Tuesday, November 12, 2019

'ಶ್ರೀರಾಮನ ವಂಶಸ್ಥರು’ ಇಂದಿಗೂ ಜೀವಂತ?

'ಶ್ರೀರಾಮನ ವಂಶಸ್ಥರು’ ಇಂದಿಗೂ ಜೀವಂತ?
ನಾವು ರಘುವಂಶದ ೩೦೯ನೇ ತಲೆಮಾರಿನವರು ಎನ್ನುತ್ತಾರೆ ಇವರು
ನವದೆಹಲಿ: ಜೈಪುರದ ಮಾಜಿ ರಾಜಕುಟುಂಬದ ಸದಸ್ಯೆ ಹಾಗೂ ಬಿಜೆಪಿ ಶಾಸಕಿ ದಿಯಾ ಕುಮಾರಿ ಅವರು ಅಯೋಧ್ಯೆಯ ಶ್ರೀರಾಮಚಂದ್ರನ ಪುತ್ರ ಕುಶನ ವಂಶಸ್ಥರು ತಾವು ಎಂಬುದಾಗಿ ಪ್ರತಿಪಾದಿಸಿದ ಬಳಿಕ, ಮೇವಾಡ ರಾಜಮನೆತನದ ಲಕ್ಷ್ಯ ರಾಜ್ ಸಿಂಗ್ ಮತ್ತು  ರಾಜಸ್ಥಾನದ ಕರ್ಣಿಸೇನಾ ಸ್ಥಾಪಕ ಲೋಕೇಂದ್ರ ಸಿಂಗ್ ಕಲ್ವಿ ಅವರು ತಮ್ಮದು ಶ್ರೀರಾಮನ ಪುತ್ರ ಲವನ ವಂಶ ಎಂಬುದಾಗಿ ಪ್ರತಿಪಾದಿಸಿದರು.
ಅಯೋಧ್ಯಾ  ಭೂ ವಿವಾದಕ್ಕೆ ಸಂಬಂಧಿಸಿದಂತೆ ದೈನಂದಿನ ವಿಚಾರಣೆ ನಡೆಸುತ್ತಿದ್ದ ವೇಳೆಯಲ್ಲಿ ಸುಪ್ರೀಂ ಕೋರ್ಟಿನ ಪಂಚ ಸದಸ್ಯ ಸಂವಿಧಾನ ಪೀಠವುರಘುವಂಶದವರು ಯಾರಾದರೂ ಇದ್ದಾರೆಯೇ? ಅಥವಾ ಎಲ್ಲಿಯಾದರೂ ವಾಸಿಸುತ್ತಿದ್ದಾರೆಯೇ ಎಂದು ತಿಳಿಯಲು ಪ್ರಯತ್ನಿಸಿತ್ತು. ಇದಾದ ಕೆಲವೇ ದಿನಗಳ ನಂತರ ಇವರುನಾವು ಶ್ರೀರಾಮನ ವಂಶಸ್ಥರುಎಂಬುದಾಗಿ ಪ್ರತಿಪಾದಿಸಿದ್ದರು.

ಪ್ರತಿಪಾದನೆಗಳ ಪ್ರಕಾರ, ಹಿಂದಿನ ಮೇವಾಡ ರಾಜಮನೆತನದ ಲಕ್ಷ್ಯರಾಜ್ ಸಿಂಗ್ ಅವರು ಅಯೋಧ್ಯೆಯ ಶ್ರೀರಾಮಚಂದ್ರನ ಹಿರಿಯ ಪುತ್ರ ಲವನ ವಂಶಸ್ಥರು. ಅವರು ಪ್ರಾಚೀನ ಕಾಲದಲ್ಲಿ ಲುವ್ಕೋಟೆ (ಲಾಹೋರ್) ಅನ್ನು ಸ್ಥಾಪಿಸಿದ್ದರು ಎಂದು ಹೇಳಿಕೊಂಡಿದ್ದು. ಲವನ ಪೂರ್ವಜರು ಅಹಾದ್ (ಮೇವಾರ್) ಗೆ ಬಂದು ಸಿಸೋಡಿಯಾ ರಾಜವಂಶವನ್ನು ಸ್ಥಾಪಿಸಿದ್ದಾರೆ ಎನ್ನಲಾಗಿದೆ.

