Tuesday, February 4, 2020

ಕೇಜ್ರಿವಾಲ್ ಭಯೋತ್ಪಾದಕ: ಪರ್ವೇಶ್ ವರ್ಮಾ ಬೆಂಬಲಕ್ಕೆ ಜಾವಡೇಕರ್

ಕೇಜ್ರಿವಾಲ್ ಭಯೋತ್ಪಾದಕ: ಪರ್ವೇಶ್ ವರ್ಮಾ
ಬೆಂಬಲಕ್ಕೆ ಜಾವಡೇಕರ್
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನುಭಯೋತ್ಪಾದಕಎಂಬುದಾಗಿ ಕರೆದಿರುವುದಕ್ಕಾಗಿ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರು ತೀವ್ರ ಟೀಕೆಗೆ ಒಳಗಾಗಿರುವುದರ ಮಧ್ಯೆಯೇ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು 2020ರ ಫೆಬ್ರುವರಿ 03ರ ಸೋಮವಾರ ಪಕ್ಷ ಸಂಸದನ ಬೆಂಬಲಕ್ಕೆ ಬಂದಿದ್ದು, ’ಕೇಜ್ರಿವಾಲ್ ವಿರುದ್ಧದ ಆರೋಪವನ್ನು ಸಾಬೀತುಪಡಿಸಲು ಬೇಕಾದಷ್ಟು ಸಾಕ್ಷ್ಯಾಧಾರಗಳು ಇವೆಎಂದು ಪ್ರತಿಪಾದಿಸಿದರು.

ಕೇಜ್ರಿವಾಲ್ ವಿರುದ್ಧ ವರ್ಮಾ ಮಾಡಿದ ಆರೋಪವನ್ನು ಪತ್ರಿಕಾಗೋಷ್ಠಿಯಲ್ಲಿ ಪುನರುಚ್ಚರಿಸಿದ ಜಾವಡೇಕರ್, ’ಕೇಜ್ರಿವಾಲ್ ಅವರು ಈಗ ಬೇಸರದ ಮುಖ ಹೊತ್ತುಕೊಂಡುನಾನು ಭಯೋತ್ಪಾದಕನೇ?’ ಎಂದು ಕೇಳುತ್ತಿದ್ದಾರೆ. ನೀವು ಭಯೋತ್ಪಾದಕ ಮತ್ತು ಅದನ್ನು ಸಾಬೀತು ಪಡಿಸಲು ಬೇಕಾದಷ್ಟು ಸಾಕ್ಷ್ಯಾಧಾರಗಳಿವೆ. ನೀವೊಬ್ಬ ಅರಾಜಕತಾವಾದಿ ಎಂದು ನೀವೇ ಸ್ವತಃ ಹೇಳಿಕೊಂಡಿದ್ದಿರಿ. ಅರಾಜಕತಾವಾದಿ ಮತ್ತು ಭಯೋತ್ಪಾದಕನಿಗೆ ಹೆಚ್ಚಿನ ವ್ಯತ್ಯಾಸವೇನಿಲ್ಲಎಂದು ಹೇಳಿದರು.

ಕೇಜ್ರಿವಾಲ್ ವಿರುದ್ಧ ಮಾಡಿದ ಟೀಕೆಗಾಗಿ ಚುನಾವಣಾ ಆಯೋಗವು ಪರ್ವೇಶ್ ವರ್ಮಾ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ ಕೆಲವು ದಿನಗಳ ಬಳಿಕ ಜಾವಡೇಕರ್ ಅವರಿಂದ ಹೇಳಿಕೆ ಬಂದಿತು.

ಬಿಜೆಪಿ ದೆಹಲಿ ಘಟಕದ ಮುಖ್ಯಸ್ಥ ಮನೋಜ್ ತಿವಾರಿ ಮತ್ತು ಕೇಂದ್ರ ಸಚಿವ ಅನುರಾಗ್ ಠಾಕೂರ್ ಜೊತೆಗೆ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡ ಜಾವಡೇಕರ್, ’ಕೇಜ್ರಿವಾಲ್ ಅವರು ಪಂಜಾಬ್ ವಿಧಾನಸಭಾ ಚುನಾವಣೆಗಳ ವೇಳೆಯಲ್ಲಿ ಖಲಿಸ್ಥಾನ್ ಕಮಾಂಡೋ ಪಡೆಯ ಮುಖ್ಯಸ್ಥ ಗುರೀಂದರ್ ಸಿಂಗ್ ಮೋಗಾ ನಿವಾಸದಲ್ಲಿ ಒಂದು ರಾತ್ರಿ ತಂಗಿದ್ದರುಎಂದು ನೆನಪಿಸಿದರು.

