ಕೈಮುಗಿದ
ಪೊಲೀಸ್ ಅಧಿಕಾರಿಣಿ ಮೇಲೂ ಹಲ್ಲೆ, ವಿಡಿಯೋ ವೈರಲ್
ನವದೆಹಲಿ: ದೆಹಲಿಯ ತೀಸ್ ಹಜಾರಿ ನ್ಯಾಯಾಲಯದ ಆವರಣದಲ್ಲಿ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 2019 ನವೆಂಬರ್ 08ರ ಶುಕ್ರವಾರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ತನ್ನ ಮೊತ್ತ ಮೊದಲ ಉದ್ಘಾರದಲ್ಲೇ ’ಉಭಯ ಕಡೆಗಳಲ್ಲೂ ಸಮಸ್ಯೆಗಳಿವೆ’ ಎಂದು
ಹೇಳಿತು.
ಇದೇ
ವೇಳೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಒಂದು ವಕೀಲರ ರೌದ್ರಾವತಾರದ ಚಿತ್ರಣ ನೀಡಿದ್ದು, ಕರಿಕೋಟು ಧರಿಸಿದ್ದ ಜನರ ಗುಂಪು ಕೈಮುಗಿದಿದ್ದ ಪೊಲೀಸ್ ಅಧಿಕಾರಿಣಿ ಮೇಲೂ ಗುಂಪುಗೂಡಿ ಹಲ್ಲೆ ನಲ್ಸಿದ್ದನ್ನು ಮತ್ತು ಸಮೀಪದಲ್ಲೇ ಇದ್ದ ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದನ್ನು ತೋರಿಸಿತು.
ಬಾರ್
ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಮನನ್ ಮಿಶ್ರ ಅವರು ನವೆಂಬರ್ ೨ರ ಘಟನೆ ವೇಳೆ
ಪೊಲೀಸರು ಕ್ರೌರ್ಯ ಮೆರೆದರು ಎಂದು
ಆಪಾದಿಸಿದರು. ತತ್ಕ್ಷಣವೇ ನ್ಯಾಯಪೀಠವು ’ಒಂದು ಕೈಯಿಂದ ಚಪ್ಪಾಳೆ ಹೊಡೆಯಲು ಬರುವುದಿಲ್ಲ’ ಎಂದು
ಪ್ರತಿಕ್ರಿಯಿಸಿದರು.
‘ಉಭಯ
ಕಡೆಗಳಲ್ಲೂ ಸಮಸ್ಯೆಗಳಿವೆ. ಯಾರು ಕೂಡಾ ಒಂದೇ ಕೈಯಿಂದ ಚಪ್ಪಾಳೆ ಹೊಡೆಯುವುದಿಲ್ಲ’ ಎಂದು
ನ್ಯಾಯಮೂರ್ತಿ ಸಂಜಯ್ ಕೃಷ್ಣನ್ ಕೌಲ್ ಮತ್ತು ನ್ಯಾಯಮೂರ್ತಿ ಕೆಎಂ ಜೋಸೆಫ್ ಅವರನ್ನು ಒಳಗೊಂಡ ಪೀಠ ಪ್ರತಿಕ್ರಿಯಿಸಿತು.
ಒಡಿಶಾದಲ್ಲಿ
ವಕೀಲರ ಮುಷ್ಕರಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆಯಲ್ಲಿ ನ್ಯಾಯಮೂರ್ತಿಗಳು ಈ ಪ್ರತಿಕ್ರಿಯೆ ನೀಡಿದರು.
ದೀರ್ಘ ಕಾಲದ ಮುಷ್ಕರ ಬಗ್ಗೆ ಗಮನ ಹರಿಸಿದ ಸುಪ್ರೀಂಕೋರ್ಟ್ ಉಭಯ ಕಡೆಗಳ ವಕೀಲರ ಹೊರತಾಗಿ ಬಾರ್ ಕೌನ್ಸಿಲ್ ಆಫ್ ಇಂಡಿಯಾದ (ಬಿಸಿಐ) ನೆರವನ್ನೂ ಕೋರಿತು.
