ ಇದೆ.
ನದಿಯಲ್ಲಿ ಮರದ ದಿಮ್ಮಿಗಳ ಪ್ರವಾಹಕ್ಕೆ
ಅರಣ್ಯ ಮಾಫಿಯಾಗಳ ಅಕ್ರಮ ಮರ ಕಡಿಯುವಿಕೆಯ ಕಾರಣ. ಇಂತಹ ಕೃತ್ಯಗಳು ಪ್ರವಾಹದ ವಿನಾಶಕಾರಿ ಪರಿಣಾಮವನ್ನು
ಇನ್ನಷ್ಟು ಹೆಚ್ಚಿಸುತ್ತವೆ.
ಪರಿಸರ ಹಾನಿ ಮತ್ತು
ನೈಸರ್ಗಿಕ ವಿಕೋಪಗಳ ನಡುವಿನ ಸಂಬಂಧವನ್ನು ಈ ಘಟನೆ ಎತ್ತಿ ತೋರಿಸುತ್ತದೆ. ಅಕ್ರಮ ಮರ ಕಡಿಯುವಿಕೆಯು ಕೇವಲ ಕಾಡು ನಾಶ ಮಾಡುವುದಲ್ಲ, ನೆಲದಲ್ಲಿ ನೀರನ್ನು
ಹೀರಿಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ, ಇದರಿಂದ ಪ್ರವಾಹದ ಅಪಾಯ
ಹೆಚ್ಚುತ್ತದೆ. ನದಿಯಲ್ಲಿ ಕಂಡುಬಂದ ಅಧಿಕ ಪ್ರಮಾಣದ ಮರದ ದಿಮ್ಮಿಗಳು ಭಾರತದಲ್ಲಿ ನಡೆಯುತ್ತಿರುವ
ಅಕ್ರಮ ಅರಣ್ಯ ನಾಶಕ್ಕೆ ಪುರಾವೆಯಾಗಿದೆ. 1988ರಿಂದ ಮರ ಕಡಿಯುವಿಕೆಗೆ ನಿಷೇಧವಿದ್ದರೂ, ಅಕ್ರಮ ಚಟುವಟಿಕೆಗಳು ನಿರಂತರವಾಗಿ
ನಡೆಯುತ್ತಿವೆ.
ವರ್ಲ್ಡ್ ರೈನ್‌ಫಾರೆಸ್ಟ್
ಮೂವ್‌ಮೆಂಟ್‌ನಂತಹ ಅಧ್ಯಯನಗಳು,
ಭಾರತದ ಅರಣ್ಯಗಳು ನಿರಂತರವಾಗಿ ತಮ್ಮ ವ್ಯಾಪ್ತಿಯನ್ನು
ಕಳೆದುಕೊಳ್ಳುತ್ತಿವೆ ಎಂದು ಸೂಚಿಸುತ್ತವೆ. ಭ್ರಷ್ಟಾಚಾರ ಮತ್ತು ಕಾನೂನು ಜಾರಿ ಕೊರತೆಯಿಂದಾಗಿ
ಸಂಘಟಿತ ಅಪರಾಧ ಸಿಂಡಿಕೇಟ್‌ಗಳು ಅಕ್ರಮ ಮರ ಹತ್ಯೆಯಲ್ಲಿ
ತೊಡಗಿಕೊಂಡಿವೆ. (ವಿಡಿಯೋ ನೋಡಲು ಕೆಳಗೆ ಕ್ಲಿಕ್ ಮಾಡಿ)
ಮರದ ದಿಮ್ಮಿಗಳ ಪ್ರವಾಹದ ಈ
ಘಟನೆಯು ಹಿಮಾಚಲ ಪ್ರದೇಶದಲ್ಲಿ ಮುಂಗಾರು ಸಂಬಂಧಿತ ದುರಂತಗಳ
ಹೆಚ್ಚಳದ ಒಂದು ಭಾಗ. ಹವಾಮಾನ ಬದಲಾವಣೆಯಿಂದಾಗಿ ಅನಿಶ್ಚಿತ ಮಳೆಯ
ಜೊತೆಗೆ ಅಕ್ರಮ ಮರ ಮಾರಣದಂತಹ ಮಾನವ ಚಟುವಟಿಕೆಗಳು ವಿಪರೀತ
ಪ್ರವಾಹಕ್ಕೆ ಕಾರಣವಾಗುತ್ತಿವೆ.