ಅದು ಉಗ್ರಗಾಮಿಯೊಬ್ಬನ ಮನೆ ಎಂಬುದು ನಿಮಗೆ ಗೊತ್ತಿದೆ. ಆದರೂ, ನೀವು ಅಲ್ಲಿ ತಂಗಿದ್ದಿರಿ. ಇನ್ನೆಷ್ಟು ಸಾಕ್ಷ್ಯಗಳ ಅಗತ್ಯವಿದೆ?’ ಎಂದು ಜಾವಡೇಕರ್ ಪ್ರಶ್ನಿಸಿದರು.

ಆಮ್ ಆದ್ಮಿ ಪಕ್ಷವು (ಆಪ್) ಶಾಹೀನ್ ಬಾಗ್ ಪ್ರತಿಭಟನೆಗಳನ್ನು ಬೆಂಬಲಿಸುತ್ತಿದೆ. ಪ್ರತಿಭಟನೆಯಲ್ಲಿಅಸೋಂ ಕೋ ಆಜಾದಿ, ’ಜಿನ್ನಾವಾಲಿ ಆಜಾದಿ (ಅಸ್ಸಾಮಿಗೆ ಸ್ವಾತಂತ್ರ್ಯ, ಜಿನ್ನಾವಾಲಿಗಳಿಗೆ ಸ್ವಾತಂತ್ರ್ಯ) ಘೋಷಣೆಗಳನ್ನು ಮೊಳಗಿಸಲಾಗುತ್ತಿದೆ. ಇಂತಹ ಘೋಷಣೆಗಳನ್ನು ಬೆಂಬಲಿಸುವುದು ಕೂಡಾ ಭಯೋತ್ಪಾದನೆಯೇಎಂದು ಜಾವಡೇಕರ್ ಹೇಳಿದರು.

ಕೇಜ್ರಿವಾಲ್ ಅವರುಭಾರತ ವಿರೋಧಿ ಘೋಷಣೆಗಳನ್ನು ಕೂಗಿದ ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯದ (ಜೆಎನ್ಯುಜೊತೆಗೆ ನಿಂತಿದ್ದಾರೆ. ಘೋಷಣೆ ಕೂಗಿದವರ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಲಿಲ್ಲಎಂದು ಕೇಂದ್ರ ಸಚಿವರು ಆಪಾದಿಸಿದರು.

ಜನವರಿ ೨೬ರಂದು ನೀವು ಅವರ ವಿರುದ್ಧದ ಕಾನೂನುಕ್ರಮವನ್ನು ಸ್ಥಗಿತಗೊಳಿಸುವುದಾಗಿ ನೀವು ಬೆದರಿಕೆ ಹಾಕಿದಿರಿ. ಇನ್ನೆಷ್ಟು ಸಾಕ್ಷ್ಯಗಳು ನಿಮಗೆ ಬೇಕು? ದೆಹಲಿಯ ಜನರಿಗೆ ಈಗ ನೀವು ಏನು ಎಂಬುದು ಗೊತ್ತಾಗಿದೆ. ನೀವು ಸುಳ್ಳುಗಾರರ ಮುಖ್ಯಸ್ಥ ಎಂಬುದನ್ನು ಅವರು ಅರಿತುಕೊಂಡಿದ್ದಾರೆ, ನೀವೊಬ್ಬ ಅರಾಜಕತಾವಾದಿ ಮತ್ತು ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿರುವ ವ್ಯಕ್ತಿ. ನೀವು ಶಾಹೀನ್ ಬಾಗ್, ಜೆಎನ್ಯು, ಅಲ್ಲಿ ಮಾಡಲಾಗುತ್ತಿರುವ ಘೋಷಣೆಗಳನ್ನು ಮತ್ತು ಇಂತಹ ಎಲ್ಲ ಅರಾಜಕತಾವಾದಿಗಳನ್ನು ಬೆಂಬಲಿಸುತ್ತೀರಿ... ಆದ್ದರಿಂದ ನೀವು ಖಂಡಿತವಾಗಿ ಒಬ್ಬ ಭಯೋತ್ಪಾದಕರಾಗಿದ್ದೀರಿ. ನೀವು ಎಷ್ಟೇ ಮುಗ್ಧ ಮುಖ ತೋರಿಸಿದರೂ, ಇದೇ ನಿಮ್ಮ ವ್ಯಕ್ತಿತ್ವ.’ ಎಂದು ಜಾವಡೇಕರ್ ಚುಚ್ಚಿದರು.

