Monday, January 26, 2015

ಖ್ಯಾತ ವ್ಯಂಗ್ಯ ಚಿತ್ರಕಾರ ಆರ್.ಕೆ ಲಕ್ಷ್ಮಣ್ ಇನ್ನಿಲ್ಲ RK Laxman no more

ಖ್ಯಾತ ವ್ಯಂಗ್ಯ ಚಿತ್ರಕಾರ ಆರ್.ಕೆ ಲಕ್ಷ್ಮಣ್ ಇನ್ನಿಲ್ಲ


ಪುಣೆ: ಖ್ಯಾತ ವ್ಯಂಗ್ಯ ಚಿತ್ರಕಾರ ಆರ್.ಕೆ ಲಕ್ಷ್ಮಣ್ ಅವರು ಇನ್ನಿಲ್ಲ. ತಮ್ಮ ವ್ಯಂಗ್ಯ ರೇಖೆಯನ್ನು ಅಜರಾಮರಗೊಳಿಸಿ ಅವರು ಭಾರತವು 66ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿದ್ದ ವೇಳೆಯಲ್ಲಿ 26 ಜನವರಿ 2015ರ ಸೋಮವಾರ ಸಂಜೆ ಅವರು ದೈವಾಧೀನರಾಗಿದ್ದಾರೆ.

ಕರ್ನಾಟಕದ ಮೈಸೂರು ಮೂಲದವರಾದ 93 ವರ್ಷದ ರಾಸಿಪುರಂ ಕೃಷ್ಣಸ್ವಾಮಿ ಲಕ್ಷ್ಮಣ್ ಅಯ್ಯರ್ ಅವರು ಪುಣೆಯ ದೀನನಾಥ್ ಮಂಗೇಷ್ಕರ್ ಖಾಸಗಿ ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಈದಿನ ಸಂಜೆ ಬಹು ಅಂಗಾಂಗಳ ವೈಫಲ್ಯದಿಂದ ಅವರು ಇಹಲೋಕ ತ್ಯಜಿಸಿದರು.

2005ರಲ್ಲಿ ಕೇಂದ್ರ ಸರ್ಕಾರ ಆರ್.ಕೆ ಲಕ್ಷ್ಮಣ್ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಮೈಸೂರಿನಲ್ಲಿ 1921ರ ಅಕ್ಟೋಬರ್ 24ರಂದು ಜನಿಸಿದ್ದ ರಾಸಿಪುರಂ ಕೃಷ್ಣಸ್ವಾಮಿ ಅಯ್ಯರ್ ಲಕ್ಷ್ಮಣ್ ಅವರು ಖ್ಯಾತ ಕಾದಂಬರಿಕಾರ ಆರ್.ಕೆ.ನಾರಾಯಣ್ ಅವರ ಸಹೋದರ.

ಏಳು ದಶಕಗಳ ಹಿಂದೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಕಾಮನ್ ಮ್ಯಾನ್ ಕಾರ್ಟೂನುಗಳನ್ನ ಚಿತ್ರಿಸುತ್ತಿದ್ದುದು ಇದೇ ಆರ್.ಕೆ.ಲಕ್ಷ್ಮಣ್.


ಟೈಮ್ ಆಫ್ ಇಂಡಿಯಾಗೂ ಮೊದಲು ಇವರು ಕನ್ನಡದಲ್ಲಿ ಪ್ರಕಟವಾಗುತ್ತಿದ್ದ ಹಾಸ್ಯ ಪತ್ರಿಕೆ ಕೊರವಂಜಿಯಲ್ಲಿ ವ್ಯಂಗ್ಯ ಚಿತ್ರ ಬಿಡಿಸುತ್ತಿದ್ದರು. ಸಹೋದರ ಆರ್.ಕೆ.ನಾರಾಯಣ್ ಬರೆಯುತ್ತಿದ್ದ ಕಥೆಗಳಿಗೆ ಲಕ್ಷ್ಮಣ್ ಅವರೇ ಕಾರ್ಟೂನ್ ಮಾಡಿಕೊಡುತ್ತಿದ್ದರು. ಆದರೆ, ಟೈಮ್ಸ್ ಆಫ್ ಇಂಡಿಯಾದಲ್ಲಿ ಇವರು ಬರೆಯುತ್ತಿದ್ದ ಜನಸಾಮಾನ್ಯ (ಕಾಮನ್ ಮ್ಯಾನ್) ವ್ಯಂಗ್ಯ ಚಿತ್ರಗಳು ಇವರ ಖ್ಯಾತಿಯನ್ನು ವಿಶ್ವಕ್ಕೇ ಹರಡುವಂತೆ ಮಾಡಿದವು.

