Monday, January 27, 2020

ಸಿಎಎ ವಿರೋಧಿ ಪ್ರತಿಭಟನೆ: ಹೈದರಾಬಾದ್‌ನಲ್ಲಿ ಚಂದ್ರಶೇಖರ್ ಆಜಾದ್ ಬಂಧನ

ಸಿಎಎ ವಿರೋಧಿ ಪ್ರತಿಭಟನೆ: ಹೈದರಾಬಾದ್ನಲ್ಲಿ ಚಂದ್ರಶೇಖರ್ ಆಜಾದ್ ಬಂಧನ
ಹೈದರಾಬಾದ್:  ಟಾಟಾ ಸಮಾಜ ವಿಜ್ಞಾನ ಸಂಸ್ಥೆ (ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ -ಟಿಐಎಸ್ಎಸ್) ವಿದ್ಯಾರ್ಥಿಗಳು ಆಯೋಜಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಭೀಮ ಸೇನಾ ಮುಖ್ಯಸ್ಥ ಚಂದ್ರ ಶೇಖರ್ ಆಜಾದ್ ಅವರನ್ನು  2020 ಜನವರಿ 26ರ ಭಾನುವಾರ  ಸಂಜೆ ಹೈದರಾಬಾದ್ ಪೊಲೀಸರು ಬಂಧಿಸಿದರು.
ಬಂಧನಕ್ಕೊಳಗಾದಾಗ ಸಿಎಎ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್-ಎನ್ಪಿ ಆರ್) ವಿರುದ್ಧ ವಿದ್ಯಾರ್ಥಿಗಳು ಆಯೋಜಿಸಿದ್ದ ಪ್ರದರ್ಶನದ ಆರಂಭದ ತಾಣವಾದ ಮೆಹದಿಪಟ್ಟಣಂದ ಕ್ರಿಸ್ಟಲ್ ಗಾರ್ಡನ್ ಕಡೆಗೆ ಆಜಾದ್ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದರು.
ಹಬೀಬ್ ನಗರ ಪೊಲೀಸ್ ಠಾಣಾ ಪ್ರದೇಶದಲ್ಲಿ ಜನ ಸಮೂಹ ಸೇರಲು ಪ್ರಾರಂಭಿಸಿದ ನಂತರ ಆಜಾದ್ ಅವರನ್ನು  ಹಬೀಬ್ ನಗರ ಪೊಲೀಸ್ ಠಾಣೆಯಿಂದ ಬಲ್ಲಾರಂ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಬಂಧಿತರಾದ ಎಲ್ಲರನ್ನೂ ಬಳಿಕ ಗೋಶಮಹಲ್ ಕ್ರೀಡಾಂಗಣಕ್ಕೆ ಕರೆದೊಯ್ಯಲಾಯಿತು.

೭೧ ನೇ ಗಣರಾಜ್ಯೋತ್ಸವದಂದು ಟಾಟಾ ಸಮಾಜ ವಿಜ್ಞಾನ ಸಂಸ್ಥೆ ಮತ್ತು ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆಯೋಜಿಸಿದ್ದ ಪ್ರತಿಭಟನೆ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಜಾದ್ ನಗರಕ್ಕೆ ಬಂದಿದ್ದರು.

ಮೆಜ್ದಿಪಟ್ಟಣಂ ಆಂದೋಲನ ನಡೆಯುವ ಸ್ಥಳಕ್ಕೆ ತೆರಳಲು ನಗರ ಪೊಲೀಸರು ಜನರನ್ನು ತಡೆಯುತ್ತಿದ್ದಾರೆ ಎಂದು ಇದಕ್ಕೆ ಮುನ್ನ ಮಧ್ಯಾಹ್ನ ಆಜಾದ್ ಅವರ ಖಾತೆಯಿಂದ ಟ್ವೀಟ್ ಮಾಡಲಾಗಿತ್ತು.

"ನಾನು ಇದೀಗ, ಸಂಜೆ ಗಂಟೆಗೆ, ಮೆಹದಿಪಟ್ಟಣಂನ ಕ್ರಿಸ್ಟಲ್ ಗಾರ್ಡನ್ ತಲುಪುತ್ತಿದ್ದೇನೆ, ಆದರೆ ಹೈದರಾಬಾದ್ ಪೊಲೀಸರು ಸ್ಥಳವನ್ನು ಪೊಲೀಸ್ ಶಿಬಿರವಾಗಿ ಪರಿವರ್ತಿಸಿದ್ದಾರೆ ಮತ್ತು ಜನರು ಕಾರ್ಯಕ್ರಮ ಸ್ಥಳವನ್ನು ತಲುಪದಂತೆ ತಡೆಯುತ್ತಿದ್ದಾರೆ" ಎಂದು ಅವರ ಟ್ವೀಟ್ ಹೇಳಿತ್ತು.

ಸಿಎಎ ವಿರೋಧಿ ಮತ್ತು ಎನ್ಪಿಆರ್  ವಿರೋಧಿ ಪ್ರತಿಭಟನೆಯನ್ನು ನಗರ ಪೊಲೀಸರ ಅನುಮತಿಯಿಲ್ಲದೆ ಆಯೋಜಿಸಲಾಗುತ್ತಿರುವುದರಿಂದ ಆಜಾದ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೈದರಾಬಾದ್ ಪೊಲೀಸರು ತಿಳಿಸಿದರು.

ಸಿಎಎ ವಿರುದ್ಧ ಪ್ರತಿಭಟನೆ ನಡೆಸಲು ಅಂಬೇಡ್ಕರ್ ಪ್ರತಿಮೆಯತ್ತ ಸಾಗುತ್ತಿದ್ದ ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಗುಂಪನ್ನು ಸಹ ವಿಶ್ವವಿದ್ಯಾಲಯದ ಮುಖ್ಯ ದ್ವಾರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಗಳು ತಿಳಿಸಿದವು.

ದೆಹಲಿಯ ಶಾಹೀನ್ ಬಾಗ್ ಪ್ರದೇಶದಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ್ದ ಆಜಾದ್ ಪೌರತ್ವ ವಿರೋಧಿ ಕಾಯ್ದೆ ಪ್ರತಿಭಟನೆಗಳು ದೇಶಾದ್ಯಂತ ಹರಡಲಿವೆ ಎಂದಿದ್ದರು.

"ಮುಂದಿನ ದಿನಗಳಲ್ಲಿ ದೇಶಾದ್ಯಂತ ಕನಿಷ್ಠ ,೦೦೦ ಶಾಹೀನ್ ಬಾಗ್ಗಳು ಇರುತ್ತವೆ ಎಂದು ನಾನು ನಿಮಗೆ ಭರವಸೆ ನೀಡಬಲ್ಲೆಎಂದು ಅವರು ದೆಹಲಿಯಲ್ಲಿ ಹೇಳಿದ್ದರು.

No comments:

Advertisement