Sunday, March 8, 2020

ರಾಣಾಕಪೂರ್‌ಗೆ ಡಬಲ್ ಟ್ರಬಲ್; ಇಡಿ ಬಳಿಕ ಸಿಬಿಐ ಕೇಸ್

ರಾಣಾಕಪೂರ್ಗೆ ಡಬಲ್ ಟ್ರಬಲ್; ಇಡಿ ಬಳಿಕ ಸಿಬಿಐ ಕೇಸ್
ನವದೆಹಲಿ: ಯೆಸ್ ಬ್ಯಾಂಕ್ ಮತ್ತು  ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ( ಡಿಎಚ್ಎಫ್ಎಲ್) ರಿಯಾಲಿಟಿ ಕಂಪೆನಿಗಳ ಹಣ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ನಿವಾಸದ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯವು ಹಣವರ್ಗಾವಣೆ ಕಾಯ್ದೆ ಅಡಿಯಲ್ಲಿ ಅವರನ್ನು ಬಂಧಿಸಿದ ಬೆನ್ನಲ್ಲೇ ಕೇಂದ್ರೀಯ ತನಿಖಾ ದಳ (ಸಿಬಿಐ) ಕೂಡಾ  2020 ಮಾರ್ಚ್  08ರ ಭಾನುವಾರ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದು ಕಪೂರ್ ಅವರಿಗೆಡಬಲ್ ಟ್ರಬಲ್ಎದುರಾಯಿತು.
ಪ್ರಕರಣದ ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರದ ಅಂಶಗಳ ಮೇಲೆ ಸಿಬಿಐ ಗಮನ ಕೇಂದ್ರೀಕರಿಸುವ ಸಾಧ್ಯತೆಯಿದೆ.

ಆರ್ಥಿಕ ಬಿಕ್ಕಟ್ಟನ್ನು ಎದುರಿಸುತಿರುವ  ಯೆಸ್ ಬ್ಯಾಂಕನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿರುವ ಆರ್ಬಿಐ ಅದರ ವ್ಯವಹಾರಗಳನ್ನು ನಡೆಸಲು ನಿರ್ವಾಹಕರನ್ನು ನೇಮಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಂತಹ ಸಂಭಾವ್ಯ ಹೂಡಿಕೆದಾರರಿಂದ ಹೊಸ ಬಂಡವಾಳ ಸಂಗ್ರಹದ ಕಾರಣ ಬ್ಯಾಂಕಿನ ವಹಿವಾಟುಗಳ ಮೇಲೆ  ೩೦ ದಿನಗಳ ಕಾಲ ನಿರ್ಬಂಧಗಳನ್ನು ವಿಧಿಸಲಾಗಿದೆ.


No comments:

Advertisement