ಯಕ್ಷಗಾನ ತರಗತಿ ಶುಭಾರಂಭ
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಅಕ್ಟೋಬರ್ ೨೬ರ ಭಾನುವಾರ ಯಕ್ಷ ಕಲಾ ಕೌಸ್ತುಭ ವತಿಯಿಂದ ಯಕ್ಷಗಾನ ತರಬೇತಿ ತರಗತಿ ಶುಭಾರಂಭಗೊಂಡಿತು.
ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಯಕ್ಷಗಾನ ಗುರು ಶ್ರೀ ಉಮೇಶ ರಾಜ್ ಮಂದಾರ್ತಿ ಮತ್ತು ಅವರ ತಂಡದವರಿಂದ ನಡೆದ ಗಣಪತಿ ಸ್ತುತಿಯನ್ನು ನೆರವೇರಿಸಿದರು.
ಗಣಪತಿ ಸ್ತುತಿಯ ಬಳಿಕ ದೀಪ ಪ್ರಜ್ಞಲನೆ, ಚೌಕಿ ಗಣೇಶ ಸ್ತುತಿ ನಡೆಯಿತು.
ಶ್ರೀ ರಾಜೇಶ ಹೆಗಡೆ ಅವರು ಯಕ್ಷಗಾನದ ಮಹತ್ವದ ಬಗ್ಗೆ ವಿವರಿಸಿದರು. ಶ್ರೀ ಚೌಡರೆಡ್ಡಿ ಅವರು ದೇವಸ್ಥಾನದಲ್ಲಿ ಯಕ್ಷಗಾನ ಕಲಿಯಲು ಬರುವ ಎಲ್ಲರಿಗೂ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಎಲ್ಲ ಸಹಕಾರವನ್ನು ನೀಡುವ ಭರವಸೆ ಕೊಟ್ಟರು.
ಶ್ರೀ ಉಮೇಶರಾಜ್ ಮಂದಾರ್ತಿ ಅವರು ಯಕ್ಷಗಾನವನ್ನು ಏಕೆ ಕಲಿಯಬೇಕು ಮತ್ತು ಕಲಿಸಬೇಕು ಎಂಬ ಬಗ್ಗೆ ವಿವರಿಸಿದರು. ಯಕ್ಷಗಾನದ ಪ್ರಾಥಮಿಕ ತರಬೇತಿಯನ್ನೂ ನೀಡಿದರು.
ಯಕ್ಷ ಕಲಾ ಕೌಸ್ತುಭ ತಂಡದ ಚೆಂಡೆ ವಾದಕ ಸುಬ್ರಹ್ಮಣ್ಯ ಸಾಸ್ತಾನ, ಮದ್ದಳೆ ವಾದಕ ನರಸಿಂಹ ಆಚಾರ್ಯ ಹಾಗೂ ಉದಯ ಮಂದಾರ್ತಿ ಅವರು ಹಾಜರಿದ್ದರು.
ಡಾಲರ್ಸ್ ಕಾಲೋನಿ, ಹೆಣ್ಣೂರು ರಸ್ತೆ, ಸಾತನೂರು ಸೇರಿದಂತೆ ಹೆಗಡೆ ನಗರದ ಆಸುಪಾಸಿನ ಬಹಳಷ್ಟು ಪೋಷಕರು ತಮ್ಮ ಮಕ್ಕಳೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಶ್ರೀ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಶ್ರೀ ಚೌಡರೆಡ್ಡಿ, ಉಪಾಧ್ಯಕ್ಷ ಶಿವಪ್ಪ ಶಾಂತಪ್ಪನವರ, ಕಾರ್ಯದರ್ಶಿ ಶ್ರೀ ರಾಜೇಶ ಕಮಲಾಕರ ಹೆಗಡೆ, ಟ್ರಸ್ಟಿಗಳಾದ ಶ್ರೀ ಮುನಿರಾಜು, ಸುಗುಣನ್, ನೆತ್ರಕೆರೆ ಉದಯಶಂಕರ ಹಾಗೂ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.
ಚೌಕಿ ಪೂಜೆಯ ಸಂದರ್ಭದ ಗಣಪ ಸ್ತುತಿ ಇಲ್ಲಿದೆ:
ದೇವರ ಸನ್ನಿಧಿಯಲ್ಲಿ ನಡೆದ ಗಣಪತಿಸ್ತುತಿಯ ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ. ಯೂ ಟ್ಯೂಬ್ ವಿಡಿಯೋ ನೋಡಲು ಯೂ ಟ್ಯೂಬ್‌ಲಿಂಕ್ ಕ್ಲಿಕ್ ಮಾಡಿರಿ: https://youtu.be/sbWyM8KaKX8
ಯಕ್ಷಗಾನ ಮಂಗಲ ಸಂದರ್ಭದ ವಿಡಿಯೋ ಇಲ್ಲಿದೆ. ನೋಡಲು ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ. ಅಥವಾ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿರಿ: https://youtu.be/206hUkGzjVQ
ಇನ್ನಷ್ಟು ವಿಡಿಯೋಗಳು ಪರ್ಯಾಯ5
ಯೂಬ್ ಚಾನೆಲ್‌ನಲ್ಲಿಯೂ ಮೂಡಿ ಬರಲಿವೆ.
ಪ್ರತಿ ಭಾನುವಾರ ಬೆಳಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ಯಕ್ಷಗಾನ ತರಗತಿಗಳು ನಡೆಯಲಿದ್ದು, ಆಸಕ್ತರು ಶ್ರೀ ಉಮೇಶರಾಜ್ ಮಂದಾರ್ತಿ (ಫೋನ್: 9663671591) ಅವರನ್ನು ಸಂಪರ್ಕಿಸಬಹುದು.
ಯಕ್ಷಗಾನ ಕುರಿತ ಇನ್ನಷ್ಟು ವಿಷಯಗಳಿಗೆ- ಮೇಲಿನ ಯಕ್ಷಗಾನ/ತಾಳಮದ್ದಳೆ ಪುಟ ಕ್ಲಿಕ್ ಮಾಡಿರಿ ಅಥವಾ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ.





No comments:
Post a Comment