ಒಂದೊಮ್ಮೆ ಕೇಜ್ರಿವಾಲ್ ಜೊತೆಗಿದ್ದ ದೆಹಲಿಯ ಜನರು ಈಗ ಅವರಿಗೆ ವಿರುದ್ಧವಾಗಿದ್ದಾರೆ ಎಂದು ಹೇಳಿದ ಜಾವಡೇಕರ್ ಬಗ್ಗೆ ಹೆಚ್ಚಿನ ವಿವರಣೆ ನೀಡಲಿಲ್ಲ.

ತಮ್ಮ ಬಗೆಗಿನ ಟೀಕೆಗಳ ಬಗ್ಗೆ ಬಳಿಕ ಭಾವುಕರಾಗಿ ಮಾತನಾಡಿದ ಕೇಜ್ರಿವಾಲ್ನನ್ನನ್ನು ಅವರ ಪುತ್ರ, ಸಹೋದರನಾಗಿ ಪರಿಗಣಿಸುತ್ತಾರೆಯೇ ಅಥವಾ ಭುಯೋತ್ಪಾದಕನಾಗಿ ಪರಿಗಣಿಸುತ್ತಾರೆಯೇ ಎಂಬುದನ್ನು ನಿರ್ಧರಿಸುವುದು ದೆಹಲಿಯ ಜನರಿಗೆ ಬಿಟ್ಟ ವಿಷಯಎಂದು ಹೇಳಿದರು.

ನಾನು ಭಯೋತ್ಪಾದಕನಾಗುವುದು ಹೇಗೆ? ನಾನು ಔಷಧಗಳನ್ನು ಒದಗಿಸಿದ್ದೇನೆ.. ಅಗತ್ಯವಿದ್ದವರಿಗೆ ಅಷ್ಟೊಂದು ನೆರವಾಗಿದ್ದೇನೆ. ನಾನು ಎಂದೂ ನನ್ನ ಬಗೆಗಾಗಲೀ, ನನ್ನ ಕುಟುಂಬದ ಬಗೆಗಾಗಲೀ ಯೋಚಿಸಲಿಲ್ಲ. ನಾನು ನನ್ನ ಜೀವವನ್ನೇ ರಾಷ್ಟ್ರಕ್ಕಾಗಿ ಸಮರ್ಪಿಸಲು ಸಿದ್ಧನಿದ್ದೇನೆಎಂದು ಕೇಜ್ರಿವಾಲ್ ಪತ್ರಿಕಾಗೋಷ್ಠಿಯಲ್ಲಿ ನುಡಿದರು.

