ಹೈಟೆಕ್ 'ಕರ್ತವ್ಯ ಭವನ': ಸಮಗ್ರ ಸಚಿವಾಲಯಗಳ ಹೊಸ ತಾಣ
ದೆಹಲಿಯ ಜನಪಥ್ನಲ್ಲಿ
ಹಿಂದೆ ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್ ಇದ್ದ ಜಾಗದಲ್ಲಿ, ಈಗ
ಹೈಟೆಕ್
ಕರ್ತವ್ಯ ಭವನ ತಲೆ ಎತ್ತಿದೆ.! ಇದು
ನಮ್ಮ ಕೇಂದ್ರ ಸರ್ಕಾರದ ಎಲ್ಲಾ ಸಚಿವಾಲಯಗಳಿಗೆ ಹೊಸ ಆಡಳಿತ ಕೇಂದ್ರವಾಗಿ ರೂಪುಗೊಳ್ಳುತ್ತಿದೆ.
ಹಂತ ಹಂತವಾಗಿ ಇದರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಆಧುನಿಕ ಭಾರತದ
ಆಡಳಿತಕ್ಕೆ ಹೊಸ ಮೆರುಗು ನೀಡಲು ಸಜ್ಜಾಗಿದೆ.
ಹೊಸತನದ
ಸ್ಪರ್ಶ: ಹೇಗಿರಲಿದೆ ಕರ್ತವ್ಯ ಭವನ?
- ಸುರಕ್ಷಿತ ಪ್ರವೇಶ: ಇದು ಪ್ರವೇಶ ನಿಯಂತ್ರಿತ ಕಚೇರಿಗಳನ್ನು ಹೊಂದಿದ್ದು, ಪ್ರವೇಶಕ್ಕೆ ಐಡಿ ಕಾರ್ಡ್ ಆಧರಿತ ವ್ಯವಸ್ಥೆ ಇರಲಿದೆ. ಇದು ಅಧಿಕಾರಿಗಳು ಮತ್ತು
ಸಂದರ್ಶಕರು ಇಬ್ಬರಿಗೂ ಅನ್ವಯಿಸುತ್ತದೆ.
- ಆಧುನಿಕ ಸಭಾ ಕೊಠಡಿಗಳು: ಅತ್ಯಾಧುನಿಕ ಸಮ್ಮೇಳನ ಕೊಠಡಿಗಳು (ಸ್ವಾಂಕಿ ಕಾನ್ಫರೆನ್ಸ್ ರೂಮ್ಸ್), ವಿಶಾಲವಾದ ಕಾರ್ಯಕ್ಷೇತ್ರಗಳು (ಓಪನ್ ಫ್ಲೋರ್ ವರ್ಕ್ ಹಾಲ್ಸ್) ಇಲ್ಲಿ ಲಭ್ಯ.
- ಸಂಪೂರ್ಣ ನಿಗಾ: ಪ್ರತಿ ಮಹಡಿಯಲ್ಲೂ ಸಿಸಿಟಿವಿ ಕ್ಯಾಮೆರಾಗಳು ಅಳವಡಿಕೆಯಾಗಿರುತ್ತದೆ. ಇಡೀ ಕೇಂದ್ರ ವಿಸ್ತಾರದ ಚಲನವಲಗಳನ್ನು ನಿಗಾ
ವಹಿಸಲು ಸಮಗ್ರ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ.
- ಹಸಿರು ತಂತ್ರಜ್ಞಾನ: ಪರಿಸರ ಸ್ನೇಹಿ ವೈಶಿಷ್ಟ್ಯಗಳಾದ ಡಬಲ್-ಗ್ಲೇಜ್ಡ್ ಗ್ಲಾಸ್ ಕಿಟಕಿಗಳು, ಥರ್ಮಲ್ ಇನ್ಸುಲೇಶನ್, ಕಡಿಮೆ ಶಬ್ದ, ಮತ್ತು ಕಡಿಮೆ ಘನೀಕರಣಕ್ಕೆ ಸಹಾಯಕವಾಗಿವೆ. ಶಕ್ತಿ ದಕ್ಷತೆಯ ಎಲ್ಇಡಿ ದೀಪಗಳು, ಆಕ್ಯುಪೆನ್ಸಿ ಸೆನ್ಸರ್ಗಳು ಮತ್ತು ಡೇಲೈಟ್ ಸೆನ್ಸರ್ಗಳನ್ನು ಬಳಸಿ ಶಕ್ತಿಯ
ಬಳಕೆಯಲ್ಲಿ ಶೇ. 30ರಷ್ಟು ಉಳಿತಾಯ ಮಾಡುವ ಗುರಿ ಹೊಂದಲಾಗಿದೆ.
