ಏರಲಿ ಹಾರಲಿ ಕನ್ನಡ ಧ್ವಜ
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಶ್ರೀ ಬಾಲಾಜಿ ಕೃಪಾ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ೨೦೨೫ ನವೆಂಬರ್ ೧ರ ಶನಿವಾರ ಸರಳವಾಗಿ ೭೦ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಚೆನ್ನೈಯ ಬಿನ್ನಿಮಿಲ್ ಮತ್ತು ಮೈಸೂರು ಸಮೀಪದ ನಂಜನಗೂಡಿನಲ್ಲಿ ಡನ್ ಫೋರ್ಡ್ ಫ್ಯಾಬ್ರಿಕ್ಸ್‌ನಲ್ಲಿ ನಿವೃತ್ತಿಯ ನಂತರ ಸೇವೆ ಸಲ್ಲಿಸಿದ್ದ ಹಿರಿಯ ವ್ಯಕ್ತಿ ಶ್ರೀ ಸಿ. ವರದನ್ ಧ್ವಜಾರೋಹಣ ನೆರವೇರಿಸಿದರು. ಸಂಘದ ಅಧ್ಯಕ್ಷ ಶ್ರೀ ರಾಜೇಶ ಕೆ. ಹೆಗಡೆ ಕನ್ನಡ ಭುವನೇಶ್ವರಿಗೆ ಪೂಜೆ ಸಲ್ಲಿಸಿದರು.
ಶ್ರೀ ಸಿ. ವರದನ್ ಅವರನ್ನು ಶ್ರೀ ಮುನಿರಾಜು, ಶ್ರೀ ಚೌಡರೆಡ್ಡಿ, ಶ್ರೀ ಉದಯಶಂಕರ್ ಸನ್ಮಾನಿಸಿ ಗೌರವಿಸಿದರು.
ಶ್ರೀ ಬಾಲಾಜಿ ಕೃಪಾ ಬಡಾವಣೆ ನಿವಾಸಿಗಳ ಸಂಘದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷ ಶಿವಪ್ಪ ಶಾಂತಪ್ಪನವರ, ಹಿರಿಯ ಸದಸ್ಯ ಶ್ರೀ ರವಿಚಂದ್ರನ್ ಅವರ ಪತ್ನಿ, ಶ್ರೀ ವರದನ್ ಅವರ ಪುತ್ರಿ ಹೇಮಾ, ಸಂಘದ ಅಧ್ಯಕ್ಷ ಶ್ರೀ ರಾಜೇಶ ಹೆಗಡೆ ಮಾತನಾಡಿದರು. ಶ್ರೀ ನೆತ್ರಕೆರೆ ಉದಯಶಂಕರ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋ ಇಲ್ಲಿದೆ.


No comments:
Post a Comment