ಅಟಾರ್ನಿ
ಜನರಲ್ ಕೆಕೆ ವೇಣುಗೋಪಾಲ್ ಅವರು ಕೂಡಾ ವಿಚಾರಣೆ ಕಾಲದಲ್ಲಿ ಹಾಜರಿದ್ದರು. ನ್ಯಾಯಕ್ಕೆ ಧಕ್ಕೆಯಾಗುತ್ತದೆ ಎಂಬ ನೆಲೆಯಲ್ಲಿ ಅಟಾರ್ನಿ ಜನರಲ್ ಅವರು ದೀರ್ಘಕಾಲದಿಂದ ವಕೀಲರು ಕೆಲಸ ಸ್ಥಗಿತಗೊಳಿಸಿದ್ದಕ್ಕೆ ಅತೃಪ್ತಿ ವ್ಯಕ್ತ ಪಡಿಸಿದರು.
ತೀಸ್
ಹಜಾರಿ ನ್ಯಾಯಾಲಯ ಆವರಣದ ಹಿಂಸಾಚಾರದ ಬಳಿಕ ದೆಹಲಿಯ ನ್ಯಾಯಾಲಯಗಳಲ್ಲೂ ನಡೆಯುತ್ತಿರುವ ಮುಷ್ಕರಗಳನ್ನು ವೇಣುಗೋಪಾಲ್ ಉಲ್ಲೇಖಿಸಿದರು.
ಆದರೆ
ಹಿರಿಯ ವಕೀಲರಾದ ಮಿಶ್ರ ಮತ್ತು ವಿಕಾಸ್ ಸಿಂಗ್ ಅವರು ಪೊಲೀಸ್ ಕ್ರಮವನ್ನು ಪ್ರಶ್ನಿಸಿದರು. ಪೊಲೀಸರು ವಕೀಲರನ್ನು ಚೆನ್ನಾಗಿ ನಡೆಸಿಕೊಳ್ಳಲಿಲ್ಲವಷ್ಟೇ ಅಲ್ಲ ಅವರತ್ತ ಗುಂಡು ಹಾರಿಸಿದರು ಎಂದು ಅವರು ವಾದಿಸಿದರು.
ಇದಕ್ಕೆ
ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕೌಲ್ ಅವರು ’ನಾವು ಈಗ ಏನೂ ಹೇಳದಿದ್ದರೆ
ಒಳ್ಳೆಯದು. ಕೆಲವೊಮ್ಮೆ ನಮ್ಮ
ಮೌನವೇ ಬೇಕಾದಷ್ಟಾಗುತ್ತದೆ. ಉಭಯ ಕಡೆಗಳಲ್ಲೂ ಸಮಸ್ಯೆಗಳಿವೆ. ಯಾರು ಕೂಡಾ ಒಂದೇ ಕೈಯಿಂದ ಚಪ್ಪಾಳೆ ತಟ್ಟುವುದಿಲ್ಲ. ನಾವು ಹೆಚ್ಚು ಮಾತನಾಡುವುದಿಲ್ಲ’ ಎಂದು
ಹೇಳಿದರು.
‘ನಿಮ್ಮ
ನಿರ್ದಿಷ್ಟ ವರ್ತನೆಯ ಕಾರಣ ಅವರು ಹಾಗೆ ವರ್ತಿಸಿದರು ಎಂಬುದು ಎಂದಿಗೂ ನಿಮ್ಮ ವಾದವಾಗುವುದಿಲ್ಲ’ ಎಂದೂ
ನ್ಯಾಯಮೂರ್ತಿ ನುಡಿದರು.
ಕೈಮುಗಿದ
ಮಹಿಳಾ ಅಧಿಕಾರಿ ಮೇಲೂ ಹಲ್ಲೆ: ಇನ್ನೊಂದು ಬೆಳವಣಿಗೆಯಲ್ಲಿ, ನವೆಂಬರ್ ೨ರಂದು ತೀಸ್ ಹಜಾರಿ ನ್ಯಾಯಾಲಯ ಆವರಣದಲ್ಲಿ ಸಂಭವಿಸಿದ ಹಿಂಸಾಚಾರಗಳ ವೇಳೆಯಲ್ಲಿ ಸುಮಾರು ೨೦೦ ಜನರಿದ್ದ ಉದ್ರಿಕ್ತರ ಗುಂಪೊಂದು ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟು ಹಾಕಿದೆ.
