ಪ್ರತ್ಯೇಕವಾಗಿ
ಗಲ್ಲು ಜಾರಿ ಕೋರಿಕೆ: ಸುಪ್ರೀಂ
ವಿಚಾರಣೆ ಫೆಬ್ರುವರಿ 11ಕ್ಕೆ
ನವದಹೆಲಿ:
ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸಲು ಅನುಮತಿ ನೀಡುವಂತೆ ಕೋರಿ ಕೇಂದ್ರ ಮತ್ತು ದೆಹಲಿ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ 2020 ಫೆಬ್ರುವರಿ ೧೧ರ ಮಂಗಳವಾರ ನಡೆಸಲಿದೆ.
ಗಲ್ಲು
ಶಿಕ್ಷೆ ಜಾರಿಗೆ ದೆಹಲಿಯ ವಿಚಾರಣಾ ನ್ಯಾಯಾಲಯವು ತಡೆಯಾಜ್ಞೆ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ತನ್ನ ಅರ್ಜಿಯನ್ನು ವಜಾಗೊಳಿಸಿದ ದೆಹಲಿ ಹೈಕೋರ್ಟ್ ತೀರ್ಪನ್ನು ಕೇಂದ್ರವು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿತ್ತು.
ಸರ್ಕಾರವು
ನಾಲ್ಕೂ ಮಂದಿ ಶಿಕ್ಷಿತ ಅಪರಾಧಿಗಳಿಗೆ ನೋಟಿಸ್ಗಳನ್ನು ಕಳುಹಿಸಬೇಕು ಎಂದು ಸರ್ಕಾರ ಬಯಸಿತು. ಆದರೆ, ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವದ ಪೀಠವು ಇದರಿಂದ ವಿಷಯವು ಇನ್ನಷ್ಟು ವಿಳಂಬವಾಗುತ್ತದೆ ಎಂದು ಹೇಳಿ ಸರ್ಕಾರವ ಮನವಿಯನ್ನು ಒಪ್ಪಲಿಲ್ಲ.
‘ರಾಷ್ಟ್ರದ
ಸಹನೆಯನ್ನು ಸಾಕಷ್ಟು ಪರೀಕ್ಷೆಗೆ ಒಡ್ಡಲಾಗಿದೆ. ಸುಪ್ರೀಂಕೋರ್ಟ್ ಈ ವಿಚಾರವಾಗಿ ಕಾನೂನು
ರೂಪಿಸಬೇಕಾಗುತ್ತದೆ’ ಎಂದು
ಸರ್ಕಾರದ ಪರ ವಕೀಲ ತುಷಾರ
ಮೆಹ್ತ ಹೇಳಿದರು.
ದೆಹಲಿಯಲ್ಲಿ
ನಡೆದ ೨೦೧೨ರ ’ನಿರ್ಭಯಾ’ ಎಂದೇ ಪರಿಚಿತರಾದ ೨೩ರ ಹರೆಯದ ಫಿಸಿಯೋಥೆರೆಪಿ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ವಿನಯ್ ಶರ್ಮ, ಪವನ್ ಗುಪ್ತ, ಮುಕೇಶ್ ಸಿಂಗ್ ಮತ್ತು ಅಕ್ಷಯ್ ಸಿಂಗ್ ಅವರಿಗೆ ಮರಣದಂಡನೆ ವಿಧಿಸಲಾಗಿದ್ದು ತಿಹಾರ್ ಸೆರೆಮನೆಯಲ್ಲಿ ಫೆಬ್ರುವರಿ ೧ರಂದು ಗಲ್ಲಿಗೆ ಏರಿಸಬೇಕಾಗಿತ್ತು.
ಆದರೆ
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಎರಡನೇ ಶಿಕ್ಷಿತ ಅಪರಾಧಿ ವಿನಯ್ ಶರ್ಮ ಕ್ಷಮಾದಾನ ಕೋರಿಕೆ ಅರ್ಜಿ ಸಲ್ಲಿಸಿದ್ದನ್ನು ಅನುಸರಿಸಿ ದೆಹಲಿಯ ವಿಚಾರಣಾ ನ್ಯಾಯಾಲಯವು ಗಲ್ಲು ಶಿಕ್ಷೆಯ ಜಾರಿಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿತ್ತು. ವಿನಯ್ ಶರ್ಮ ಕ್ಷಮಾದಾನ ಕೋರಿಕೆ ಅರ್ಜಿ ತಿರಸ್ಕೃತವಾಗುತ್ತಿದಂತೆಯೇ ಜೊತೆಗೆ ಇನ್ನೊಬ್ಬ ಅಪರಾಧಿ ಅಕ್ಷಯ್ ಸಿಂಗ್ ತನ್ನ ಕ್ಷಮಾದಾನ ಕೋರಿಕೆ ಅರ್ಜಿಯನ್ನು ಸಲ್ಲಿಸಿದ್ದ.
ಈ
ಹಿನ್ನೆಲೆಯಲ್ಲಿ, ಗಲ್ಲು ಜಾರಿಯನ್ನು ವಿಳಂಬಗೊಳಿಸಲು ಪ್ರತಿಯೊಂದು ಲೋಪವನ್ನೂ ಬಳಸಿಕೊಳ್ಳುವ ನಿಟ್ಟಿನಲ್ಲಿ ಅಪರಾಧಿಗಳು ಪರಸ್ಪರ ಕೈಜೋಡಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸುಪ್ರೀಂಕೋರ್ಟ್
ಮೆಟ್ಟಿಲು ಏರಿದ ಕೇಂದ್ರ ಸರ್ಕಾರ ತನ್ನ ಅರ್ಜಿಯಲ್ಲಿ ನ್ಯಾಯಾಲಯಕ್ಕೆ ತಿಳಿಸಿದೆ.
No comments:
Post a Comment