ಮೇವಾಡ ರಾಜಮನೆತನದ ಸಂಪ್ರದಾಯಗಳು ಮತ್ತು ಪದ್ಧತಿಗಳು, ಶಿವಭಕ್ತರು ಮತ್ತು ಸೂರ್ಯವಂಶಿ ಅವರು ಅಯೋಧ್ಯೆಯ ಶ್ರೀರಾಮನಿಂದ ಬಂದವರು ಎಂಬುದಕ್ಕೆ ಸಾಕ್ಷಿ ಎಂದು ಇತಿಹಾಸಕಾರರು ಬರೆದಿದ್ದಾರೆ ಎಂಬುದಾಗಿ ಲಕ್ಷ್ಯರಾಜ್ ಸಿಂಗ್ ಹೇಳಿದ್ದಾರೆ.

ಕರ್ನಲ್ ಜೇಮ್ಸ್ ಟಾಡ್ ಅವರ ಪುಸ್ತಕವನ್ನು ಉಲ್ಲೇಖಿಸಿರುವ ಸಿಂಗ್ ಅವರು ಪುಸ್ತಕದಲ್ಲಿಅನ್ನಲ್ಸ್ ಅಂಡ್ ಆಂಟಿಕ್ವಿಟೀಸ್ ಆಫ್ ರಾಜಸ್ಥಾನ್ಗ್ರಂಥದಲ್ಲಿ ಶ್ರೀರಾಮನ ರಾಜಧಾನಿ ಅಯೋಧ್ಯೆ ಎಂದು ಬರೆಯಲಾಗಿದೆ. ಲವನ ಪೂರ್ವಜರು ಪ್ರಾಚೀನ ಕಾಲದಲ್ಲಿ ಗುಜರಾತಿಗೆ ತೆರಳಿದ್ದರು ಮತ್ತು ಅಲ್ಲಿಂದ ಅಹಾದ್ಗೆ (ಮೇವಾಡ) ಬಂದು ಅಲ್ಲಿ ಅವರು ಸಿಸೋಡಿಯಾ ರಾಜವಂಶವನ್ನು ಸ್ಥಾಪಿಸಿದರು. ಆರಂಭದಲ್ಲಿ ಅವರ ರಾಜಧಾನಿ ಚಿತ್ತೋಡವಾಗಿತ್ತು ಮತ್ತು ನಂತರ ಅದನ್ನು ಉದಯಪುರಕ್ಕೆ ಸ್ಥಳಾಂತರಿಸಲಾಯಿತು. ಶ್ರೀರಾಮನು ಶಿವನನ್ನು ಆರಾಧಿಸುತ್ತಿದ್ದನು ಮತ್ತು ಮೇವಾಡದ ರಾಯರು ಪೂಜಿಸುತ್ತಾರೆ ಎಂಬುದಾಗಿ ಅವರು ನುಡಿದರು.

ಇದಕ್ಕೆ ಮುನ್ನ ರಾಜಸ್ಥಾನ ಕರ್ಣಿ ಸೇನಾ ಸ್ಥಾಪಕ ಲೋಕೇಂದ್ರ ಸಿಂಗ್ ಕಲ್ವಿ ಅವರು ತಾವು ಸಿಸೋಡಿಯಾ ರಜಪೂತನಾಗಿದ್ದು, ತಮ್ಮ ಕುಟುಂಬವು ಶ್ರೀರಾಮನ ಹಿರಿಯ ಪುತ್ರ ಲವನ ವಂಶಕ್ಕೆ ಸೇರಿದೆ ಎಂದು ಹೇಳಿದ್ದರು. ಹಿಂದಿ ಚಿತ್ರ ಪದ್ಮಾವತ್ ವಿರುದ್ಧ ನಡೆದ ಪ್ರತಿಭಟನೆ ಕಾಲದಲ್ಲಿ ಲೋಕೇಂದ್ರ ಸಿಂಗ್ ಕಲ್ವಿ ಪ್ರಚಾರಕ್ಕೆ ಬಂದಿದ್ದರು. ಬಿಜೆಪಿ ಸಂಸದೆ ದಿಯಾಕುಮಾರಿ ಅವರು ತಮ್ಮದು ಕುಶನ ವಂಶ ಎಂಬುದಾಗಿ ಹೇಳಿದ ಬಳಿಕ, ತಮ್ಮ ಪ್ರತಿಪಾದನೆ ಮಾಡಿದ್ದ ಕಲ್ವಿ ಅಯೋಧ್ಯಾ ವಿವಾದಕ್ಕೆ ಸಂಬಂಧಿಸಿದಂತೆ ತಾವು ಸುಪ್ರೀಂಕೋರ್ಟಿನಲ್ಲಿ ಹಾಜರಾಗಬಯಸಿರುವುದಾಗಿಯೂ ಹೇಳಿದ್ದರು.  ವಿವಾದ ರಾಮನ ವಂಶಸ್ಥರಿಗೆ ಸಂಬಂಧಿಸಿದ್ದಲ್ಲ, ಬದಲಿಗೆ ಅಯೋಧ್ಯಾ ಭೂಮಿಗೆ ಸಂಬಂಧ ಪಟ್ಟದ್ದು ಎಂದೂ ಅವರು ಹೇಳಿದ್ದರು.

