ಸೌರವ್ಯೂಹದ ಅತೀ ಪ್ರಾಚೀನ ಘನ ವಸ್ತು ಪತ್ತೆ
ವಾಷಿಂಗ್ಟನ್: ಸೌರವ್ಯೂಹದ ಅತಿ ಪ್ರಾಚೀನ ಘನ
ವಸ್ತುವೊಂದು ಆಸ್ಟ್ರೇಲಿಯಾದಲ್ಲಿ ಪತ್ತೆಯಾಗಿದ್ದು, ಇದು ನಕ್ಷತ್ರದ ಅತಿ ಸಣ್ಣ ತುಣುಕು ಎಂದು
ವಿಜ್ಞಾನಿಗಳು 2020 ಜನವರಿ 15ರ ಬುಧವಾರ ತಿಳಿಸಿದರು.
ಈ ಘನ ವಸ್ತು ೭೦೦ ಕೋಟಿ ವರ್ಷಗಳಷ್ಟು ಹಳೆಯದಾಗಿದೆ ಎಂದು ವಿಜ್ಞಾನಿಗಳು ಹೇಳಿದರು.
ಐವತ್ತು ವರ್ಷಗಳ ಹಿಂದೆ ಆಸ್ಟ್ರೇಲಿಯಾದ ನಿರ್ಜನ ಪ್ರದೇಶದಲ್ಲಿ
ಉಲ್ಕೆಯೊಂದು ಅಪ್ಪಳಿಸಿದಾಗ ಅದರ ಜೊತೆಗೆ ಈ ನಕ್ಷತ್ರದ ಚೂರು ಸಹ ಭೂಮಿಗೆ ಬಂದು ಸೇರಿಕೊಂಡಿತು. ಇದು
ಸೂರ್ಯನ ಸೃಷ್ಟಿಗೂ ಮುನ್ನ ತಾರೆಗಳು ಉದಯಿಸುವಾಗ ಜನಿಸಿರುವ ವಸ್ತು ಎಂಬುದು ಪರೀಕ್ಷೆಯಿಂದ ತಿಳಿದುಬಂದಿದೆ.
ಇದರಿಂದ ತಾರೆಗಳ ಉಗಮದ ಬಗ್ಗೆ ಹೊಸ ಮಾಹಿತಿಗಳು ಸಿಗಲಿದ್ದು,
ಈ ವರೆಗೆ ಇರುವ ಸಿದ್ಧಾಂತಗಳನ್ನು ಮೀರಿದ ಮತ್ತೊಂದು ಸಿದ್ಧಾಂತ ಸೃಷ್ಟಿಯಾಗುವ ಸಾಧ್ಯತೆಯಿದೆ ಎಂದು
ಷಿಕಾಗೋ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಫಿಲಿಪ್ ಹೆಕ್ ತಿಳಿಸಿದರು.
No comments:
Post a Comment