ನ್ಯಾಯಾಲಯದ
ಆವರಣದ ಒಳಗೆ ವಕೀಲರ ಗುಂಪು ಪೊಲೀಸ್ ವಾಹನಗಳಿಗೆ ಕಿಚ್ಚಿಡುವುದಕ್ಕೆ ಮುನ್ನುಗ್ಗಿದಾಗ ಮಹಿಳಾ ಅಧಿಕಾರಿ ಕೈ ಮುಗಿದು ಪ್ರಾರ್ಥನೆ
ಮಾಡಿಕೊಳ್ಳುತ್ತಿದ್ದುದು
ವಿಡಿಯೋದಲ್ಲಿ ದಾಖಲಾಗಿದೆ.
ಪೊಲೀಸರ
ಸಣ್ಣ ತುಕಡಿಯೊಂದು ಧಾವಿಸಿ ಬರದೇ ಇದ್ದಿದ್ದರೆ, ಹೆಸರು ಪತ್ತೆಯಾಗದ ಈ ಮಹಿಳಾ ಪೊಲೀಸ್
ಅಧಿಕಾರಿ ಗುಂಪುದಾಳಿಗೆ ಬಲಿಯಾಗುವ ಸಾಧ್ಯತೆ ಇತ್ತು ಎಂದು ವರದಿ ಹೇಳಿದೆ.
ಈಗ
ತನಿಖೆಯಲ್ಲಿ ಮಹತ್ವದ ಭಾಗವಾಗಿರುವ ಈ ವಿಡಿಯೋದಲ್ಲಿ ಕರಿಯ
ಕೋಟುಗಳನ್ನು ಧರಿಸಿದ್ದ ವ್ಯಕ್ತಿಗಳ ಗುಂಪು ಕೋರ್ಟ್ ಆವರಣದ ಒಳಗಿದ್ದ ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚುತ್ತಿದ್ದುದನ್ನು ಮತ್ತು ಮಹಿಳಾ ಪೊಲೀಸ್ ಅಧಿಕಾರಿ ಮತ್ತು ಹಿಡಿಯಷ್ಟಿದ್ದ ಇತರ ಪೊಲೀಸ್ ಪೇದೆಗಳಿಗೆ ಮುತ್ತಿಗೆ ಹಾಕಿ ಅವರೊಂದಿಗೆ ಕೆಟ್ಟದಾಗಿ ವರ್ತಿಸಿದ್ದುದು ದಾಖಲಾಗಿದೆ.
ಮಹಿಳಾ
ಪೊಲೀಸ್ ಅಧಿಕಾರಿ ಮತ್ತು ಇತರ ಸಿಬ್ಬಂದಿಯನ್ನು ಥಳಿಸುತ್ತಿದ್ದಂತೆಯೇ ಸಮೀಪದ ಹೊರಠಾಣೆಗೆ ಸುದ್ದಿ ತಲುಪಿ, ಅಲ್ಲಿನ ಠಾಣಾಧಿಕಾರಿ, ಡೆಲ್ಲಿ ಕೊತ್ವಾಲಿ, ಇನ್ಸ್ಪೆಕ್ಟರ್ ರಾಜೀವ್ ಭಾರದ್ವಾಜ್ ನೇತೃತ್ವದಲ್ಲಿ ೧೦-೧೨ ಮಂದಿ
ಪೊಲೀಸರು ಅಲ್ಲಿಗೆ ಧಾವಿಸಿ, ಗುಂಪನ್ನು ತಡೆದರು ಎಂದು ದೆಹಲಿ ಪೊಲೀಸರ ವಿಶೇಷ ಶಾಖೆ ನೀಡಿದ ವರದಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತು.