ಆಮ್ ಆದ್ಮಿ ಪಕ್ಷವು ದೆಹಲಿಯ ನಾಲ್ವರು ಹುತಾತ್ಮ ಅಧಿಕಾರಿಗಳ ಕುಟುಂಬ ಸದಸ್ಯರು ಕೇಜ್ರಿವಾಲ್ ಅವರ ಕೆಲಸವನ್ನು ಶ್ಲಾಘಿಸುವ ವಿಡಿಯೋ ದೃಶ್ಯಾವಳಿಗಳನ್ನು ಕೂಡಾ ಬಳಿಕ ಬಿಡುಗಡೆ ಮಾಡಿತು.
ಫೆಬ್ರುವರಿ ೮ರ ದೆಹಲಿ ವಿಧಾನಸಭಾ ಚುನಾವಣೆಗಳಿಗೆ ಮುನ್ನ ಬಿಜೆಪಿ ನಾಯಕರು ಶಾಹೀನ್ ಬಾಗ್ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಸೇರಿದಂತೆ ಹಲವಾರು ವಿಷಯಗಳನ್ನು ಎತ್ತಿಕೊಂಡು ದೆಹಲಿ ಮುಖ್ಯಮಂತ್ರಿಯ ವಿರುದ್ಧ ಹರಿಹಾಯುತ್ತಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರುಅರಾಜಕತೆ ಮತ್ತು ಕಾನೂನುರಾಹಿತ್ಯ ಸ್ಥಿತಿ ನಿರ್ಮಿಸುವ ದುರುದ್ದೇಶದಿಂದ ಪ್ರದರ್ಶನಗಳನ್ನು ಸಂಘಟಿಸಲಾಗುತ್ತಿದೆಎಂದು ಆಪಾದಿಸಿದರು. ಆಪ್ ಮತ್ತು ಪಾಕಿಸ್ತಾನ ನಿಕಟ ಬಾಂಧವ್ಯ ಹೊಂದಿದ್ದು, ಉಭಯರಿಗೂ ೩೭೦ನೇ ವಿಧಿ ರದ್ದು ಪಡಿಸಿದ ಬಳಿಕ ಅತೀವ ನೋವಾಗಿದೆಎಂದು ಅವರು ಟೀಕಿಸಿದರು.

ಹಲವಾರು ವಿಷಯಗಳನ್ನು ಎತ್ತಿಕೊಂಡು, ಅದರಲ್ಲೂ ವಿಶೇಷವಾಗಿ ಶಾಹೀನ್ ಬಾಗ್ ಪ್ರತಿಭಟನೆಗಳನ್ನು ಎತ್ತಿಕೊಂಡು ಬಿಜೆಪಿಯು ಕೇಜ್ರಿವಾಲ್ ವಿರುದ್ಧ ತೀವ್ರ ದಾಳಿ ನಡೆಸುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪಕ್ಷದ ಹಲವಾರು ನಾಯಕರು ಆಗ್ನೇಯ ದೆಹಲಿ ಕಾಲೋನಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನುರಾಷ್ಟ್ರೀಯ ಹಿತಾಸಕ್ತಿಗಳಿಗೆ ವಿರುದ್ಧಎಂಬುದಾಗಿ ಬಣ್ಣಿಸಿ ಕೇಜ್ರಿವಾಲ್ ಅವರನ್ನು ತೀವ್ರವಾಗಿ ಟೀಕಿಸಿದರು.
ಜಾವಡೇಕರ್ ಟೀಕೆಗೆ ಪ್ರತ್ಯುತ್ತರ ನೀಡಿದ ಆಪ್ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರುಕೇಂದ್ರ ಆಡಳಿತಾರೂಢ ಪಕ್ಷಕ್ಕೆ ನಮ್ಮ ರಾಷ್ಟ್ರದ ರಾಜಧಾನಿಯಲ್ಲಿ ಆಪ್ ಸವಾಲು ಹಾಕಿದ್ದರಿಂದ ಟೀಕೆಗಳು ಬರುತ್ತಿವೆಎಂದು ಹೇಳಿದರು.

ಕೇಂದ್ರ ಸಚಿವರೊಬ್ಬರಿಗೆ ಇಂತಹ ಭಾಷೆಯನ್ನು ಬಳಸಲು ಅನುಮತಿ ಕೊಟ್ಟಿರುವುದು ಹೇಗೆ? ಅರವಿಂದ ಕೇಜ್ರಿವಾಲ್ ಅವರು ಭಯೋತ್ಪಾದಕನಾಗಿದ್ದರೆ, ಅವರನ್ನು ಬಂಧಿಸುವಂತೆ ನಾನು ಬಿಜೆಪಿಗೆ ಸವಾಲು ಹಾಕುತ್ತೇನೆಎಂದು ಸಂಜಯ್ ಸಿಂಗ್ ನುಡಿದರು.

No comments:

Advertisement