Sunday, March 29, 2020

ಕೋವಿಡ್ -೧೯ಕ್ಕೆ ಸ್ಪೇನ್ ರಾಜಕುಮಾರಿ ಬಲಿ

ಕೋವಿಡ್ -೧೯ಕ್ಕೆ ಸ್ಪೇನ್ ರಾಜಕುಮಾರಿ ಬಲಿ
ಮ್ಯಾಡ್ರಿಡ್ (ಸ್ಪೇನ್): ಜಾಗತಿಕ ಪಿಡುಗು ಎಂಬುದಾಗಿ ಪರಿಗಣಿಸಲಾಗಿರುವ ಮಾರಕ ಕೊರೊನಾ ವೈರಸ್ ಸೋಂಕು ಸ್ಪೇನ್ ದೇಶದ ರಾಜಕುಮಾರಿಯನ್ನು ಬಲಿ ತೆಗೆದುಕೊಂಡಿದೆ.

೮೬ ವರ್ಷದ ರಾಜಕುಮಾರಿ ಮಾರಿಯಾ ತೆರೇಸಾ ಅವರಲ್ಲಿ ಕೋವಿಡ್-೧೯ ಪತ್ತೆಯಾಗಿದ್ದು, ಚಿಕಿತ್ಸೆ ಫಲಕಾರಿಯಾಗಿದೇ ಸಾವನ್ನಪ್ಪಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು 2020 ಮಾರ್ಚ್ 29ರ ಭಾನುವಾರ ವರದಿ ಮಾಡಿವೆ.

ಮಾರಿಯಾ ತೆರೇಸಾ ಅವರು ಸ್ಪೇನ್ ರಾಜಕುಮಾರ ಫೆಲಿಪೆ - ಅವರ ಸೋದರ ಸಂಬಂಧಿಯಾಗಿದ್ದಾರೆ.

ತೆರೇಸಾ ನಿಧನರಾದ ವಿಚಾರವನ್ನು ಅವರ ಸೋದರ ಪ್ರಿನ್ಸ್ ಸಿಕ್ಸ್ಟೊ ಎನ್ರಿಕ್ ಡಿ ಬೊರ್ಬನ್ ತಮ್ಮ ಫೇಸ್ ಬುಕ್  ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಮ್ಮ ಸಹೋದರಿ ಮಾರಿಯಾ ತೆರೇಸಾ ಡಿ ಬೊರ್ಬನ್ ಅವರು ಕೋವಿಡ್-೧೯ನಿಂದ ಮೃತರಾಗಿದ್ದಾರೆ ಎಂದು ಪ್ರಿನ್ಸ್ ಸಿಕ್ಸ್ಟೊ ತಿಳಿಸಿದ್ದಾರೆ.

ರಾಜಕುಮಾರಿಯ ಅಂತ್ಯಕ್ರಿಯೆಯನ್ನು ಶುಕ್ರವಾರ ಮ್ಯಾಡ್ರಿಡ್ನಲಿ ನಡೆಸಲಾಗಿದೆ.

೧೯೩೩ರಲ್ಲಿ ಜನಿಸಿದ್ದ ಮಾರಿಯಾ ತೆರೇಸಾ ಅವರು ಪ್ಯಾರಿಸ್ಸಿನಲ್ಲಿ ಅಧ್ಯಾಪಕ ವೃತ್ತಿಯಲ್ಲಿ ತೊಡಗಿಕೊಂಡಿದ್ದರು. ಹಲವು ಚಳುವಳಿಗಳಲ್ಲಿ ಸಕ್ರಿಯರಾಗಿದ್ದ ಅವರನ್ನು ರೆಡ್ ಪ್ರಿನ್ಸ್ ಎಂದೇ ಜನರು ಕರೆಯುತ್ತಿದ್ದರು.

No comments:

Advertisement