ಪೊಲೀಸ್
ತುಕಡಿಯು ಸಕಾಲಕ್ಕೆ ಸ್ಥಳಕ್ಕೆ ತಲುಪದೇ ಇದ್ದಿದ್ದರೆ, ಗುಂಪು ಮಹಿಳಾ ಪೊಲೀಸ್ ಅಧಿಕಾರಿ ಮತ್ತು ಆಕೆಯ ಸಿಬ್ಬಂದಿ ಅಧಿಕ ಸಂಖ್ಯೆಯಲ್ಲಿದ್ದ ಗುಂಪಿನ ದಾಳಿಗೆ ಪ್ರಾಣ ಕಳೆದುಕೊಳ್ಳುವ ಅಪಾಯವಿತ್ತು ಎಂದು ವರದಿ ಹೇಳಿದೆ. ರಕ್ಷಣೆಯ ಯತ್ನದಲ್ಲಿ ಅಧಿಕಾರಿಯ ತಲೆಗೆ ಏಟು ಬಿದ್ದಿದ್ದು ಇತರ ಕೆಲವು ಕಾನ್ಸ್ಟೇಬಲ್ಗಳಿಗೆ ತೀವ್ರ ಗಾಯಗಳಾಗಿವೆ. ಒಬ್ಬ ಪೇದೆಯ ಕಿವಿಯ ತಮಟೆಗೆ ಹಾನಿಯಾಗಿದ್ದು, ಆಸ್ಪತ್ರೆಗೆ ದಾಖಲಾಗಿರುವ ಅವರ ಸ್ಥಿತಿ ಗಂಭೀರವಾಗಿದೆ ಎಂದೂ ವರದಿ ತಿಳಿಸಿತು..
ವಿಡಿಯೋದ
ಹೊರತಾಗಿ, ಪೊಲೀಸರ ಸಂಭಾಷಣೆಯ ಐದು ನಿಮಿಷಗಳ ಆಡಿಯೋ ಟೇಪ್ ಒಂದು ವಕೀಲರ ಗುಂಪು ಮಹಿಳಾ ಪೊಲೀಸ್ ಅಧಿಕಾರಿಯನ್ನು ನಿಂದಿಸುತ್ತಾ ಆಕೆಯನ್ನು ತಡಕಾಡಿದ್ದನ್ನು ಹಾಗೂ ಇನ್ನೊಬ್ಬ ಸರ್ವೀಸ್ ಅಧಿಕಾರಿಯ ರಿವಾಲ್ವರ್ ಕಿತ್ತುಕೊಳ್ಳಲು ವಿಫಲ ಯತ್ನ ನಡೆಸಿದ್ದನ್ನೂ ಬಹಿರಂಗ ಪಡಿಸಿತು.
ಗುಂಪು
ಕಬ್ಬಿಣದ ಸರಪಣಿಯಿಂದ ಹೊಡೆದ ಪರಿಣಾಮವಾಗಿ ಇನ್ನೊಬ್ಬ ಅಧಿಕಾರಿ ಸ್ಮೃತಿತಪ್ಪಿ ನೆಲದ ಮೇಲೆ ಬಿದ್ದರೆ, ಬಳಿಕ
ಭಾನುವಾರ ಸಭೆಯೊಂದರಲ್ಲಿ ಘಟನೆಯನ್ನು ವಿವರಿಸಿದ ಮಹಿಳಾ ಪೊಲೀಸ್ ಅಧಿಕಾರಿ ಸ್ವಲ್ಪ ಕಾಲ ಅತ್ತದ್ದು ಕೂಡಾ ಆಡಿಯೋದಲ್ಲಿ ದಾಖಲಾಗಿದೆ ಎಂದು ಸುದ್ದಿ ಸಂಸ್ಥೆಯ ವರದಿ ಹೇಳಿತು.
ಇಬ್ಬರು
ಗಾಯಾಳು ಅಧಿಕಾರಿಗಳು ಮತ್ತು ಒಬ್ಬ ಮಹಿಳಾ ಅಧಿಕಾರಿಯ ಸಿಬ್ಬಂದಿ ಮಧ್ಯೆ ನಡೆದ ದೂರವಾಣಿ ಸಂಭಾಷಣೆಯ ಆಡಿಯೋ ಕ್ಲಿಪ್ ಇದು ಎಂದು ಸುದ್ದಿ ಸಂಸ್ಥೆ ಹೇಳಿದೆ.