2025ರ ಪ್ರವಾಹದಲ್ಲಿ ಸಾವು
ನೋವಿನ ಜೊತೆಗೆ ಮೂಲಭೂತ ಸೌಕರ್ಯಗಳಿಗೆ ಹಾನಿಯಾಗಿದೆ. ಅರಣ್ಯಗಳ ಮೇಲೆ
ಕಟ್ಟುನಿಟ್ಟಾದ ನಿಗಾ ಇಡುವುದು ಮತ್ತು ನೀತಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಾದ
ಅಗತ್ಯವನ್ನು ಇದು ಒತ್ತಿಹೇಳುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೋ
ಮೇಲಿನ ಮಾಧ್ಯಮ ಮತ್ತು ಸಾರ್ವಜನಿಕ ಚರ್ಚೆಗಳು ಈ ಸಮಸ್ಯೆಗಳನ್ನು
ಪರಿಹರಿಸುವಲ್ಲಿ ಸರ್ಕಾರದ ವೈಫಲ್ಯವನ್ನು ಟೀಕಿಸಿವೆ.
ಹಿಮಾಚಲ ಪ್ರದೇಶದ ರಾವಿ ನದಿಯ ಮರದಿಮ್ಮಿ ಪ್ರವಾಹದ ವಿಡಿಯೋಕ್ಕೆ ಪ್ರತಿಕ್ರಿಯೆಯಾಗಿ ʼಮೊದಲು ಕುಲ್ಲು, ಈಗ ಚಂಬಾ!ʼ ಎಂಬುದಾಗಿ ಎಂಬುದಾಗಿ ಪ್ರತಿಕ್ರಿಯಿಸಿದ ವ್ಯಕ್ತಿಯೊಬ್ಬರು ಕುಲ್ಲು ಮನಾಲಿಯಲ್ಲಿ ಬಿಯಾಸ್ ನದಿ ಪ್ರವಾಹದಲ್ಲಿ ಕಾಣಿಸಿಕೊಂಡ ಮರಗಳ ದಿಮ್ಮಿಗಳ ಪ್ರವಾಹದ ವಿಡಿಯೋ ಹಾಕಿದ್ದರು.
ಈ ಘಟನೆ ಬಗ್ಗೆ ಸಿಐಡಿ ತನಿಖೆಗೆ ಆದೇಶ ನೀಡಲಾಗಿದೆ. ಆದರೆ ನಾವು ಇನ್ನೆಷ್ಟು ದಿನ ಈ ವಿಷಯವನ್ನು
ನಿರ್ಲಕ್ಷಿಸುತ್ತೇವೆ?
ದುರಾಸೆಯೇ ಹಿಮಾಲಯದ ಪರಿಸರ ಹಾನಿಗೆ ಕಾರಣ ಮತ್ತು ಪ್ರತಿ ವರ್ಷ
ಅಮಾಯಕರು ಇದರ ಬೆಲೆಯನ್ನು ತೆರುತ್ತಿದ್ದಾರೆ ಎಂಬ ಪ್ರತಿಕ್ರಿಯೆಗಳು ಟ್ವೀಟಿಗರಿಂದ
ಕೇಳಿ ಬಂದಿದೆ.
ಇದು ಕೇವಲ ಹಿಮಾಚಲದ ಸಮಸ್ಯೆಯಷ್ಟೇ
ಅಲ್ಲ. ಕರ್ನಾಟಕದಲ್ಲೂ ಮರಗಳ ಮಾರಣ ಹೋಮ ಪರಿಣಾಮವಾಗಿ ಮುಂಗಾರು ಮಳೆಯ ಹೊತ್ತಿನಲ್ಲಿ ಭೂಕುಸಿತಗಳು
ಹೆಚ್ಚುತ್ತಿರುವ ವರದಿಗಳು ಕಳೆದ ಹಲವಾರು ವರ್ಷಗಳಿಂದ ಬರುತ್ತಲೇ ಇವೆ.
ಆದರೆ ಮರ ಮಾರಣಹೋಮ ನಿಂತಿದೆಯೇ?

No comments:
Post a Comment