'ಪೌರತ್ವ:
ಒಂದಂಗುಲವೂ ಹಿಂದಡಿ ಇಡುವುದಿಲ್ಲ..’: ಅಮಿತ್
ಶಾ
ಜೋಧಪುರ (ರಾಜಸ್ಥಾನ):
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪೌರತ್ವ ನೀಡುವುದಕ್ಕಾಗಿ ಇರುವ ಕಾನೂನು ವಿನಃ ಕಿತ್ತುಕೊಳ್ಳುವುದಕ್ಕಾಗಿ ಇರುವ ಕಾನೂನು ಅಲ್ಲ. ವಿರೋಧ ಪಕ್ಷಗಳ ಟೀಕೆಗಳ ಹೊರತಾಗಿಯೂ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯ ತನ್ನ ನಿರ್ಣಯದಿಂದ ಸರ್ಕಾರವು ಒಂದಂಗುಲದಷ್ಟೂ ಹಿಂದಕ್ಕೆ ಸರಿಯುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿರೋಧ
ಪಕ್ಷಗಳಿಗೆ 2020 ಜನವರಿ
03ರ ಶುಕ್ರವಾರ ಇಲ್ಲಿ
ಖಡಕ್ ಉತ್ತರ ನೀಡಿದರು.
ರಾಜಸ್ಥಾನದ
ಜೋಧಪುರದಲ್ಲಿ ತಿದ್ದುಪಡಿಗೊಂಡ ಪೌರತ್ವ ಕಾಯ್ದೆ ಪರವಾಗಿ ಜನಜಾಗೃತಿ ಮೂಡಿಸುವ ರ್ಯಾಲಿಯಲ್ಲಿ ಅಮಿತ್
ಶಾ ಮಾತನಾಡುತ್ತಿದ್ದರು.
‘ಪೌರತ್ವ
ತಿದ್ದುಪಡಿ ಕಾಯ್ದೆಯ ಯಾವುದೇ ವಿಧಿಯೂ ಯಾವ ವ್ಯಕ್ತಿಯ ಪೌರತ್ವವನ್ನು ಕೂಡಾ ಕಿತ್ತುಕೊಳ್ಳುವುದಿಲ್ಲ. ಅದು ಪೌರತ್ವ ನೀಡುವ ಕಾಯ್ದೆ’ ಎಂದು ಅಮಿತ್ ಶಾ
ನುಡಿದರು.
೨೦೧೫ಕ್ಕೆ ಮುನ್ನ ಪಾಕಿಸ್ತಾನ, ಆಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶದಿಂದ ಧಾರ್ಮಿಕ ಕಿರುಕುಳದ ಪರಿಣಾಮವಾಗಿ ಭಾರತಕ್ಕೆ ವಲಸೆ ಬಂದಿರುವ ಅಲ್ಲಿನ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ಒದಗಿಸುವ ಈ ತಿದ್ದುಪಡಿ ಕಾಯ್ದೆ ವಿರುದ್ಧ ವಿರೋಧ ಪಕ್ಷಗಳು ಪ್ರತಿಭಟಿಸುತ್ತಿವೆ.

‘ಎಷ್ಟೇ
ಪಕ್ಷಗಳು ಕಾಯ್ದೆಯ ವಿರುದ್ಧ ಕೈಜೋಡಿಸಿದರೂ ಕೇಂದ್ರ ಸರ್ಕಾರವು ವಿಷಯಕ್ಕೆ ಸಂಬಂಧಿಸಿದಂತೆ ತನ್ನ ನಿರ್ಧಾರದಿಂದ ಒಂದಂಗುಲ ದೂರವೂ ಸರಿಯುವುದಿಲ್ಲ’ ಎಂದು
ಶಾ ದೃಢವಾಗಿ ಹೇಳಿದರು.
‘ಈ
ಎಲ್ಲ ಪಕ್ಷಗಳು ಒಟ್ಟಾದರೂ, ಬಿಜೆಪಿಯ ಪೌರತ್ವ ತಿದ್ದುಪಡಿ ಕಾಯ್ದೆಯ ವಿಚಾರದಿಂದ ಒಂದಂಗುಲದಷ್ಟೂ ಹಿಂದಡಿ ಇಡುವುದಿಲ್ಲ. ನೀವು ಇಚ್ಚಿಸಿದಷ್ಟು ಅಪಪ್ರಚಾರ ಮಾಡುತ್ತಲೇ ಇರಬಹುದು’ ಎಂದು ಶಾ ವಿಪಕ್ಷಗಳಿಗೆ ಚುಚ್ಚಿದರು.
