Saturday, December 21, 2019

ಉತ್ತರ ಭಾರತದಲ್ಲಿ ಭೂಕಂಪ, ತಾಷ್ಕೆಂಟಿನಿಂದ ದೆಹಲಿವರೆಗೆ ಭೂಮಿ ಗಡಗಡ..

ಉತ್ತರ ಭಾರತದಲ್ಲಿ ಭೂಕಂಪ, ತಾಷ್ಕೆಂಟಿನಿಂದ
ದೆಹಲಿವರೆಗೆ ಭೂಮಿ ಗಡಗಡ..
ನವದೆಹಲಿ: ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್ಸಿಆರ್) ಸೇರಿದಂತೆ ಉತ್ತರ ಭಾರತದಲ್ಲಿ 2019 ಡಿಸೆಂಬರ್ 20ರ ಶುಕ್ರವಾರ ಸಂಜೆ .೧೩ರ ವೇಳೆಗೆ ಭೂಮಿ ಕಂಪಿಸಿತು.

ಭೂಕಂಪನವು
ಸುಮಾರು ಒಂದು ನಿಮಿಷ ಕಾಲ ಭೂಮಿಯನ್ನು ನಡುಗಿಸಿತು.

ಆಫ್ಘಾನಿಸ್ಥಾನದ ಹಿಂದುಕುಶ್ ಪ್ರದೇಶದಲ್ಲಿ, ಸಂಭವಿಸಿದ ಭೂಕಂಪನದ ತೀವ್ರತೆ  ರಿಕ್ಟರ್ ಮಾಪಕದಲ್ಲಿ .೮ರಷ್ಟು ಇತ್ತು.

ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ ಮತ್ತು ಪಂಜಾಬಿನಲ್ಲೂ ಭೂಮಿ ಕಂಪಿಸಿದ ವರದಿಗಳು ಬಂದವು.

. ತೀವ್ರತೆಯ ಭೂಕಂಪನದ ಅಧಿಕೇಂದ್ರವು ಹಿಂದುಕುಶ್ನಲ್ಲಿ ಇತ್ತು  ಎಂದು ಭೂಕಂಪ ಶಾಸ್ತ್ರ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಭೂಕಂಪನದಿಂದ ಸಂಭವಿಸಿದ ಸಾವು ನೋವು ಸಂಭವಿಸಿದ ಬಗ್ಗೆ ತತ್ ಕ್ಷಣಕ್ಕೆ ವರದಿಗಳು ಬಂದಿಲ್ಲ.
ರಿಕ್ಟರ್ ಮಾಪಕದಲ್ಲಿ .೩ರಷ್ಟು ತೀವ್ರತೆಯ ಭೂಕಂಪ ಶುಕ್ರವಾರ ಸಂಜೆ .೦೯ಕ್ಕೆ ಸಂಭsವಿಸಿದ್ದು, ಇದರ ಕೇಂದ್ರ ಬಿಂದು ಆಫ್ಘಾನಿಸ್ಥಾನದ ರಾಜಧಾನಿ ಕಾಬೂಲಿನಿಂದ ೨೫೦ ಕಿಮೀ ದೂರದಲ್ಲಿತ್ತುಎಂದು ಭೂಕಂಪ ಶಾಸ್ತ್ರದ ರಾಷ್ಟ್ರೀಯ ಕೇಂದ್ರವು ತಿಳಿಸಿತು.

ಗುರುಗ್ರಾಮದಲ್ಲಿ ಟ್ಯೂಬ್ ಲೈಟ್ಗಳು ನಡುಗಿದ್ದುದನ್ನು ಅಧಿಕಾರಿಗಳು ಗಮನಿಸಿದ್ದು, ೧೯೦ ಕಿಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ.

ಪಾಕಿಸ್ತಾನ, ಉತ್ತರ ಭಾರತದ ಬಹುತೇಕ ಭಾಗದಲ್ಲಿ ಭೂಮಿ ಕಂಪಿಸಿದೆ. ದೇಶದ ಹಲವು ಭಾಗಗಳಲ್ಲಿ ಜನರು ಕಟ್ಟಡಗಳಿಂದ ಹೊರಕ್ಕೆ ಓಡಿದ ಬಗ್ಗೆ ವರದಿಗಳು ಬಂದಿವೆ.

ರಷ್ಯಾದ ತಾಷ್ಕೆಂಟಿನಿಂದ ಸುಮಾರು ೧೫೦೦ ಕಿಮೀ ದೂರದಲ್ಲಿರುವ ನವದೆಹಲಿಯವರೆಗೂ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಪ್ಯಾರಿಸ್ಸಿನ ಯುರೋಪಿಯನ್ - ಮೆಡಿಟರೇನಿಯನ್ ಸೆಷ್ಮೊಲಾಜಿಕಲ್ ಸೆಂಟರ್ ತಿಳಿಸಿತು.

ಕೋಣೆಗಳ ಒಳಗೆ ಲೈಟುಗಳು ಮತ್ತು ಸೀಲಿಂಗ್ ಫ್ಯಾನುಗಳು ನಡುಗುತ್ತಿದ್ದ ವಿಡಿಯೋಗಳನ್ನು ಹಲವರು ಟ್ವಿಟ್ಟರಿನಲ್ಲಿ ಪ್ರಕಟಿಸಿದರು.

No comments:

Advertisement