Wednesday, April 15, 2009

ಹೋಲಿಸ್ಟಿಕ್ ಲೈಫ್ಸ್ಟೈಲ್ ಫಾರ್ ಹೀಲಿಂಗ್

ಹೋಲಿಸ್ಟಿಕ್ ಲೈಫ್ಸ್ಟೈಲ್ ಫಾರ್ ಹೀಲಿಂಗ್

'ಹೋಲಿಸ್ಟಿಕ್ ಲೈಫ್ಸ್ಟೈಲ್ ಫಾರ್ ಹೀಲಿಂಗ್' - ಕೇವಲ ಪುಸ್ತಕ ಮಾತ್ರವಲ್ಲ. ನಾಗರಾಜರಾಯರ ನಲ್ವತ್ತು ವರ್ಷಗಳ 'ಪರಿಪೂರ್ಣ ಜೀವನ ಶೈಲಿಯ' ಅನುಭವದ ಸಾರ. ಯೋಗ-ಧ್ಯಾನ, ಮಿತ ಆಹಾರ, ಪೌಷ್ಟಿಕ ಆಹಾರ ಬಳಕೆಯಂತಹ ಅನೇಕ ಪದ್ಧತಿಗಳನ್ನು ರಾಯರು ಜೀವನದಲ್ಲಿ ಅಳವಡಿಸಿಕೊಂಡು, ತಮಗಿದ್ದ ಅಸ್ತಮ, ಅರ್ಥರೆಟಿಸ್, ಹೈಪರ್ ಅಸಿಡಿಟಿ, ಮತ್ತು ಸಕ್ಕರೆ ಕಾಯಿಲೆಗಳಂತಹ ರೋಗಗಳಿಗೆ ಮದ್ದು ಕಂಡುಕೊಂಡು, ಅದರ ಪರಿಣಾಮಗಳು ಹಾಗೂ ಅನುಭವವನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಲೇಖಕರು: ಡಾ.ಎ.ಎನ್ .ನಾಗರಾಜ್
 
ಪುಸ್ತಕ ಬಿಡುಗಡೆ, ಏಪ್ರಿಲ್ 16, 2009, ಗುರುವಾರ,
 
ಶತಾಯುಷಿ ದಿ.ಪ್ರೊ.ಎ.ಎನ್.ಮೂತರ್ಿರಾಯರ ಪುತ್ರ ಡಾ.ಎ.ಎನ್.ನಾಗರಾಜ್ ಅವರು 'ಹೋಲಿಸ್ಟಿಕ್ ಲೈಫ್ಸ್ಟೈಲ್ ಫಾರ್ ಹೀಲಿಂಗ್' ಎಂಬ ಪುಸ್ತಕ ರಚಿಸಿದ್ದಾರೆ. 'ಸಕಲ ರೋಗಗಳಿಗೂ ಪರಿಪೂರ್ಣ ಶೈಲಿಯೇ ಮದ್ದು' ಎಂಬುದು ಈ ಪುಸ್ತಕದ ಒಟ್ಟಾರೆ ಸಾರ.
ಏಪ್ರಿಲ್ 16, 2009ರಂದು, ಬೆಂಗಳೂರಿನ ಇನ್ಸಿಸ್ಟ್ಯೂಟ್ ಆಫ್ ವಲ್ಡರ್್ ಕಲ್ಚರ್ನಲ್ಲಿ ಈ ಪುಸ್ತಕ ಬಿಡುಗಡೆಯಾಗಲಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಖ್ಯಾತ ಸಾಹಿತಿ ಶ್ರೀನಿವಾಸ ವೈದ್ಯ ಹಾಗೂ ಪ್ರಧಾನ ಅರಣ್ಯ ಸಂಕ್ಷಣಾಧಿಕಾರಿ(ನಿವೃತ್ತ) ಶ್ರೀ ಅಜ್ಜಂಪುರ ಕೃಷ್ಣಸ್ವಾಮಿ ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ. ಅಂದಿನ ಕಾರ್ಯಕ್ರಮದಲ್ಲಿ 'ಪರಿಪೂರ್ಣ ಜೀವನ ಶೈಲಿ' ಕುರಿತು ಸಂವಾದ ಕಾರ್ಯಕ್ರಮ ಕೂಡ ಏರ್ಪಡಿಸಲಾಗಿದೆ. ಗೋಷ್ಠಿಯಲ್ಲಿ ಬೆಂಗಳೂರು ವಿಜಯ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ.ಶ್ರೀಧರ್, ಕವಿ ಕೆ.ಪಿ ಸುರೇಶ್, ಧಾರವಾಡದ ಬೈಫ್ ಸಂಸ್ಥೆಯ ಅಧಿಕಾರಿ ಡಾ. ಪ್ರಕಾಶ್ ಭಟ್, ಖ್ಯಾತ ಗೈನಕಾಲಜಿಸ್ಟ್ ಡಾ. ಸಂಜೀವ್ ಕುಲಕರ್ಣಿಯವರು ಭಾಗವಹಿಸುತ್ತಾರೆ.

