ಬೆಟ್ಟ ಮಹಮ್ಮದನ ಬಳಿಗೆ ಬಾರದಿದ್ದರೆ....
ಲಕ್ಷ್ಮೀಶ ತೋಳ್ಪಾಡಿ ಅವರ ಚಿಂತನೆಯ ಧಾರೆಯಲ್ಲಿ ನಾನು ಮುಳುಗಿ ಎದ್ದಿದ್ದುದು 1975-76ರಲ್ಲಿ- ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೆರೆವಾಸಿಯಾಗಿದ್ದಾಗ. ಮಂಗಳೂರು ಸಬ್ ಜೈಲಿನಲ್ಲಿ. ಸೆರೆಮನೆಯನ್ನೇ ಅರಮನೆಯನ್ನಾಗಿಸಿ ಚಿಂತನೆಯ ಹೊಳೆ ಹರಿಸಿದ್ದ ತೋಳ್ಪಾಡಿ ಮತ್ತು ವಿಶ್ವೇಶ್ವರ ಭಟ್ಟರು, ತುರ್ತು ಪರಿಸ್ಥಿತಿ ವಿರೋಧಿಸಿ ಸೆರೆಮನೆ ಸೇರಿದ್ದ ನೂರಾರು ಮಂದಿ ಸತ್ಯಾಗ್ರಹಿಗಳಿಗೆ ನಿತ್ಯ ಭಗವದ್ಗೀತೆಯ ಕುರಿತು ವ್ಯಾಖ್ಯಾನ ಮಾಡುತ್ತಿದ್ದುದು ನೆನಪಿನಿಂದ ಅಳಿಯುವಂತಹುದಲ್ಲ.
ಆ ಬಳಿಕ ಒಮ್ಮೆ ಪುತ್ತೂರಿಗೆ ಹೋಗಿದ್ದಾಗ ಪುತ್ತೂರಜ್ಜನ ಆಶ್ರಮದಲ್ಲಿ ಸಿಕ್ಕಿದ್ದರು. ಊರಿಗೆ ಬಂದ ಗುರುವಿನ ಜ್ಞಾನದ ಬಗ್ಗೆ ಮಾತನಾಡುವ ಬದಲು ಬಹಳಷ್ಟು ಮಂದಿ ಉದ್ದಕ್ಕೆ ಬೆಳೆದ ಗುರುವಿನ 'ಉಗುರು' ಬಗ್ಗೆ ಯೋಚಿಸುವ ಬಗೆಯನ್ನು ಸ್ವಾರಸ್ಯಕರವಾಗಿ ವಿವರಿಸಿದ್ದರು.
ಪುತ್ತೂರಜ್ಜನ ಚಿಂತನೆಗಳ ಬಗ್ಗೆ ಬರೆದ ಬರವಣಿಗೆಗಳ ಪುಸ್ತಕ 'ಬೆಟ್ಟ ಮಹಮ್ಮದನ ಬಳಿಗೆ ಬಾರದಿದ್ದರೆ..' ಇದೀಗ ಬಿಡುಗಡೆ'ಯಾಗುತ್ತಿದೆ. ಪ್ರಜಾವಾಣಿ ಮೆಟ್ರೊ ಗಮನಿಸಿ.
ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸುವೆ.
- ನೆತ್ರಕೆರೆ ಉದಯಶಂಕರ
No comments:
Post a Comment