ಭಾರತದ ಪ್ರಪ್ರಥಮ
ತ್ರಿಸೇನಾ ಪಡೆಗಳ ಮಹಾದಂಡನಾಯಕ ಜನರಲ್ ಬಿಪಿನ್ ರಾವತ್
ನವದೆಹಲಿ: ಭಾರತದ ಮೂರೂ ರಕ್ಷಣಾ ಪಡೆಗಳ ಪ್ರಪ್ರಥಮ
ಮುಖ್ಯಸ್ಥರಾಗಿ (ತ್ರಿಸೇನಾ ಮಹಾದಂಡನಾಯಕ- ಚೀಫ್ ಆಫ್ ಡಿಫೆನ್ಸ್ ಸ್ಟಾಫ್- ಸಿಡಿಎಸ್) ಹೊರಹೊಗುತ್ತಿರುವ
ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರನ್ನು
ಕೇಂದ್ರ ಸರ್ಕಾರವು 2019 ಡಿಸೆಂಬರ್ 30ರ ಸೋಮವಾರ ನೇಮಕ ಮಾಡಿತು.
ತ್ರಿಸೇನಾ ಪಡೆಗಳ ಮಹಾದಂಡನಾಯಕ ಭೂಸೇನೆ, ವಾಯುಸೇನೆ ಮತ್ತು ಜಲಪಡೆ – ಈ ಮೂರೂ ಸೇವೆಗಳಿಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲಿಯೂ ರಕ್ಷಣಾ ಸಚಿವರಿಗೆ ಮುಖ್ಯ ಸೇನಾ ಸಲಹೆಗಾರರಾಗಿ ಕೆಲಸ ಮಾಡುತ್ತಾರೆ.
ತ್ರಿಸೇನಾ ಪಡೆಗಳ ಮಹಾದಂಡನಾಯಕ ಭೂಸೇನೆ, ವಾಯುಸೇನೆ ಮತ್ತು ಜಲಪಡೆ – ಈ ಮೂರೂ ಸೇವೆಗಳಿಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲಿಯೂ ರಕ್ಷಣಾ ಸಚಿವರಿಗೆ ಮುಖ್ಯ ಸೇನಾ ಸಲಹೆಗಾರರಾಗಿ ಕೆಲಸ ಮಾಡುತ್ತಾರೆ.
‘ಜನರಲ್ ಬಿಪಿನ್
ರಾವತ್ ಅವರನ್ನು 31.12.2019ರಿಂದ ಜಾರಿಯಾಗುವಂತೆ ತ್ರಿಸೇನಾ ಪಡೆಗಳ ಮಹಾದಂಡನಾಯಕರಾಗಿ (ಸಿಡಿಎಸ್)
ನೇಮಕ ಮಾಡಲು ಸರ್ಕಾರ ನಿರ್ಧರಿಸಿದೆ. ಮುಂದಿನ ಆದೇಶಗಳವರೆಗೆ ಮತ್ತು ಸೇವಾ ವಿಸ್ತರಣೆಯವರೆಗೆ ಅವರು
ಹುದ್ದೆಯಲ್ಲಿ ಮುಂದುವರೆಯುವರು’ ಎಂದು ರಕ್ಷಣಾ ಸಚಿವಾಲಯದ ಆದೇಶ ತಿಳಿಸಿದೆ.
ರಾವತ್ ಅವರು
1978ರಲ್ಲಿ ಸೇನೆಗೆ ಸೇರ್ಪಡೆಯಾಗಿದ್ದರು ಮತ್ತು ಪ್ರಸ್ತುತ 2017ರ ಜನವರಿ 1ರಿಂದ ಸೇನಾ ಸಿಬ್ಬಂದಿ
ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಅಧಿಕಾರಾವಧಿ 2019ರ ಡಿಸೆಂಬರ್ 31ಕ್ಕೆ ಮುಕ್ತಾಯವಾಗಲಿತ್ತು.
ಭಾರತೀಯ
ಸೇನಾಪಡೆಯ ಮುಖ್ಯಸ್ಥರಾಗಿ ಬಿಪಿನ್ ರಾವತ್ ಅವರು ಮೂರು ವರ್ಷಗಳ ಸೇವಾವಧಿಯನ್ನು ಪೂರ್ಣಗೊಳಿಸಿದ್ದು, ಇದೀಗ ಸೇವೆಯಿಂದ ನಿವೃತ್ತಿಗೊಳ್ಳಲು ಒಂದು ದಿನ ಇರುವ ಮುನ್ನ ಜನರಲ್ ರಾವತ್ ಅವರನ್ನು ಸೇನಾಮಹಾದಂಡನಾಯಕನನ್ನಾಗಿ ನೇಮಕ ಮಾಡಲಾಗಿದೆ ಎಂದು ವರದಿ ತಿಳಿಸಿತು.
ಡಿಸೆಂಬರ್
೨೪ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಸಿಡಿಎಸ್ (ಸೇನಾಮಹಾದಂಡನಾಯಕ) ಹುದ್ದೆ ಹಾಗೂ ಇದರ ಕರ್ತವ್ಯಗಳ ನಿರ್ಣಯಕ್ಕೆ ಅನುಮತಿ ನೀಡಲಾಗಿದೆ ಎಂದು ವರದಿ ವಿವರಿಸಿತ್ತು.
No comments:
Post a Comment