ಭಾರತೀಯ ವ್ಯಂಗ್ಯ ಚಿತ್ರಗಳಿಗೆ ಒಂದು ಹೊಸ ಆಯಾಮವನ್ನೇ ಕೊಟ್ಟ ಶ್ರೇಯಸ್ಸು ಲಕ್ಷ್ಮಣ್ ಅವರದು.

ಆರ್.ಕೆ ಲಕ್ಷ್ಮಣ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

ನವದೆಹಲಿ: ಜನಪ್ರಿಯ ವ್ಯಂಗ್ಯ ಚಿತ್ರಕಾರ ಆರ್.ಕೆ ಲಕ್ಷ್ಮಣ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಆರ್.ಕೆ ಲಕ್ಷ್ಮಣ್ ಅವರ ವ್ಯಂಗ್ಯ ಚಿತ್ರಗಳು ಜನರ ಮೊಗದಲ್ಲಿ ನಗು ತರಿಸುತ್ತಿದ್ದು, ಅವರ ನೆನಪು ಅಜರಾಮರ. ಆರ್.ಕೆ ಲಕ್ಷ್ಮಣ್‌ರ ಕುಟುಂಬಕ್ಕೆ ಪರಮಾತ್ಮ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಮೋದಿ ಹೇಳಿದ್ದಾರೆ.
'Common Man'  RK Laxman no more


Pune: Rasipuram Krishnaswamy Laxman (24 October 1921 - 26 January 2015) popularly known as R K Laxman who was an Indian cartoonist, illustrator, and humorist, is no more.

The genius chronicler of India's life and political history, who unfailingly brought millions of readers the gift of a chuckle every day died at Pune on the evening Monday 26th January 2015, the day on which India observed its 66th Republic Day. He was 93.

He is best known for his creation The Common Man, for his daily cartoon strip, "You Said It" in The Times of India, which started in 1951. Laxman was hospitalised some days back with life threatening condition died as his condition worsened even after which he was put on life support.

R K Laxman had his last breath at Dinanath Mangeshkar hospital in Pune.
Born on 24th October 1921 in Mysore, Laxman had no formal training in cartooning but the work he put out over decades was sheer genius. He began by drawing for local papers, and illustrating the stories of his famous elder brother, novelist R K Narayan, while still at college.

After stints at various publications and even a film studio after his graduation, he came to Mumbai in the 1940s. After a brief spell at the Free Press Journal, he came to the Times group in 1947 and stayed there for the rest of his glittering career.

The recipient of numerous awards, among them the Padma Bhushan, Padma Vibhushan and Magsaysay Award, Laxman's fan base ran into millions. He never let them down, drawing two cartoons a day, always brilliant, with consummate ease. His Common Man, created in 1957, was the symbol of India's ordinary people, their trials and tribulations, their little joys and sorrows, and the mess they found themselves in thanks to the political class and bureaucracy. But despite the sobering reality of this, there was never any rancour in Laxman's cartoons. His humour was always delightful, and no one could hold a candle to his brushstrokes.

Laxman continued cartooning for the Times till 2010, even after suffering a stroke in 2003 which paralysed his left side. In 2010, he suffered another stroke which robbed him of his speech. Ill-health forced him to stop cartooning for the Times but he continued drawing till the very end.

Laxman's last few years were spent in Pune. In the middle of January, he was admitted to hospital to treat a throat infection but complications ensued. The end came after multi-organ failure on January 26.

R. K. Laxman was born in Mysore. His father was a headmaster and Laxman was the youngest of six sons, an older brother is the famous novelist R. K. Narayan.

Laxman was engrossed by the illustrations in magazines such as The Strand Magazine, Punch, Bystander, Wide World and Tit-Bits, even before he could read. Soon he was drawing on his own, on the floors, walls and doors of his house and doodling caricatures of his teachers at school.

Praised by a teacher for his drawing of a peepal leaf, he began to think of himself as an artist in the making. Another early influence on Laxman were the cartoons of the world-renowned British cartoonist, Sir David Low (whose signature he misread as "cow" for a long time) that appeared now and then in The Hindu. Laxman notes in his autobiography, The Tunnel of Time.

No comments:

Advertisement