ಪುಸ್ತಕ ಕುರಿತು ಒಂದಿಷ್ಟು :
'ಹೋಲಿಸ್ಟಿಕ್ ಲೈಫ್ಸ್ಟೈಲ್ ಫಾರ್ ಹೀಲಿಂಗ್' - ಕೇವಲ ಪುಸ್ತಕ ಮಾತ್ರವಲ್ಲ. ನಾಗರಾಜರಾಯರ ನಲ್ವತ್ತು ವರ್ಷಗಳ 'ಪರಿಪೂರ್ಣ ಜೀವನ ಶೈಲಿಯ' ಅನುಭವದ ಸಾರ. ಯೋಗ-ಧ್ಯಾನ, ಮಿತ ಆಹಾರ, ಪೌಷ್ಟಿಕ ಆಹಾರ ಬಳಕೆಯಂತಹ ಅನೇಕ ಪದ್ಧತಿಗಳನ್ನು ರಾಯರು ಜೀವನದಲ್ಲಿ ಅಳವಡಿಸಿಕೊಂಡು, ತಮಗಿದ್ದ ಅಸ್ತಮ, ಅರ್ಥರೆಟಿಸ್, ಹೈಪರ್ ಅಸಿಡಿಟಿ, ಮತ್ತು ಸಕ್ಕರೆ ಕಾಯಿಲೆಗಳಂತಹ ರೋಗಗಳಿಗೆ ಮದ್ದು ಕಂಡುಕೊಂಡು, ಅದರ ಪರಿಣಾಮಗಳು ಹಾಗೂ ಅನುಭವವನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ರಾಸಾಯನಿಕ ಕೃಷಿ ಉತ್ಪನ್ನಗಳ ಅಪಾಯಗಳನ್ನು ಈ ಪುಸ್ತಕದಲ್ಲಿ ವಿವರಿಸಿದ್ದಾರೆ. ಮಾನಸಿಕ ಒತ್ತಡದಿಂದ ಹೇಗೆ ದೇಹದಲ್ಲಿನ ಪೌಷ್ಟಿಕಾಂಶಗಳು ದೊಡ್ಡ ಪ್ರಮಾಣದಲ್ಲಿ ಖಚರ್ಾಗುತ್ತವೆ. ಪೌಷ್ಟಿಕಾಂಶಗಳ ಕೊರತೆಯಿಂದ ಕಾಯಿಲೆಗಳು ಹೇಗೆ ಉಲ್ಬಣಗೊಳ್ಳುತ್ತವೆ. ಇಂಥ ಮಾನಸಿಕ ಒತ್ತಡಕ್ಕೆ ಕಾರಣಗಳೇನು? ಮತ್ತು ಒತ್ತಡ ನಿಯಂತ್ರಣಕ್ಕೆ ಅಗತ್ಯ ಕ್ರಮಗಳು ಯಾವುವು ಎಂಬುದರ ಬಗ್ಗೆ ಪುಸ್ತಕದಲ್ಲಿ ಲೇಖಕರು ವಿವರಿಸಿದ್ದಾರೆ.

ಡಾ.ನಾಗರಾಜ್ ಪರಿಚಯ : 
ಡಾ.ನಾಗರಾಜ್ ಅವರು ಇಲಿನಾಯ್ಸ್ ವಿಶ್ವವಿದ್ಯಾಲಯದಿಂದ ಜೀವಶಾಸ್ತ್ರದಲ್ಲಿ ಪಿ.ಎಚ್ಡಿ ಪದವಿ ಪಡೆದಿದ್ದಾರೆ. ವಿಶ್ವ ಸಂಸ್ಥೆಯ ಆಹಾರ ಮತ್ತುಕೃಷಿ ಸಂಸ್ಥೆಗೆ ಪರಿಣತ-ಸಲಹೆಗಾರರಾಗಿಯೂ ಕೆಲಸ ಮಾಡಿದ್ದಾರೆ. ಕಳೆದ ಹಲವು ವರ್ಷಗಳಿಂದ ತೀರ್ಥಹಳ್ಳಿ ಸಮೀಪದ ಭೀಮನಕಟ್ಟೆಯಲ್ಲಿ ಎರಡೂವರೆ ಎಕರೆಯಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ. 30 ವರ್ಷಗಳಿಂದ ಆರೋಗ್ಯ ಸಲಹೆಗಾರರಾಗಿಯೂ ತೊಡಗಿಸಿಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗೆ ಡಾ.ಎ.ಎನ್.ನಾಗರಾಜ್  ದೂರವಾಣಿ ಸಂಖ್ಯೆ 9741626267, 08181229037, an.nagaraj@yahoo.com

-Ganadhalu Srikanta,


No comments:

Advertisement