ಬಾಗ್ದಾದ್: ಇರಾನಿನ ಪರಮ ನಾಯಕ ಅಯತೊಲ್ಲಾ ಅಲಿ ಖೊಮೇನಿ ಅವರು ಬಾಗ್ದಾದಿನಲ್ಲಿ ನಡೆದ ವಾಯುದಾಳಿಯಲ್ಲಿ ಹತರಾದ ಖಾಸಿಂ ಸೊಲೈಮಾನಿ ಅವರ ಸ್ಥಾನದಲಿ ಇಸ್ಲಾಮಿಕ್ ಖಡ್ಸ್ ಪಡೆಗಳ ಮುಖ್ಯಸ್ಥರಾಗಿ ಕ್ರಾಂತಿಕಾರಿ ಗಾರ್ಡ್ಗಳ ವಿದೇಶೀ ಕಾರ್ಯಾಚರಣೆ
ವಿಭಾಗದ
ಉಪ ಮುಖ್ಯಸ್ಥ ಇಸ್ಲಾಮಿಲ್ ಖಾನಿ ಅವರನ್ನು 2020 ಜನವರಿ 03ರ ಶುಕ್ರವಾರ
ನೇಮಕ
ಮಾಡಿದರು.
‘ಖ್ಯಾತಿವೆತ್ತ
ಜನರಲ್ ಹಜ್ ಖಾಸಿಂ ಸೊಲೈಮಾನಿ ಅವರು ಹುತಾತ್ಮರಾಗಿರುವುದನ್ನು ಅನುಸರಿಸಿ, ನಾನು ಬ್ರಿಗೇಡಿಯರ್ ಜನರಲ್ ಇಸ್ಮಾಯಿಲ್ ಖಾನಿ ಅವರನ್ನು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್ ನ ಖಡ್ಸ್ ಪಡೆಗಳ
ಮುಖ್ಯಸ್ಥರಾಗಿ ನೇಮಕ ಮಾಡುತ್ತಿದ್ದೇನೆ’ ಎಂದು
ಅಯತೊಲ್ಲಾ ಅಲಿ ಖೊಮೇನಿ ತಮ್ಮ ಅಧಿಕೃತ ವೆಬ್ ಸೈಟಿನಲ್ಲಿ ಪ್ರಕಟಿಸಲಾದ ಹೇಳಿಕೆಯಲ್ಲಿ ತಿಳಿಸಿದರು.
೧೯೮೦-೮೮ರ ಇರಾನ್ -ಇರಾಕ್ ಸಮರದ ಕಾಲದ ಗಾರ್ಡ್ಸ್ನ ’ಅತ್ಯಂತ ಬಿರುದಾಂಕಿತ
ದಂಡನಾಯಕ’ರಲ್ಲಿ
ಒಬ್ಬ ಎಂದು ಖಾನಿ ಅವರನ್ನು ಖೊಮೇನಿ ಬಣ್ಣಿಸಿದರು.
‘ಖಡ್ಸ್
ಪಡೆಗಳಿಗೆ ಸಂಬಂಧಿಸಿದ ಆದೇಶಗಳು ಹುತಾತ್ಮ ಸೊಲೈಮಾನಿ ನಾಯಕತ್ವದ ವೇಳೆಯಲ್ಲಿ ಇದ್ದಂತೆಯೇ ಇರುತ್ತವೆ’
ಎಂದು ಖೊಮೇನಿ ಹೇಳಿದರು.
‘ಜನರಲ್
ಖಾನಿ ಅವರಿಗೆ ಖುದ್ದು ಹಾಜರಿದ್ದು ಸಹಕಾರ ನೀಡಿ ಮತ್ತು ಅವರಿಗೆ ದೈವೀಕ ಸಮೃದ್ಧಿ, ಮಾರ್ಗದರ್ಶನ ಲಭಿಸಲಿ ಎಂದು ಹಾರೈಸಿ ಎಂದು ಪಡೆಯ ಸದಸ್ಯರಿಗೆ ನಾನು ಕರೆ ನೀಡುತ್ತೇನೆ’ ಎಂದು
ಅವರು ಹೇಳಿದರು.
No comments:
Post a Comment