Tuesday, February 4, 2020

ಗಾಂಧಿ ಕುರಿತು ಟೀಕೆ: ಅನಂತಕುಮಾರ ಹೆಗಡೆಗೆ ಶೋಕಾಸ್ ನೋಟಿಸ್

ಗಾಂಧಿ ಕುರಿತು ಟೀಕೆ: ಅನಂತಕುಮಾರ ಹೆಗಡೆಗೆ
ಶೋಕಾಸ್ ನೋಟಿಸ್
ಭೇಷರತ್ ಕ್ಷಮೆಯಾಚಿಸಲು ಸೂಚನೆ, ಸಂಸದೀಯ ಮಂಡಳಿ ಸಭೆಗೆ ಕೊಕ್
ನವದೆಹಲಿ: ಮಹಾತ್ಮ ಗಾಂಧೀಜಿ ಬಗೆಗಿನ ತಮ್ಮ ಟೀಕೆಗಳಿಗಾಗಿ ಬೇಷರತ್ ಕ್ಷಮೆ ಯಾಚಿಸುವಂತೆ ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರಿಗೆ ಪಕ್ಷದ ವರಿಷ್ಠರು ಸೂಚಿಸಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದ್ದು, ಹೆಗಡೆ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು 2020 ಫೆಬ್ರುವರಿ 03ರ ಸೋಮವಾರ ದೃಢ ಪಡಿಸಿದರು.

ರಾಷ್ಟ್ರಪಿತನ ಬಗ್ಗೆ ಅನಂತಕುಮಾರ ಹೆಗಡೆ ಅವರು ಮಾಡಿರುವ ಟೀಕೆಗೆಳ ಬಗ್ಗೆ ಭಾರತೀಯ ಜನತಾ ಪಕ್ಷದ ಉನ್ನತ ನಾಯಕತ್ವವು , ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ತೀವ್ರ  ಅಸಮಾಧಾನಗೊಂಡಿದ್ದಾರೆ. ಮತ್ತು ಸಂಸದೀಯ ಮಂಡಳಿ ಸಭೆಗೆ ಹಾಜರಾಗದಂತೆ ಅವರಿಗೆ ವರಿಷ್ಠರು ಸೂಚಿಸಿದ್ದಾರೆ  ಎಂದು ಸುದ್ದಿ ಸಂಸ್ಥೆಯು ಅಪರಿಚಿತ ಮೂಲಗಳನ್ನು ಉಲ್ಲೇಖಿಸಿ ಹೇಳಿತು.

ತಮ್ಮ ವಿವಾದಾತ್ಮಕ ಹೇಳಿಕೆಗಳಿಗಾಗಿ ಪರಿಚಿತರಾಗಿರುವ ಮಾಜಿ ಕೇಂದ್ರ ಸಚಿವರು ಮಹಾತ್ಮ ಗಾಂಧೀಜಿ ನೇತೃತ್ವದ ಸ್ವಾತಂತ್ರ್ಯ ಹೋರಾಟವನ್ನುನಾಟಕಎಂಬುದಾಗಿ ಬಣ್ಣಿಸಿದ್ದರು ಮತ್ತುಇಂತಹ ವ್ಯಕ್ತಿಗಳನ್ನುಭಾರತದಲ್ಲಿಮಹಾತ್ಮಎಂಬುದಾಗಿ ಕರೆಯುತ್ತಿರುವುದು ಹೇಗೆ ಎಂದು ಪ್ರಶ್ನಿಸಿದ್ದರು.

ಉತ್ರರ ಕನ್ನಡದಿಂದ ಆರು ಬಾರಿ ಲೋಕಸಭಾ ಸದಸ್ಯರಾಗಿರುವ ಅನಂತಕುಮಾರ ಹೆಗಡೆ ಅವರು ಬೆಂಗಳೂರಿನಲ್ಲಿ ಶನಿವಾರ ಸಮಾರಂಭ ಒಂದರಲ್ಲಿ ಭಾಷಣ ಮಾಡುತ್ತಾಇಡೀ ಸ್ವಾತಂತ್ರ್ಯ ಚಳವಳಿಯೇ ಬ್ರಿಟಿಷರ ಒಪ್ಪಿಗೆ ಮತ್ತು ಬೆಂಬಲದ ಜೊತೆಗೆ ನಡೆದಿತ್ತುಎಂದು ಹೇಳಿದ್ದರು.

ತಥಾಕಥಿತ ನಾಯಕರಾರನ್ನೂ ಪೊಲೀಸರು ಒಮ್ಮೆ ಕೂಡಾ ಥಳಿಸಿಲ್ಲ. ಅವರ ಸ್ವಾತಂತ್ರ್ಯ ಚಳವಳಿಯು ಒಂದು ದೊಡ್ಡ ನಾಟಕ. ಅದನ್ನು ನಾಯಕರು ಬ್ರಿಟಿಷರ ಒಪ್ಪಿಗೆಯೊಂದಿಗೇ ನಡೆಸಿದ್ದರು. ಅದು ನೈಜ ಹೋರಾಟವಲ್ಲ. ಅದೊಂದು ಹೊಂದಾಣಿಕೆಯ ಸ್ವಾತಂತ್ರ್ಯ ಹೋರಾಟವಾಗಿತ್ತುಎಂದು ಹೆಗಡೆ ಹೇಳಿದುದಾಗಿ ವರದಿಗಳು ತಿಳಿಸಿದ್ದವು.

