Thursday, July 9, 2009

ಸಮುದ್ರ ಮಥನ 31: ಪ್ರೇಮದಿಂದ ಜಾರಿದ್ದನ್ನು ಮೇಲೆತ್ತಲು ಕನಿಕರಿಸಿ, ಸಹಕರಿಸಿ

ಸಮುದ್ರ ಮಥನ 31: ಪ್ರೇಮದಿಂದ ಜಾರಿದ್ದನ್ನು

ಮೇಲೆತ್ತಲು ಕನಿಕರಿಸಿ, ಸಹಕರಿಸಿ

ಪ್ರಸ್ತುತ, ನಮ್ಮ ರಾಷ್ಟ್ರದ ಪರಿಸ್ಥಿತಿಯೂ ಕನಿಕರಿಸಲು ಯೋಗ್ಯವಾಗಿದೆ. ಬಲ್ಲ ಪ್ರತಿಯೊಬ್ಬರೂ ಅದನ್ನು ಸುಧಾರಿಸಲು ತಮ್ಮನ್ನು ತಾವು ಕೊಟ್ಟುಕೊಳ್ಳಬೇಕು.

ಪ್ರೇಮ ತತ್ತ್ವದ ಮೇಲೆ ರಾಷ್ಟ್ರ ಕಟ್ಟಲು ದೂರ ದೇಶದ ದಾರ್ಶನಿಕ ಕಟ್ಟಿಕೊಟ್ಟ ನೋಟವನ್ನು ಕಳೆದ ಸಂಚಿಕೆಯಲ್ಲಿ ನೋಡಿದ್ದೇವೆ.

ಅದರಂತೆ ಪರಿಸ್ಥಿತಿ ಇಲ್ಲದಾದಾಗ, ಬಲ್ಲವರು ಎಷ್ಟೆಷ್ಟು ರೀತಿಯಲ್ಲಿ ಕನಿಕರಿಸಬಹುದು ಮತ್ತು ಬಿದ್ದ ಪ್ರಜೆಗಳನ್ನು ಎಲ್ಲೆಲ್ಲಿಂದ ಮೇಲೆತ್ತಬೇಕಾಗುವುದು ಎಂಬುದನ್ನೂ ಆ ದಾರ್ಶನಿಕ ತನ್ನ ಸುಂದರ ಸಾಲುಗಳಲ್ಲಿ ಹಿಡಿದಿಡುತ್ತಾನೆ.