ಈ ಬೃಹತ್ ಯೋಜನೆಯು
ಲುಟ್ಯೆನ್ಸ್ ದೆಹಲಿಯ ಅತ್ಯಂತ ಮಹತ್ವಾಕಾಂಕ್ಷೆಯ ನಗರ ನವೀಕರಣ ಯೋಜನೆಗಳಲ್ಲಿ ಒಂದಾಗಿದ್ದು, 2019 ರಲ್ಲಿ ಪ್ರಾರಂಭಿಸಲಾದ ಸೆಂಟ್ರಲ್ ವಿಸ್ಟಾ
ಪುನರಾಭಿವೃದ್ಧಿ ಯೋಜನೆಯ ಭಾಗವಾಗಿದೆ.
ಪ್ರಧಾನಿ
ಮೋದಿ ಉದ್ಘಾಟನೆ
ಒಟ್ಟು ಹತ್ತು ಕಟ್ಟಡಗಳಲ್ಲಿ, ಮೊದಲನೆಯದಾದ CCS-3 ಸಂಪೂರ್ಣಗೊಂಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ೦೬ ಆಗಸ್ಟ್ ೨೦೨೫ರ ಬುಧವಾರ ಇದನ್ನು ಉದ್ಘಾಟಿಸಿದರು. ಮೂಲತಃ ನವೆಂಬರ್ 2023 ರ ವೇಳೆಗೆ ಮೂರು ಸಿ.ಸಿ.ಎಸ್ ಕಟ್ಟಡಗಳನ್ನು ಪೂರ್ಣಗೊಳಿಸಲು ಗಡುವು ನೀಡಲಾಗಿತ್ತು. ಮುಂದಿನ ತಿಂಗಳು ಇನ್ನೂ ಎರಡು ಕಟ್ಟಡಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಸದ್ಯಕ್ಕೆ, ಗೃಹ ಸಚಿವಾಲಯ ಮಾತ್ರ CCS-3 ಗೆ
ತನ್ನ ಹಳೆಯ ನಾರ್ತ್ ಬ್ಲಾಕ್ ವಿಳಾಸದಿಂದ ಸ್ಥಳಾಂತರಗೊಂಡಿದೆ. ನಂತರ ಪೆಟ್ರೋಲಿಯಂ ಮತ್ತು
ನೈಸರ್ಗಿಕ ಅನಿಲ ಸಚಿವಾಲಯ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವಾಲಯಗಳು ಸ್ಥಳಾಂತರಗೊಳ್ಳಲಿವೆ ಎಂದು
ವಸತಿ ಮತ್ತು ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಮಾಹಿತಿ ನೀಡಿದ್ದಾರೆ. CCS 1, 2 ಮತ್ತು 3
ರ ನಿರ್ಮಾಣಕ್ಕಾಗಿ ಕೇಂದ್ರವು 3,690 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.
ಒಟ್ಟಾರೆ, ಕೇಂದ್ರ
ಸರ್ಕಾರದ ವಿವಿಧ ಸಚಿವಾಲಯಗಳನ್ನು ಒಳಗೊಳ್ಳುವ ಹತ್ತು ಹೊಸ ಕಟ್ಟಡಗಳ ಬ್ಲಾಕ್ಗಳನ್ನು CCS ಹೊಂದಿರುತ್ತದೆ. 2027ರ ಮಧ್ಯದ ವೇಳೆಗೆ CCS
ಸಂಪೂರ್ಣವಾಗಿ ಸಿದ್ಧವಾಗಲಿದೆ ಎಂದು ವಸತಿ ಕಾರ್ಯದರ್ಶಿ ಕೆ.
ಶ್ರೀನಿವಾಸ್ ಹೇಳುತ್ತಾರೆ. "ಡಿಸೆಂಬರ್ 2025 ರ ವೇಳೆಗೆ,
ಉಳಿದ ಎಲ್ಲಾ ಕಟ್ಟಡಗಳ ಕೆಲಸ ಪ್ರಾರಂಭವಾಗುತ್ತದೆ ಮತ್ತು ನಾವು
ಬಳಸುತ್ತಿರುವ ಹೊಸ ಕಟ್ಟಡ ತಂತ್ರಜ್ಞಾನದೊಂದಿಗೆ, ಅದನ್ನು 24
ತಿಂಗಳೊಳಗೆ ಪೂರ್ಣಗೊಳಿಸಲು ನಮಗೆ ಸಾಧ್ಯವಾಗುತ್ತದೆ" ಎಂಬುದು ಶ್ರೀನಿವಾಸ್ ವಿಶ್ವಾಸ.