ಮಹಾತ್ಮ ಗಾಂಧಿಯವರ ಉಪವಾಸ ಮುಷ್ಕರ ಮತ್ತು ಸತ್ಯಾಗ್ರಹ ಕೂಡಾ ಒಂದು ನಾಟಕವಾಗಿತ್ತು ಎಂದೂ ಹಿರಿಯ ಬಿಜೆಪಿ ನಾಯಕ ಹೇಳಿದ್ದರು.

ಭಾರತವು ಆಮರಣ ನಿರಶನ ಮತ್ತು ಸತ್ಯಾಗ್ರಹದ ಕಾರಣ ಸ್ವಾತಂತ್ರ್ಯ ಪಡೆಯಿತು ಎಂದು ಕಾಂಗ್ರೆಸ್ಸನ್ನು ಬೆಂಬಲಿಸುವ ಜನರು ಹೇಳುತ್ತಿರುತ್ತಾರೆ. ಇದು ಸತ್ಯವಲ್ಲ. ಬ್ರಿಟಿಷರು ಭಾರತ ತ್ಯಜಿಸಿದ್ದು ಸತ್ಯಾಗ್ರಹದ ಕಾರಣದಿಂದಲ್ಲಎಂದು ಹೆಗಡೆ ಹೇಳಿದುದಾಗಿ ವರದಿಗಳು ತಿಳಿಸಿದ್ದವು.

ಬ್ರಿಟಿಷರು ಭ್ರಮನಿರಸನಗೊಂಡು ಸ್ವಾತಂತ್ರ್ಯ ನೀಡಿದ್ದರು. ನನಗೆ ಇತಿಹಾಸವನ್ನು ಓದುವಾಗ ರಕ್ತ ಕುದಿಯುತ್ತದೆ. ಇಂತಹ ವ್ಯಕ್ತಿಗಳು ನಮ್ಮ ರಾಷ್ಟ್ರದಲ್ಲಿ ಮಹಾತ್ಮರಾಗುತ್ತಾರೆಎಂದು ಹೆಗಡೆ ಅವರನ್ನು ಉಲ್ಲೇಖಿಸಿದ ವರದಿಗಳು ಹೇಳಿದ್ದವು.

ಅನಂತ ಕುಮಾರ ಹೆಗಡೆ ಅವರನ್ನು ಸೋಮವಾರ ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್, ’ರಾಷ್ಟ್ರಕ್ಕೆ ಬ್ರಿಟಿಷರ ಚಮಚಾಗಳು ಮತ್ತು ಗೂಢಚಾರಿಗಳ ಪಡೆಗಳಿಂದ ಸರ್ಟಿಫಿಕೇಟ್ ಪಡೆಯಬೇಕಾಗಿಲ್ಲಎಂದು ಎದಿರೇಟು ನೀಡಿತ್ತು.

ವಿಶೇಷವಾಗಿ ಮಹಾತ್ಮ ಗಾಂಧೀಜಿಯವರ ಕಲ್ಪನೆಗಳನ್ನು ಮರುಪ್ಯಾಕೇಜ್ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವಾಸಾರ್ಹತೆಯನ್ನು ಪಡೆದುಕೊಂಡಿರುವ ನರೇಂದ್ರ ಮೋದಿಯವರು ಬಿಜೆಪಿಯ ಹಿರಿಯ ನಾಯಕರಾಗಿರುವ ಹೆಗಡೆ ಅವರ ಹೇಳಿಕೆ ಬಗ್ಗೆ ಏನು ಹೇಳುತ್ತಾರೆ ಎಂದು ಕಾದಿದ್ದೇನೆಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಟ್ವೀಟ್ ಮಾಡಿದರು.

ಇನ್ನೊಬ್ಬ ಕಾಂಗ್ರೆಸ್ ವಕ್ತಾರ ಜೈವೀರ್ ಶೆರ್ಗಿಲ್ ಅವರುಬಿಜೆಪಿಯನ್ನುನಾಥೂರಾಂ ಗೋಡ್ಸೆ ಪಾರ್ಟಿಎಂಬುದಾಗಿ ಮರುನಾಮಕರಣ ಮಾಡಲು ಇದು ಸಕಾಲಎಂದು ಟ್ವೀಟ್ ಮಾಡಿದರು.
ಬ್ರಿಟಿಷರ ಚಮಚಾಗಳು ಮತ್ತು ಗೂಢಚಾರಿಗಳ ಕೇಡರಿನಿಂದ ಸರ್ಟಿಫಿಕೇಟ್ ಪಡೆಯುವ ಅಗತ್ಯ ಮಹಾತ್ಮ ಗಾಂಧಿಯವರಿಗಿಲ್ಲಎಂದು ಜೈವೀರ್ ಶೆರ್ಗಿಲ್ ಹೇಳಿದರು.

No comments:

Advertisement