Thursday, January 16, 2020

ಭಾರತದಲ್ಲಿವೆ ತೀವ್ರಗಾಮಿ ಪರಿವರ್ತನಾ ಶಿಬಿರಗಳು: ಜನರಲ್ ಬಿಪಿನ್ ರಾವತ್

ಭಾರತದಲ್ಲಿವೆ ತೀವ್ರಗಾಮಿ ಪರಿವರ್ತನಾ ಶಿಬಿರಗಳು: ಜನರಲ್ ಬಿಪಿನ್ ರಾವತ್
ನವದೆಹಲಿ: ಇದೇ ಮೊತ್ತ ಮೊದಲ ಬಾರಿಗೆ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವತೀವ್ರಗಾಮಿ ಪರಿವರ್ತನಾ ಶಿಬಿರಗಳ ಮಾತನಾಡಿರುವ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಶಿಬಿರಗಳಲ್ಲಿ ಸಂಪೂರ್ಣವಾಗಿ ತೀವ್ರಗಾಮಿಗಳಾಗಿರುವ ಯುವ ಕಾಶ್ಮೀರಿಗಳನ್ನು ಪ್ರತ್ಯೇಕಿತರನ್ನಾಗಿ ಮಾಡಿ ಇರಿಸಲಾಗುತ್ತದೆಎಂದು ಬಹಿರಂಗ ಪಡಿಸಿದರು.

ಪಾಕಿಸ್ತಾನದಲ್ಲಿ ಕೂಡಾ ಇಂತಹ ಶಿಬಿರಗಳು ಇವೆಎಂದು ರಾವತ್ ಹೇಳಿದರು.

ನವದಹಲಿಯಲ್ಲಿ ನಡೆದರೈಸೀನಾ ಸಂಭಾಷಣೆ ೨೦೨೦ರಲ್ಲಿ ನಡೆದ ಚರ್ಚಾಕೂಟದಲ್ಲಿ ಮಾತನಾಡಿದ ಜನರಲ್ ರಾವತ್ ಅವರುಕಾಶ್ಮೀರದಲ್ಲಿ ಇಂದು ೧೦-೧೨ರ ವಯಸ್ಸಿನಲ್ಲೇ ಮಕ್ಕಳನ್ನು ತೀವ್ರವಾದಿಗಳನ್ನು ಪರಿವರ್ತಿಸಲಾಗುತ್ತಿದೆಎಂದು ನುಡಿದರು.

ಇಂತಹ ಜನರನ್ನು ಈಗಲೂ ತೀವ್ರವಾದಿತ್ವದಿಂದ ಪ್ರತ್ಯೇಕಿಸಿ ಕ್ರಮೇಣ ಮಂದಗಾಮಿಗಳನ್ನಾಗಿ ಪರಿವರ್ತಿಸಲು ಸಾಧ್ಯವಿದೆ. ಆದರೆ ಸಂಪೂರ್ಣವಾಗಿ ತೀವ್ರವಾದಿಗಳಾಗಿರುವ ಜನರಿದ್ದಾರೆ. ಇವರನ್ನು ಸಂಪೂರ್ಣವಾಗಿ ಪ್ರತ್ಯೇಕಿಸಿ ತೀವ್ರವಾದದಿಂದ ಮುಕ್ತಗೊಳಿಸುವತೀವ್ರಗಾಮಿ ಪರಿವರ್ತನಾ ಶಿಬಿರಗಳಿಗೆ ಕಳುಹಿಸಬೇಕಾಗುತ್ತದೆ. ನಮ್ಮ ರಾಷ್ಟ್ರದಲ್ಲಿ ನಾವು ಇಂತಹ ತೀವ್ರಗಾಮಿ ಪರಿವರ್ತನಾ ಶಿಬಿರಗಳನ್ನು ಹೊಂದಿದ್ದೇವೆ. ನಿಮಗೆ ಹೇಳಬೇಕೆಂದರೆ, ಪಾಕಿಸ್ತಾನದಲ್ಲೂ ಇಂತಹುದೇ ಶಿಬಿರಗಳಿವೆ. ಅವರು ತೀವ್ರವಾದಿಗಳನ್ನಾಗಿ ಯಾರನ್ನು ಮಾಡಿದ್ದಾರೋ ಅವರಲ್ಲಿ ಕೆಲವರು ಅವರ ವಿರುದ್ಧ ತಿರುಗಿ ಬೀಳುತ್ತಿದ್ದಾರೆ ಎಂಬುದು ಅವರಿಗೂ ಗೊತ್ತಾಗಿದೆಎಂದು ಜನರಲ್ ರಾವತ್ ಹೇಳಿದರು.