ಹೊಸ ಕರ್ತವ್ಯ ಭವನವು 45 ಜನರಿಗೆ ಆಸನ ಸಾಮರ್ಥ್ಯವಿರುವ 24 ಮುಖ್ಯ ಸಭಾ ಕೊಠಡಿಗಳು, ತಲಾ 25 ಜನರಿಗೆ ಆಸನ ಸಾಮರ್ಥ್ಯವಿರುವ 26 ಸಣ್ಣ ಸಭಾ ಕೊಠಡಿಗಳು, ಮತ್ತು ತಲಾ 9 ಜನರಿಗೆ ಆಸನ ಸಾಮರ್ಥ್ಯವಿರುವ 67 ಸಣ್ಣ ಸಭಾ ಕೊಠಡಿಗಳನ್ನು ಹೊಂದಿರುತ್ತದೆ.
ಸದ್ಯಕ್ಕೆ ಹಳೆಯ
ಸೆಂಟ್ರಲ್ ಸೆಕ್ರೆಟರಿಯೇಟ್ ಕಾಂಪ್ಲೆಕ್ಸ್ನಲ್ಲಿ 22 ಕೇಂದ್ರ ಸಚಿವಾಲಯಗಳು ಮತ್ತು 41,000 ಉದ್ಯೋಗಿಗಳ ಕಚೇರಿಗಳಿವೆ. ಶಾಸ್ತ್ರಿ ಭವನ, ನಿರ್ಮಾಣ ಭವನ, ಉದ್ಯೋಗ
ಭವನ, ಕೃಷಿ ಭವನ ಮತ್ತು ವಾಯು ಭವನ ಸೇರಿದಂತೆ ಹಲವು ಕಟ್ಟಡಗಳು ಇದರಲ್ಲಿ ಸೇರಿವೆ. ಹೆಚ್ಚಿನ
ಕೇಂದ್ರ ಸಚಿವಾಲಯಗಳು CCS
ಗೆ ಸ್ಥಳಾಂತರಗೊಳ್ಳಲಿದ್ದರೂ, ವಾಣಿಜ್ಯ ಸಚಿವಾಲಯದ
ಕಚೇರಿಗಳನ್ನು ಹೊಂದಿರುವ ವಾಣಿಜ್ಯ ಭವನ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಚೇರಿಗಳನ್ನು ಹೊಂದಿರುವ ಜವಾಹರಲಾಲ್ ನೆಹರು ಭವನದಂತಹ ಕೆಲವು ಕಟ್ಟಡಗಳನ್ನು
ಹಾಗೆಯೇ ಉಳಿಸಿಕೊಳ್ಳಲಾಗುತ್ತದೆ. ರಾಷ್ಟ್ರೀಯ ವಸ್ತುಸಂಗ್ರಹಾಲಯ ಮತ್ತು ಅಂಬೇಡ್ಕರ್ ಆಡಿಟೋರಿಯಂ
ಕೂಡ ಉಳಿಯಲಿವೆ.
ಪ್ರಧಾನಿ
ನಿವಾಸ ಮತ್ತು ಕಾರ್ಯಾಲಯಕ್ಕೆ ಹೊಸ ರೂಪ!
ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಅಡಿಯಲ್ಲಿ, ಹೊಸ ಪ್ರಧಾನಮಂತ್ರಿ ಕಾರ್ಯಾಲಯ (PMO), ಇದನ್ನು ಕಾರ್ಯನಿರ್ವಾಹಕ ಎನ್ಕ್ಲೇವ್ ಎಂದು ಕರೆಯಲಾಗುತ್ತದೆ, ಮತ್ತು ಪ್ರಧಾನಮಂತ್ರಿ ನಿವಾಸ ಕೂಡ ಸಿದ್ಧವಾಗುತ್ತಿದೆ. PMO ಗಾಗಿ ಕಾರ್ಯನಿರ್ವಾಹಕ ಎನ್ಕ್ಲೇವ್ ಕೆಲಸ ನಡೆಯುತ್ತಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಖಟ್ಟರ್ ಹೇಳಿದ್ದಾರೆ.
