ವುಹಾನ್‌ನಿಂದ
ವಾಪಸಾದ ಭಾರತೀಯರ ‘ನರ್ತನ’
ವಿಡಿಯೋ
ವೈರಲ್
ನವದೆಹಲಿ: ಮಾರಕ
ಕೊರೋನಾವೈರಸ್ ಕೇಂದ್ರವಾದ ಚೀನಾದ ವುಹಾನ್ ನಗರದಿಂದ ವಿಮಾನದ ಮೂಲಕ ಭಾರತಕ್ಕೆ ಸ್ಥಳಾಂತರಗೊಂಡಿರುವ ಕೆಲವು ಭಾರತೀಯರು, ಭಾರತೀಯ ಸೇನಾ ಸಿಬ್ಬಂದಿ ನಿರ್ಮಿಸಿರುವ ಏಕಾಂತವಾಸದ ಸವಲತ್ತು ಸ್ಥಳದಲ್ಲಿ ಕುಶಿಯಿಂದ ನರ್ತಿಸಿದ ವಿಡಿಯೋ 2020 ಫೆಬ್ರುವರಿ
02ರ ಭಾನುವಾರ ವೈರಲ್ ಆಯಿತು.
ಏರ್ ಇಂಡಿಯಾ
ವಕ್ತಾರ ಧನಂಜಯ್ ಕುಮಾರ್ ಅವರು ವಿಡಿಯೋ ಕ್ಲಿಪ್ನ್ನು ಟ್ವೀಟ್ ಮಾಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ಸುಮಾರು ೭೦೦ ಮಂದಿ ಅದನ್ನು ಲೈಕ್ ಮಾಡಿದ್ದಾರೆ ಮತ್ತು ಕನಿಷ್ಠ ೧೭೯ ಮಂದಿ ರಿಟ್ವೀಟ್ ಮಾಡಿದರು.
೧೬ ಸೆಕೆಂಡ್
ಅವಧಿಯ ಈ ವಿಡಿಯೋ ದೃಶ್ಯಾವಳಿಯಲ್ಲಿ
ಮುಖವಾಡ (ಮಾಸ್ಕ್) ಧರಿಸಿದ ಕನಿಷ್ಠ ೬ ಮಂದಿ ವಿದ್ಯಾರ್ಥಿಗಳು
’ಬ್ಯಾಹ್ ದಿ ಅನ್ಪಧ್ ಹಲಿಕೆ’ ಹರಿಣ
ಹಾಡಿಗೆ ಹೆಜ್ಜೆ ಹಾಕುತ್ತಾ ನರ್ತಿಸುತ್ತಿರುವುದು ದಾಖಲಾಗಿದೆ. ಇತರ ಹಲವರು ಅಲ್ಲೇ ನಿಂತುಕೊಂಡಿರುವುದು ಮತ್ತು ಕೆಲವು ಸಹೋದ್ಯೋಗಿಗಳ ನರ್ತನವನ್ನು ಸೆರೆಹಡಿಯಲು ತಮ್ಮ ಮೊಬೈಲ್ ಬಳಸುತ್ತಿರುವುದನ್ನೂ ವಿಡಿಯೋ ದೃಶ್ಯಾವಳಿ ತೋರಿಸಿದೆ.
ಏರ್ ಇಂಡಿಯಾದ
ಎರಡು ವಿಶೇಷ ವಿಮಾನಗಳು ಚೀನಾದ ಹುಬೇ ಪ್ರಾಂತದ ವುಹಾನ್ ನಗರದಿಂದ ಸುಮಾರು ೬೦೦ಕ್ಕೂ ಹೆಚ್ಚು ಮಂದಿ ಭಾರತೀಯರನ್ನು ಶನಿವಾರ ಮತ್ತು ಭಾನುವಾರ ಸ್ವದೇಶಕ್ಕೆ ಮರಳಿ ಕರೆತಂದಿವೆ.
ವುಹಾನ್ ನಿಂದ
ಶನಿವಾರ ತೆರವುಗೊಳಿಸಲಾಗಿರುವ ೩೨೪ ಭಾರತೀಯರ ಪೈಕಿ ೨೧೧ ಮಂದಿ ವಿದ್ಯಾರ್ಥಿಗಳಾಗಿದ್ದು, ೧೧೦ ಮಂದಿ ಅಲ್ಲಿ ಕೆಲಸ ಮಾಡುತ್ತಿದ್ದ ವೃತ್ತಿ ನಿರತರು ಮತ್ತು ಮೂವರು ಮಕ್ಕಳು ಸೇರಿದ್ದಾರೆ. ಭಾನುವಾರ ೩೨೩ ಭಾರತೀಯರು ವುಹಾನ್ ನಗರದಿಂದ ವಾಪಸಾಗಿದ್ದು ಅವೆರಲ್ಲರನ್ನೂ ಇದೀಗ ಏಕಾಂತವಾಸಕ್ಕೆ ಕಳುಹಿಸಲಾಗಿದೆ.
ಭಾರತೀಯ ಸೇನೆ
ಮತ್ತು ಇಂಡೋ -ಟಿಬೆಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ದೆಹಲಿ ಮತ್ತು ನೆರೆಯ ಹರಿಯಾಣದ ಮಾನೆಸರದಲ್ಲಿ ನಿರ್ಮಿಸಿರುವ ಎರಡು ಏಕಾಂತ ಸವಲತ್ತು (ಕ್ವಾರಂಟೈನ್ ಫೆಸಿಲಿಟಿ) ಕೇಂದ್ರಗಳಿಗೆ ತರುವ ಮುನ್ನ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತರಲಾದ ಈ ಎಲ್ಲ ಭಾರತೀಯರನ್ನು
ಕೂಡಾ ಕೊರೋನಾವೈರಸ್ ರೋಗ ಲಕ್ಷಣಗಳಿಗಾಗಿ ತಪಾಸಣೆಗೆ ಗುರಿಪಡಿಸಲಾಯಿತು.
No comments:
Post a Comment