ವ್ಯಕ್ತಿಗಳನ್ನು ಸರಿಯಾಗಿ ಗುರಿ ಇಡುವ ಮೂಲಕ ತೀವ್ರವಾದವನ್ನು ತಡೆಯಲು ಸಾಧ್ಯವಿದೆ. ’ಸರಿಯಾದ ವ್ಯಕ್ತಿಗಳನ್ನು ಗುರಿಮಾಡುವ ಮೂಲಕ ಅಂತರ್ಜಾಲ ತೀವ್ರವಾದಿತ್ವವನ್ನು  (ಆನ್ ಲೈನ್ ರಾಡಿಕಲಿಸಂ) ಕೊನೆಗೊಳಿಸಲು ಸಾಧ್ಯವಿದೆ. ನಾವು ತೀವ್ರವಾದದ ಸಿದ್ಧಾಂತದಿಂದ ಅವರನ್ನು ಮುಕ್ತರನ್ನಾಗಿ ಮಾಡಬೇಕಾಗುತ್ತದೆಎಂದು ರಾವತ್  ನುಡಿದರು.

೨೦೧೬ರಲ್ಲಿ ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಬುರ್ಹಾನ್ ವನಿ ಸಾವಿನ ಬಳಕ ಕಾಶ್ಮೀರದಲ್ಲಿ ಯುವ ಜನರನ್ನು ತೀವ್ರವಾದಿಗಳನ್ನಾಗಿ ಮಾಡುವುದು ಹೆಚ್ಚಿದೆ. ಆರು ತಿಂಗಳುಗಳಿಗೂ ಹೆಚ್ಚು ಕಾಲ ಕಾಶ್ಮೀರವು ಕಲ್ಲೆಸೆಯುವ ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು. ಇವುಗಳಲ್ಲಿ ಅತ್ಯಂತ ಎಳೆವಯಸ್ಸಿನ ಮಕ್ಕಳೇ ಶಾಮೀಲಾಗುತ್ತಿದ್ದರು ಎಂದು ಜನರಲ್ ರಾವತ್ ವಿವರಿಸಿದರು.

ನಂತರದ ವರ್ಷ ಪುಲ್ವಾಮ, ಕುಲಗಂ, ಶೋಪಿಯಾನ್ ಮತ್ತು ಅನಂತನಾಗ್ ಸೇರಿದಂತೆ ಇಡೀ ದಕ್ಷಿಣ ಕಾಶ್ಮೀರ ಭಯೋತ್ಪಾದಕರಿಗೆ ಸುಳಿದಾಣವಾಗಿತ್ತು. ಅವರಿಗೆ ಇಷ್ಟ ಬಂದಾಗ ಅವರು ದಾಳಿ ನಡೆಸುತ್ತಿದ್ದರು ಎಂದು ರಾವತ್ ನುಡಿದರು.

ಕಳೆದ ಆಗಸ್ಟ್ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾಗಿ ರಾಜ್ಯವು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನಗೊಂಡವು. ಭಯೋತ್ಪಾದಕರ ದಾಳಿಗಳ ನಿಗ್ರಹಕ್ಕಾಗಿ ಕೇಂದ್ರವು ಸರಣಿ ನಿರ್ಬಂಧಗಳನ್ನು ಹೇರಿತು ಎಂದು ರಾವತ್ ಹೇಳಿದರು.

No comments:

Advertisement