ಈ ಕಾರ್ಯನಿರ್ವಾಹಕ ಎನ್ಕ್ಲೇವ್
ಸದ್ಯದ ಸೌತ್ ಬ್ಲಾಕ್ ಇರುವ ಜಾಗದಲ್ಲಿ ನಿರ್ಮಾಣವಾಗುತ್ತಿದೆ. ಪ್ರಧಾನಮಂತ್ರಿಗಳ ಹೊಸ ನಿವಾಸದ
ಕೆಲಸವೂ ಪ್ರಾರಂಭವಾಗಿದೆ. "ನಾವು ಯೋಜನೆಗೆ ಬಿಡ್ ಸಲ್ಲಿಸಿದ್ದೇವೆ" ಎಂಬುದು ಹಿರಿಯ ವಸತಿ ಸಚಿವಾಲಯದ ಅಧಿಕಾರಿಯೊಬ್ಬರ ಹೇಳಿಕೆ.
ಕಾರ್ಯನಿರ್ವಾಹಕ
ಎನ್ಕ್ಲೇವ್-II ಭಾಗವಾಗಿರುವ
ಪ್ರಧಾನಮಂತ್ರಿ ನಿವಾಸ ಸಂಕೀರ್ಣವು ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಪ್ರಮುಖ ಮತ್ತು
ಹೈ-ಪ್ರೊಫೈಲ್ ಅಂಶಗಳಲ್ಲಿ ಒಂದಾಗಿದೆ. ದೆಹಲಿಯ ಸೌತ್ ಬ್ಲಾಕ್ ಬಳಿಯ ದಾರಾ ಶಿಕೋ ರಸ್ತೆಯಲ್ಲಿ
ನಿರ್ಮಾಣವಾಗುತ್ತಿರುವ ಈ ಸಂಕೀರ್ಣವು ಒಟ್ಟು 2,26,203 ಚದರ ಅಡಿ
ವಿಸ್ತೀರ್ಣದಲ್ಲಿ ಹರಡಿದೆ ಮತ್ತು ಅಂದಾಜು 467 ಕೋಟಿ
ರೂ.
ವೆಚ್ಚವಾಗಲಿದೆ. ಇದರಲ್ಲಿ ಪ್ರಧಾನಮಂತ್ರಿಗಳ ನಿವಾಸವು 36,328 ಚದರ ಅಡಿ ಪ್ರದೇಶದಲ್ಲಿ ನಿರ್ಮಾಣವಾಗಲಿದೆ.
ಈ ಸಂಕೀರ್ಣದಲ್ಲಿ ಪ್ರಧಾನಮಂತ್ರಿಗಳ ಮುಖ್ಯ ನಿವಾಸ (ನೆಲ ಮತ್ತು ಮೊದಲ ಮಹಡಿ), PMO, ಒಳಾಂಗಣ ಕ್ರೀಡಾ ಸೌಲಭ್ಯ, ಸಹಾಯಕ ಸಿಬ್ಬಂದಿ ಕ್ವಾರ್ಟರ್ಸ್, ವಿಶೇಷ ರಕ್ಷಣಾ ಗುಂಪು (SPG) ಕಚೇರಿ, ಸೇವಾ ಸದನ ಮತ್ತು ಭದ್ರತಾ ಕಚೇರಿ ಇರಲಿದೆ ಎಂದು ವರದಿ ತಿಳಿಸಿದೆ. ಈ ಸಂಕೀರ್ಣದ ಒಂದು ಪ್ರಮುಖ ಅಂಶವೆಂದರೆ, PMO ನಿವಾಸದಿಂದ ನೇರವಾಗಿ ಕಾರ್ಯನಿರ್ವಾಹಕ ಎನ್ಕ್ಲೇವ್ಗೆ ಸಂಪರ್ಕ ಕಲ್ಪಿಸುವ ಭೂಗತ ವಿಐಪಿ ಸುರಂಗ. ಇದು ಪ್ರಧಾನಮಂತ್ರಿ ಕಾರ್ಯಾಲಯ, ಹೊಸ ಸಂಸತ್ತು ಮತ್ತು ಉಪರಾಷ್ಟ್ರಪತಿ ನಿವಾಸವನ್ನು ಒಳಗೊಂಡಿರುತ್ತದೆ.

No comments:
Post a Comment