Saturday, November 9, 2019

ರಾಜಕೀಯಕ್ಕಾಗಿ ಟ್ರಸ್ಟ್ ಹಣ ಬಳಕೆ: ಟ್ರಂಪ್‌ಗೆ ೨೦ ಲಕ್ಷ ಡಾಲರ್ ದಂಡ

ರಾಜಕೀಯಕ್ಕಾಗಿ ಟ್ರಸ್ಟ್ ಹಣ ಬಳಕೆ:
ಟ್ರಂಪ್ಗೆ ೨೦ ಲಕ್ಷ ಡಾಲರ್ ದಂಡ
ನ್ಯೂಯಾರ್ಕ್: ರಾಜಕೀಯ ಮತ್ತು ವ್ಯವಹಾರಿಕ ಲಾಭಗಳಿಗಾಗಿ ತಮ್ಮ ಚಾರಿಟೇಬಲ್ ಟ್ರಸ್ಟ್ ದುರುಪಯೋಗ ಮಾಡಿಕೊಂಡದ್ದಕ್ಕಾಗಿ ಅಮೇರಿಕದ ಅಧ್ಯಕ್ಷ  ಡೊನಾಲ್ಡ್ ಟ್ರಂಪ್ ಅವರಿಗೆ ಅಮೆರಿಕದ ನ್ಯಾಯಾಲಯವು ೨೦ ಲಕ್ಷ ಡಾಲರ್ ದಂಡ ವಿಧಿಸಿತು.

ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ನ್ಯೂಯಾರ್ಕ್ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಾಲಿಯನ್ ಸ್ಕಾರ್ಪುಲ್ಲಾ ಅವರು, ’ಲಾಭರಹಿತ ಸಂಸ್ಥೆಗಳನ್ನು(ಎನ್ಜಿಒ) ಯಾವುದೇ ದುರುದ್ದೇಶಕ್ಕಾಗಲೀ, ವೈಯಕ್ತಿಕ ಲಾಭಕ್ಕಾಗಲೀ ಬಳಸಿಕೊಳ್ಳುವಂತಿಲ್ಲ. ಆದರೆ, ತಮ್ಮದೇ ದತ್ತಿ  ಸಂಸ್ಥೆಯನ್ನು (ಚಾರಿಟೇಬಲ್ ಟ್ರಸ್ಟ್) ರಾಜಕೀಯ ಮತ್ತು ವ್ಯವಹಾರಿಕ ಲಾಭಕ್ಕಾಗಿ ಬಳಸುವ ಮೂಲಕ ಟ್ರಂಪ್ ಅವರು ನಾಗರಿಕ ಕಾನೂನನ್ನು ಉಲ್ಲಂಘಿಸಿದ್ದಾರೆ. ಇದಕ್ಕಾಗಿ ಅವರಿಗೆ ಮಿಲಿಯನ್ (೨೦ ಲಕ್ಷ)  ಡಾಲರ್ ದಂಡವಿಧಿಸಲಾಗಿದೆಎಂದು ಹೇಳಿದರು.
ಡೆಮಾಕ್ರಟಿಕ್ ಪಕ್ಷದ ಸದಸ್ಯರೂ ಆಗಿರುವ ನ್ಯೂಯಾರ್ಕ್ ಅಟಾರ್ನಿ ಜನರಲ್ ಲೆತಿಶಿಯಾ ಜೇಮ್ಸ್ ಅವರು ಸಂಬಂಧ ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದರು. ಕಳೆದ ವರ್ಷ ಜೂನ್ ತಿಂಗಳು ಹೂಡಲಾಗಿದ್ದ ಖಟ್ಲೆಯಲ್ಲಿ ಟ್ರಂಪ್ ಅವರುನಿರಂತರ ಕಾನೂನುಬಾಹಿರ ನಡವಳಿಕೆ ಪದರ್ಶಿಸಿದ್ದಾರೆಎಂದು ಅವರು ಆಪಾದಿಸಿದ್ದರು.

ನ್ಯೂಯಾರ್ಕ್ ಕೋರ್ಟ್ ತೀರ್ಪಿನ ಬಳಿಕ ಬಗ್ಗೆ ಪ್ರತಿಕ್ರಿಯಿಸಿದ ಜೇಮ್ಸ್ ಅವರು, ’ದತ್ತಿ ಆಸ್ತಿ ರಕ್ಷಣೆ ಮತ್ತು ದತ್ತಿಯನ್ನು ದುರುದ್ದೇಶಕ್ಕೆ ಬಳಸಿಕೊಳ್ಳವವರ ವಿರುದ್ಧ ನನಗೆ ಸಿಕ್ಕಿದ ಬಹುದೊಡ್ಡ ಜಯ ಇದುಎಂದು ಹರ್ಷ ವ್ಯಕ್ತಪಡಿಸಿದರು.

ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ನ್ಯೂಯಾರ್ಕ್ ನ್ಯಾಯಾಲಯವು ಒಂದೇ ವಾರದಲ್ಲಿ ಮೂರು ತೀರ್ಪುಗಳನ್ನು ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಡೊನಾಲ್ಡ್ ಟ್ರಂಪ್ ಅವರು ದತ್ತಿ ಸಂಸ್ಥೇಯ ಹಣವನ್ನು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಂಡಿದ್ದರು ಎಂದು ಆಪಾದಿಸಲಾಗಿತ್ತು.

ವಿಚಾರಣೆ ಕಾಲದಲ್ಲಿ ಟ್ರಂಪ್ ಅವರು ತಾವು ದತ್ತಿ ಸಂಸ್ಥೆಯ ಹಣ ದುರ್ಬಳಕೆ ಮಾಡಿಕೊಂಡದ್ದನ್ನು ಒಪ್ಪಿಕೊಂಡಿದ್ದರು ಎಂದು ಹೇಳಲಾಗಿದೆ.

ಇದಕ್ಕೂ ಮುನ್ನ ಟ್ರಂಪ್ ತಾವು ಯಾವುದೇ ಹಣಕಾಸಿನ ದುರ್ಬಳಕೆ ಮಾಡಿಕೊಂಡಿಲ್ಲ ಎಂದೇ ವಾದಿಸಿದ್ದರು. ತಮ್ಮ ಸ್ವಂತ ಲಾಭಕ್ಕಾಗಿ ಅಧ್ಯಕ್ಷ ಹುದ್ದೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬುದಾಗಿ ಹಲವಾರು ತನಿಖೆಗಳು ಟ್ರಂಪ್ ವಿರುದ್ಧ ಆರೋಪಿಸಿದ್ದವು. ಅಲ್ಲದೇ ಹೌಸ್ ಆಫ್ ರೆಪ್ರಸೆಂಟೇಟೀವ್ಸ್ ವಾಗ್ದಂಡನೆ ತನಿಖೆಯನ್ನೂ ನಡೆಸಿತ್ತು.

No comments:

Advertisement