ತನ್ನ
ಸಹೋದ್ಯೋಗಿಗೆ ದೂರವಾಣಿಯಲ್ಲಿ ಹಿಂಸಾತ್ಮಕ ಘಟನೆಗಳನ್ನು ವಿವರಿಸಿದ್ದ ಇನ್ನೊಬ್ಬ ಅಧಿಕಾರಿ ವಕೀಲರು ತನ್ನನ್ನು ಥಳಿಸಿದ ಪರಿಣಾಮವಾಗಿ ಭುಜ, ಪಕ್ಕೆ ಮತ್ತು ಕೈಗಳಲ್ಲಿ ಮೂಳೆಗಳು ಮುರಿದಿವೆ ಎಂದು ಹೇಳಿದರು.
’ನಾನು
ವಕೀಲರಿಂದ ಸುತ್ತುವರಿಯಲ್ಪಟ್ಟಿದ್ದ ಮ್ಯಾಡಮ್ ಅವರನ್ನು ರಕ್ಷಿಸಲು ಯತ್ನಿಸಿದೆ. ಅವರು ಆಕೆಯನ್ನು ನಿಂದಿಸಿ ಜಗ್ಗಾಡಿದರು ಮತ್ತು ಆಕೆಯ ಕಾಲರ್ ಎಳೆಯಲು ಯತ್ನಿಸಿದರು. ನಾನು ಅವರಿಗೆ ರಕ್ಷಣೆ ಒದಗಿಸಲು ನುಗ್ಗಿದೆ. ಅವರು ನನ್ನ ಪಿಸ್ತೂಲ್ ಕಸಿಯಲು ಯತ್ನಿಸಿದರು’ ಎಂದು
ಅಧಿಕಾರಿ ಘಟನೆಯ ವಿವರಗಳನ್ನು ನೀಡಿದ್ದು ಆಡಿಯೋದಲ್ಲಿ ದಾಖಲಾಗಿದೆ.
ನಮ್ಮ
ಮೇಲೆ ಹಲ್ಲೆ ಆರಂಭವಾದಾಗ ಅವರು (ವಕೀಲರು) ಸುಮಾರು ೩೦೦-೪೦೦ರಷ್ಟು ಮಂದಿ ಇದ್ದರು. ನಾವು ಮ್ಯಾಡಮ್ ಸೇರಿ ಕೇವಲ ೪-೫ (ಪೊಲೀಸರು)
ಮಾತ್ರ ಇದ್ದೆವು ಎಂದು ಅವರು ಹೇಳಿದ್ದು ಆಡಿಯೋದಲ್ಲಿ ಇದೆ.
ಹಿರಿಯ
ಅಧಿಕಾರಿಯಾದ ಮಹಿಳಾ ಪೊಲೀಸ್ ಅಧಿಕಾರಿಯನ್ನು ರಕ್ಷಿಸಲು ನುಗಿದ್ದ ತನಗೆ ಮೊದಲು ಕಬ್ಬಿಣದ ಸರಪಣಿಯಿಂದ ಬೆನ್ನಿನ ಮೇಲೆ ಥಳಿಸಲಾಯಿತು. ಕೋರ್ಟಿನ ಗೇಟುಗಳನ್ನು ಮುಚ್ಚಲು ಬಳಸಲಾಗುತ್ತಿದ್ದ ಕಬ್ಬಿಣದ ಆ ಸರಪಳಿಯನ್ನು ಬಳಿಕ
ವಕೀಲರಿಂದ ಕಿತ್ತುಕೊಳ್ಳಲಾಯಿತು ಎಂದು ಅವರು ಹೇಳಿದ್ದಾರೆ.
ಬಹಿರಂಗಗೊಂಡಿರುವ
ವಿಡಿಯೋವನ್ನು ಗಮನಿಸಿರುವ ರಾಷ್ಟೀಯ ಮಹಿಳಾ ಆಯೋಗದ ರೇಖಾ ಶರ್ಮಾ ಅವರ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಮನನ ಕುಮಾರ್ ಅವರು ಮಾರಕ ಹಲ್ಲೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
No comments:
Post a Comment