ಕಾಂಗ್ರೆಸ್
ಪಕ್ಷವು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಅಪಪ್ರಚಾರ ಮಾಡುವ ಮೂಲಕ ವೋಟ್ ಬ್ಯಾಂಕ್ ರಾಜಕಾರಣ ನಡೆಸುತ್ತಿದೆ ಎಂದು
ಬಿಜೆಪಿ ನಾಯಕ ಕಾಂಗ್ರೆಸ್ ವಿರುದ್ಧ ದಾಳಿ ನಡೆಸಿದರು.
‘ವೋಟು
ಬ್ಯಾಂಕ್ ರಾಜಕಾರಣಕ್ಕಾಗಿ, ಕಾಂಗ್ರೆಸ್ ಪಕ್ಷವು ವೀರ ಸಾವರ್ಕರ್ ಅವರಂತಹ ಮಹಾನ್ ವ್ಯಕ್ತಿತ್ವದ ಬಗ್ಗೆ ಕೂಡಾ ವಿರೋಧಿ ಮಾತುಗಳನ್ನು ಆಡುತ್ತಿದೆ. ಕಾಂಗ್ರೆಸ್ಸಿಗೆ ತನ್ನ ವರ್ತನೆ ಬಗ್ಗೆ ಸ್ವತಃ ನಾಚಿಕೆಯಾಗಬೇಕು’ ಎಂದು
ಶಾ ಹೇಳಿದರು.
ಇದಕ್ಕೆ ಮುನ್ನ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರು ’ಸರ್ಕಾರವು ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜಿಸುತ್ತಿದೆ ಎಂದು ಆಪಾದಿಸಿ ಕೇಂದ್ರದ ವಿರುದ್ಧ ದಾಳಿ ನಡೆಸಿದ್ದರು. ತಮ್ಮ ಹಕ್ಕುಗಳನ್ನು ಕಿತ್ತುಕೊಳ್ಳಲು ನಾವು ಬಿಜೆಪಿಗೆ ಅವಕಾಶ ನೀಡುವುದಿಲ್ಲ’ ಎಂದು ಬ್ಯಾನರ್ಜಿ ಹೇಳಿದ್ದರು.

‘ನಾವು
ನೌಕರಿ ಅಭಾವ ಮತ್ತು ಹಸಿವಿನ ವಿಷಯ ಪ್ರಸ್ತಾಪಿಸಿದರೆ ಅವರು ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳುತ್ತಾರೆ’ ಎಂದು
ಬ್ಯಾನರ್ಜಿ ಅವರು ಸಿಲಿಗುರಿಯಲ್ಲಿ ಭಾಷಣ ಮಾಡುತ್ತಾ ಹೇಳಿದ್ದರು. ’ನಮ್ಮ ಹಕ್ಕುಗಳನ್ನು ಕಿತ್ತುಕೊಳ್ಳಲು ನಾನು ಅವರಿಗೆ ಅವಕಾಶ ನೀಡುವುದಿಲ್ಲ’ ಎಂದು
ಮಮತಾ ಹೇಳಿದ್ದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪೌರತ್ವ (ತಿದ್ದುಪಡಿ) ಕಾಯ್ದೆಯ ವಿಧಿಗಳ ಬಗೆಗಿನ ಅನುಮಾನಗಳನ್ನು ನಿವಾರಿಸಲು ಸರ್ವ ಕ್ರಮಗಳನ್ನೂ ಕೈಗೊಳ್ಳುತ್ತಿದೆ ಎಂದು ಪಕ್ಷದ ನಾಯಕ ಅನಿಲ್ ಜೈನ್ ಹೇಳಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪೌರತ್ವ (ತಿದ್ದುಪಡಿ) ಕಾಯ್ದೆಯ ವಿಧಿಗಳ ಬಗೆಗಿನ ಅನುಮಾನಗಳನ್ನು ನಿವಾರಿಸಲು ಸರ್ವ ಕ್ರಮಗಳನ್ನೂ ಕೈಗೊಳ್ಳುತ್ತಿದೆ ಎಂದು ಪಕ್ಷದ ನಾಯಕ ಅನಿಲ್ ಜೈನ್ ಹೇಳಿದರು.
ಬಿಜೆಪಿಯ
ಪೌರತ್ವ (ತಿದ್ದುಪಡಿ) ಕಾಯ್ದೆಯ ವಿಧಿಗಳ ಬಗೆಗಿನ ಅನುಮಾನಗಳನ್ನು ನಿವಾರಿಸಲು ಬಿಜೆಪಿಯ ಮನೆ ಮನೆ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನದಲ್ಲಿ ಪೌರತ್ವ
ತಿದ್ದುಪಡಿ ಕಾಯ್ದೆ ಬಗೆಗಿನ ಅನುಮಾನಗಳನ್ನು ಬಗೆಹರಿಸಲು ಮೂರು ಕೋಟಿ ಕುಟುಂಬಗಳನ್ನು ಸಂಪರ್ಕಸಲಾಗುವುದು ಎಂದು ಜೈನ್ ನುಡಿದರು.
No comments:
Post a Comment