ಮಧ್ಯಪ್ರದೇಶ:
ಬಿಕ್ಕಟ್ಟು ತೀವ್ರ, ಕಮಲನಾಥ್ ಸರ್ಕಾರ ಗಡಗಡ
ಜ್ಯೋತಿರಾದಿತ್ಯ
ಸಿಂಧಿಯಾ ಬೆಂಬಲಿಗ ೧೮ ಶಾಸಕರು ಬೆಂಗಳೂರಿಗೆ
ನವದೆಹಲಿ:
ಕಣ್ಮರೆಯಾಗಿದ್ದು ಎಂಟು ಶಾಸಕರು ರಾಜ್ಯಕ್ಕೆ ವಾಪಸಾಗುತ್ತಿದ್ದಂತೆಯೇ ಅಸಮಾಧಾನದಿಂದ ಕುದಿಯುತ್ತಿರುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಬೆಂಬಲಿಗರು ಎನ್ನಲಾಗಿರುವ ೧೮ ಮಂದಿ ಕಾಂಗ್ರೆಸ್
ಶಾಸಕರು 2020 ಮಾರ್ಚ್ 09ರ ಸೋಮವಾರ ನಾಟಕೀಯವಾಗಿ
ವಿಮಾನವೊಂದರಲ್ಲಿ ಬಿಜೆಪಿ ಆಡಳಿತವಿರುವ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಹಾರಿದ್ದು, ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ನೇತೃತ್ವದ ಸರ್ಕಾರ ತೀವ್ರ ಬಿಕ್ಕಟ್ಟಿಗೆ ಸಿಲುಕಿತು.
೧೮ ಮಂದಿ ಶಾಸಕರ ಪೈಕಿ ೬ ಮಂದಿ ಸಚಿವರೂ ಇದ್ದಾರೆ ಎಂದು ವರದಿಗಳು ಹೇಳಿದವು.
೧೮ ಮಂದಿ ಶಾಸಕರ ಪೈಕಿ ೬ ಮಂದಿ ಸಚಿವರೂ ಇದ್ದಾರೆ ಎಂದು ವರದಿಗಳು ಹೇಳಿದವು.
ಪಕ್ಷ
ಬದಲಿಸಲು ಸಿದ್ಧರಾಗಿರುವ ಬಂಡಾಯ ಕಾಂಗೆಸ್ ಶಾಸಕರ ಪಯಣಕ್ಕೆ ಬೆಂಗಳೂರು ಗುರಿ ಎನ್ನಲಾಗಿದ್ದು, ಹೊಸ ಬೆಳವಣಿಗೆಯು ೧೫ ತಿಂಗಳ ಕಮಲನಾಥ್
ಸರ್ಕಾರವನ್ನು ಪತನದ ಅಂಚಿಗೆ ತಳ್ಳಿತು.
ಒಂದು
ಕಾಲದಲ್ಲಿ ಗಾಂಧಿ ಕುಟುಂಬಕ್ಕೆ ಅತ್ಯಂಕ ನಿಕಟವಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಪ್ರಸ್ತುತ ದೆಹಲಿಯಲ್ಲಿದ್ದು, ಕಾಂಗ್ರೆಸ್ ಸಂಧಾನಕ್ಕಾಗಿ ಯತ್ನಿಸುತ್ತಿದೆ, ಆದರೆ ತತ್ ಕ್ಷಣಕ್ಕೆ ಇತ್ಯರ್ಥ ಅಸಂಭವ ಎನ್ನಲಾಯಿತು.
೪೯ರ
ಹರೆಯದ ಸಿಂಧಿಯಾ ಅವರು ೨೦೧೮ರಲ್ಲಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ವಿಜಯಕ್ಕೆ ಮಹತ್ವದ ಕೊಡುಗೆ ನೀಡಿದ್ದರೂ ಕೇವಲ
೨೩ ಶಾಸಕರ ಬೆಂಬಲ ಲಭಿಸಿದ ಪರಿಣಾಮವಾಗಿ ಪೈಪೋಟಿಯಲ್ಲಿ ಸೋತು ಮುಖ್ಯಮಂತ್ರಿ ಸ್ಥಾನದಿಂದ ವಂಚಿತರಾಗಿದ್ದರು. ಕಮಲನಾಥ್ ಅವರು ಮುಖ್ಯಮಂತ್ರಿಯಾದುದಲ್ಲದೆ ರಾಜ್ಯ ಕಾಂಗ್ರೆಸ್ ಘಟಕದ ಮೇಲೆ ನಿಯಂತ್ರಣವನ್ನೂ ಸಾಧಿಸಿದ್ದರು.
ಕಳೆದ
ವರ್ಷ ಲೋಕಸಭಾ ಚುನಾವಣೆಯ ವೇಳೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಜೊತೆಗೆ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನೂ ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿ ಉತ್ತರ ಪ್ರದೇಶದ ಹೊಣೆ ವಹಿಸುವ ಮೂಲಕ ಅಲ್ಪ ಅವಧಿಗೆ ಸಮಾಧಾನ ಪಡಿಸಲಾಗಿತ್ತು. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿತ್ತು.