"ಯಾವ ರಾಷ್ಟ್ರದಲ್ಲಿ ನಂಬಿಕೆಗಳೇ ತುಂಬಿದ್ದು ಧರ್ಮ ಶೂನ್ಯವಾಗಿದೆಯೋ ಅಂಥ ರಾಷ್ಟ್ರವನ್ನು ಕನಿಕರಿಸಿ /
ಯಾವ ರಾಷ್ಟ್ರ ತಾನು ನೇಯದ ಬಟ್ಟೆಯನ್ನು ಉಡುತ್ತದೆಯೋ, ತಾನು ಬೆಳೆಯದ ಆಹಾರವನ್ನು ತಿನ್ನುತ್ತದೆಯೋ ಅದನ್ನು ಕನಿಕರಿಸಿ / ಯಾವ ರಾಷ್ಟ್ರ ಪೀಡಕರನ್ನು ಧೀರ ಶೂರ ಎಂದು ಹೊಗಳುತ್ತದೆಯೋ, ಹೊಳೆಯುವ ಆಕ್ರಮಣಕಾರರನ್ನು ಉದಾರಿ ಎಂದು ಹೊಗಳುತ್ತದೆಯೋ ಅದನ್ನು ಕನಿಕರಿಸಿ / ಯಾವ ರಾಷ್ಟ್ರ ಒಂದು ಭಾವೋದ್ರೇಕವನ್ನು ಕನಸಿನಲ್ಲಿ ಕನಿಕರಿಸಿ, ಎಚ್ಚರದ ಸ್ಥಿತಿಯಲ್ಲಿ ಅದಕ್ಕೆ ವಶವಾಗುತ್ತದೆಯೋ ಅದನ್ನು ಕನಿಕರಿಸಿ / ಸ್ಮಶಾನ ಯಾತ್ರೆಯಲ್ಲಲ್ಲದೇ ಬೇರೆ ಸಮಯದಲ್ಲಿ ತನ್ನ ದನಿಯನ್ನು ಎತ್ತರಿಸದ, ತನ್ನ ಅವಶೇಷಗಳನ್ನಲ್ಲದ ಬೇರೇನನ್ನೂ ಹಾಡಿ ಹೊಗಳದ, ತನ್ನ ಕತ್ತನ್ನು ಕತ್ತಿ ಮತ್ತು ವಧೆಯ ಪೀಠದ ನಡುವೆ ಇಟ್ಟಾಗಲಲ್ಲದೆ ದಂಗೆಯೇಳದ ರಾಷ್ಟ್ರವನ್ನು ಕನಿಕರಿಸಿ / ಯಾವ ರಾಷ್ಟ್ರದಲ್ಲಿ ರಾಜತಂತ್ರಜ್ಞ ನರಿಯೋ, ತತ್ತ್ವಶಾಸ್ತ್ರಜ್ಞ ಯಕ್ಷಿಣಿಗಾರನೋ, ಕಲೆ ತೇಪೆ ಹಾಕುವುದೋ ಅಥವಾ ಅನುಕರಿಸುವುದೋ ಅದನ್ನು ಕನಿಕರಿಸಿ / ಹೊಸ ರಾಜನನ್ನು ಬಾಜಾ ಬಜಂತ್ರಿಯಿಂದ ಸ್ವಾಗತಿಸಿ, ಹಳೆಯವನನ್ನು ಕೂಗಿ ಕಿರುಚಿ ಓಡಿಸುವ, ಮತ್ತೆ ಹೊಸಬನನ್ನು ಬಾಜಾ ಬಜಂತ್ರಿಯಿಂದ ಸ್ವಾಗತಿಸುವ ರಾಷ್ಟ್ರವನ್ನು ಕನಿಕರಿಸಿ / ಯಾವ ರಾಷ್ಟ್ರದಲ್ಲಿ ಸಂತರು ವಯೋವೃದ್ಧರಾಗಿ ಮೌನಿಗಳಾಗಿದ್ದಾರೋ, ಅಲ್ಲಿನ ಸಶಕ್ತರು ಇನ್ನೂ ತೊಟ್ಟಿಲಲ್ಲಿದ್ದಾರೋ ಅಂಥದನ್ನು ಕನಿಕರಿಸಿ / ಯಾವ ರಾಷ್ಟ್ರ ಚೂರು ಚೂರಾಗಿ ಒಡೆದು ಹೋಗಿ, ಪ್ರತಿಯೊಂದು ಚೂರು ತಾನೇ ಒಂದು ರಾಷ್ಟ್ರ ಎಂದು ಭಾವಿಸಿದೆಯೋ ಅಂಥ ರಾಷ್ಟ್ರವನ್ನು ಕನಿಕರಿಸಿ /"

ಪ್ರಸ್ತುತ, ನಮ್ಮ ರಾಷ್ಟ್ರದ ಪರಿಸ್ಥಿತಿಯೂ ಕನಿಕರಿಸಲು ಯೋಗ್ಯವಾಗಿದೆ. ಬಲ್ಲ ಪ್ರತಿಯೊಬ್ಬರೂ ಅದನ್ನು ಸುಧಾರಿಸಲು ತಮ್ಮನ್ನು ತಾವು ಕೊಟ್ಟುಕೊಳ್ಳಬೇಕು.


No comments:

Advertisement