Monday, February 3, 2020

ಸೋನಿಯಾಗಾಂಧಿ ಆಸ್ಪತ್ರೆಗೆ, ಶಿಮ್ಲಾದಿಂದ ದಿಢೀರ್ ವಾಪಸ್

ಸೋನಿಯಾಗಾಂಧಿ ಆಸ್ಪತ್ರೆಗೆ,  ಶಿಮ್ಲಾದಿಂದ ದಿಢೀರ್ ವಾಪಸ್
ನವದೆಹಲಿ: ಶಿಮ್ಲಾ ಭೇಟಿಯಲ್ಲಿದ್ದ ಕಾಂಗೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು  2020 ಫೆಬ್ರುವರಿ 02ರ ಭಾನುವಾರ  ಸಂಜೆ ಡಿಢೀರನೆ ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ರಾಷ್ಟ್ರದ ರಾಜಧಾನಿಗೆ ವಾಪಸಾಗಿ  ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಾದರು.
ಉದರ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಯಿತು.

೭೦ರ ಹರೆಯದ ಸೋನಿಯಾ ಗಾಂಧಿ ಅವರನ್ನು ನಿಗಾದಲ್ಲಿ ಇರಿಸಲಾಗಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಅಧ್ಯಕ್ಷ ಡಿ.ಎಸ್. ರಾಣಾ ತಿಳಿಸಿದ್ದಾರೆ.

ಸೋನಿಯಾ ಗಾಂಧಿ ಅವರನ್ನು ಭಾನುವಾರ ಸಂಜೆ ಗಂಟೆಗೆ  ಆಸ್ಪತ್ರೆಗೆ ಕರೆತರಲಾಯಿತು. ಅವರು ಉದರ ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬಂತು. ನಿಗಾ ಇಡುವ ಸಲುವಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಎಂದು ರಾಣಾ ಅವರು ಹೇಳಿಕೆಯಲ್ಲಿ ತಿಳಿಸಿದರು.

ಮಧ್ಯೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಅವರುತಾಯಿ ಶಿಮ್ಲಾದಲ್ಲಿ ಇದ್ದರು ಮತ್ತು ಹೊಟ್ಟೆ ನೋವಿಗೆ ಒಳಗಾದರು. ನಾವು ಅವರನ್ನು ವಾಪಸ್ ಕರೆಸಿದ್ದೇವೆ. ಚಿಂತಿಸುವಂತಹುದು ಏನೂ ಇಲ್ಲ, ಅವರು ಚೆನ್ನಾಗಿದ್ದಾರೆ. ಎಲ್ಲರ ಅಪೂರ್ವ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳುಎಂದು ಬರೆದರು.

ಮೂಲಗಳ ಪ್ರಕಾರ ಸೋನಿಯಾ ಗಾಂಧಿ ಅವರು ವೈಮಾನಿಕ ಆಂಬುಲೆನ್ಸ್ ಮೂಲಕ ಶಿಮ್ಲಾದಿಂದ ದೆಹಲಿಗೆ ಧಾವಿಸಿದರು ಎಂದು ಹೇಳಲಾಗಿದೆ. ಶಿಮ್ಲಾದಲ್ಲಿ ಅವರು ರಜಾಕಾಲದ ವಿಶ್ರಾಂತಿಗಾಗಿ ತೆರಳಿದ್ದರು ಎನ್ನಲಾಯಿತು.
ಆಸ್ಪತ್ರೆಯ ವೈದ್ಯರ ತಂಡವೊಂದನ್ನು ಸೋನಿಯಾ ಅವರನ್ನು ಶಿಮ್ಲಾದಿಂದ ಕರೆತರುವ ಸಲುವಾಗಿ ನಿಯೋಜಿಸಲಾಗಿತ್ತು. ಅವರ ದೇಹಸ್ಥಿತಿ ಸ್ಥಿರವಾಗಿದೆ ಎಂದು ಪಕ್ಷ ಮೂಲಗಳು ಹೇಳಿದವು.

No comments:

Advertisement