ಕುದುರೆ
ವ್ಯಾಪಾರದ ಆರೋಪಗಳ ಮಧ್ಯೆ, ಕಣ್ಮರೆಯಾಗಿದ್ದ ಎಂಟು ಮಂದಿ ಶಾಸಕರು ರಾಜ್ಯಕ್ಕೆ ವಾಪಸಾಗುತ್ತಿದ್ದಂತೆಯೇ ಹಿರಿಯ
ನಾಯಕ ಸಿಂಧಿಯಾ ಅವರಿಗೆ ನಿಕಟವಾಗಿದ್ದಾರೆ ಎಂಬುದಾಗಿ ನಂಬಲಾಗಿರುವ ಶಾಸಕರು ನಿಗೂಢವಾಗಿ ರಾಜ್ಯದಿಂದ ಕಣ್ಮರೆಯಾಗುವುದರೊಂದಿಗೆ ಕಮಲನಾಥ್ ಅವರಿಗೆ ಹೊಸ ತಲೆನೋವು ಉಂಟಾಗಿದೆ.
ಸಚಿವರೂ
ಸೇರಿದಂತೆ ೧೮ ಮಂದಿ ಕಾಂಗ್ರೆಸ್
ಶಾಸಕರೂ ಪ್ರಸ್ತುತ ಬೆಂಗಳೂರಿನಲ್ಲಿ ಇದ್ದು ಅವರು ಫೋನ್ಗಳು ಸ್ವಿಚ್ಡ್ ಆಫ್ ಆಗಿವೆ ಎಂದು ಮೂಲಗಳು ಹೇಳಿವೆ.
ಕಮಲನಾಥ್
ಮತ್ತು ಸಿಂಧಿಯಾ ಅವರ ಗುದ್ದಾಟ ರಾಜ್ಯದಲ್ಲಿ ರಹಸ್ಯವೇನೂ ಆಗಿರಲಿಲ್ಲ. ಕಳೆದ ತಿಂಗಳು ಉಭಯರೂ ಬಹಿರಂಗವಾಗಿಯೇ ಪರಸ್ಪರ ಕಿತ್ತಾಡಿಕೊಂಡಿದ್ದರು. ರಾಜ್ಯದಲ್ಲಿ ಪಕ್ಷದ ಸರ್ಕಾರವು ಪ್ರತಿಭಟನಾನಿರತ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಲು ವಿಫಲವಾದಲ್ಲಿ ತಾವು ಬೀದಿಗಳಿಗೆ ಇಳಿಯುವುದಾಗಿ ಸಿಂಧಿಯಾ ಬೆದರಿಕೆ ಹಾಕಿದ್ದರು. ’ಸಿಂಧಿಯಾ ಅವರು ಹಾಗೆ ಮಾಡಲಿ’ ಎಂದು ಕಮಲನಾಥ್ ಎದಿರೇಟು ನೀಡಿದ್ದರು.
ಸಂಪುಟ
ವಿಸ್ತರಣೆ ಮತ್ತು ಮುಂಬರುವ ರಾಜ್ಯಸಭಾ ಚುನಾವಣೆಗಳ ಬಗ್ಗೆ ಚರ್ಚಿಸುವ ಸಲುವಾಗಿ ಕಮಲನಾಥ್ ಅವರು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಜೊತೆ ಮಾತನಾಡುವ ಸಲುವಾಗಿ ದೆಹಲಿಗೆ ಆಗಮಿಸಿದ ದಿನವೇ ಪಕ್ಷದಲ್ಲಿ ಈ ಬೆಳವಣಿಗೆ ಆಗಿದೆ.
ಸಂಪುಟ
ವಿಸ್ತರಣೆಯಲ್ಲಿ ತಮಗೆ ಸ್ಥಾನ ನೀಡಬೇಕು ಎಂದು ಲಾಬಿ ಮಾಡುತ್ತಿದ್ದ ಬಿಷ್ಣುಲಾಲ್ ಸಿಂಗ್ ಸೇರಿದಂತೆ ೮ ಮಂದಿ ಶಾಸಕರು
ಆರು ದಿನಗಳ ’ಕಣ್ಮರೆ’ ಬಳಿಕ ಬೆಂಗಳೂರಿನಿಂದ ವಾಪಸಾಗಿದ್ದರು. ಸಂಪರ್ಕವನ್ನೇ ಕಡಿದುಕೊಂಡಿದ್ದ ೧೦ ಶಾಸಕರ ಪೈಕಿ
ರಘುರಾಜ್ ಸಿಂಗ್ ಕಂಸಾನ ಮತ್ತು ಹರದೀಪ್ ಸಿಂಗ್ ಡಾಂಗ್ ಅವರು ಇನ್ನೂ ಪತ್ತೆಯಾಗಿಲ್ಲ.
ಆಡಳಿತಾರೂಢ
ಪಕ್ಷದಲ್ಲಿ ಬಿರುಕು ಉಂಟು ಮಾಡಿ ಕಮಲನಾಥ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆಪಾದಿಸಿದೆ. ಆದರೆ ಕೇಸರಿ ಪಕ್ಷವು ಈ ಆಪಾದನೆಯನ್ನು ತಳ್ಳಿಹಾಕಿದೆ.
೨೩೦
ಸದಸ್ಯಬಲದ ವಿಧಾನಸಭೆಯಲ್ಲಿ ೧೧೪ ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಒಬ್ಬ ಪಕ್ಷೇತರ ಶಾಸಕನ ಬೆಂಬಲದೊಂದಿಗೆ ಅತ್ಯಲ್ಪ ಬಹುಮತವನ್ನು ಹೊಂದಿದೆ. ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ ೧೧೫ ಸದಸ್ಯರ ಬೆಂಬಲ ಬೇಕು. ಬಿಜೆಪಿಯು ೧೦೭ ಸದಸ್ಯರನ್ನು ಹೊಂದಿದೆ.
No comments:
Post a Comment