ಇದಕ್ಕೆ ಮುನ್ನ ದಿಯಾ ಕುಮಾರಿ ಅವರು ತಮ್ಮ ಕುಟುಂಬವು ರಾಮನ ವಂಶಕ್ಕೆ ಸೇರಿದ್ದಾಗಿದ್ದು, ತನ್ನ ತಂದೆ ಶ್ರೀರಾಮನ ೩೦೯ನೇ ವಂಶಜ ಎಂದು ಹೇಳಿದ್ದರು.

 ನಾವು ಕುಶನ ವಂಶಸ್ಥರು ಎಂಬುದನ್ನು ಸಾಬೀತುಪಡಿಸುವ ದಾಖಲೆಗಳು ನಮ್ಮ ಬಳಿ ಇವೆ. ನಾವು ಕುಶವಾಹ ಅಥವಾ ಕಚ್ಛಾವ ಕುಲದವರುಎಂದು ದಿಯಾ ಕುಮಾರಿ ಹೇಳಿದ್ದರು.

ಶ್ರೀರಾಮನ ವಂಶಸ್ಥರು ಇದ್ದಾರೆಯೇ?’ ಎಂಬುದಾಗ ಅಯೋಧ್ಯಾ ಭೂವಿವಾದದ ವಿಚಾರಣೆ ಕಾಲದಲ್ಲಿ ಪಂಚ ಸದಸ್ಯ ಸಂವಿಧಾನ ಪೀಠವು ಪ್ರಶ್ನಿಸಿದ ಬಳಿಕ ಪ್ರತಿಪಾದನೆಗಳು ಬಂದಿದ್ದವು.
ಪೀಠದ ಮುಂದೆ ರಾಮಲಲ್ಲಾ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಕೆ. ಪರಾಶರನ್ ಅವರು ರಾಮಾಯಣ ಮತ್ತು ಪುರಾಣಗಳಲ್ಲಿ ಅಯೋಧ್ಯೆಯು ರಾಮನ ಜನ್ಮಭೂಮಿ ಎಂಬ ಉಲ್ಲೇಖವಿದೆ.

ರಾಮನ
ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಚಾರಿತ್ರಿಕ ಮತ್ತು ಪೌರಾಣಿಕ ನಂಬಿಕೆಗಳಿವೆ ಎಂದು ಹೇಳಿದ್ದರು.
ಆಗ ಪೀಠವು ಈಗಲೂ ಶ್ರೀರಾಮನ ವಂಶಸ್ಥರು ಇದ್ದಾರೆಯೇ ಎಂದು ಪ್ರಶ್ನಿಸಿತ್ತು.

ಶ್ರೀರಾಮನ ವಂಶಕ್ಕೆ ಸೇರಿದವರು ಎಂದು ಪ್ರತಿಪಾದಿಸುವ ಇತರ ಹಲವರೂ ಇದ್ದಾರೆ ಎಂದೂ ದಿಯಾ ಕುಮಾರಿ ಹೇಳಿದ್ದರು.

No comments:

Advertisement