ವಿಡಿಯೋ ಕಾನ್ಫರೆನ್ಸ್: ಸಾರ್ಕ್ ರಾಷ್ಟ್ರಗಳಿಗೆ ಪ್ರಧಾನಿ ಮೋದಿ
ಸಂದೇಶ
’ಕೊರೋನಾವೈರಸ್ ಎದುರಿಸಲು ಸಿದ್ಧರಾಗಿರಿ ಆದರೆ
ಭಯ ಬೇಡ’
ನವದೆಹಲಿ: ಮಾರಣಾಂತಿಕ ಕೋವಿಡ್ -೧೯ (ಕೊರೋನಾವೈರಸ್) ವಿರುದ್ಧ ಹೋರಾಡಲು ಸರ್ವ
ಸನ್ನದ್ಧರಾಗಿರಿ.
ಆದರೆ ಭಯಪಡಬೇಡಿ’ ಎಂದು
ಪ್ರಧಾನಿ ನರೇಂದ್ರ ಮೋದಿ
ಅವರು ದಕ್ಷಿಣ ಏಷ್ಯಾ
ಪ್ರಾದೇಶಿಕ
ಸಹಕಾರ ಸಂಘದ (ಸಾರ್ಕ್) ರಾಷ್ಟ್ರಗಳಿಗೆ 2020 ಮಾರ್ಚ್ 15ರ ಭಾನುವಾರ ಸಂದೇಶ
ನೀಡಿದರು.
ಸಾರ್ಕ್ ಸದಸ್ಯ
ರಾಷ್ಟ್ರಗಳ
ನಾಯಕರ ಜೊತೆಗೆ ಕೊರೋನಾವೈರಸ್ ಹಾವಳಿಯ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಿದ ಪ್ರಧಾನಿ ’ವಿಶ್ವ ಜನಸಂಖ್ಯೆಯ ಐದನೇ
ಒಂದು ಭಾಗವನ್ನು ಹೊಂದಿರುವ ಈ
ಪ್ರದೇಶವು ಕೊರೋನಾವೈರಸ್ ಹಾವಳಿ
ಎದುರಿಸಲು ಆಪತ್ಕಾಲೀನ ಯೋಜನೆಯೊಂದಿಗೆ ಸಿದ್ಧವಾಗಬೇಕಿದೆ’ ಎಂದು
ಹೇಳಿದರು.
"ಇಲ್ಲಿಯವರೆಗೆ ನಮ್ಮ
ಸಾರ್ಕ್ ಪ್ರದೇಶವು ೧೫೦
ಕ್ಕಿಂತಲೂ ಕಡಿಮೆ ಪ್ರಕರಣಗಳನ್ನು ದಾಖಲಿಸಿದೆ ಆದರೆ
ನಮ್ಮ ಸಾರ್ಕ್ ಪ್ರದೇಶವು ಒಟ್ಟು
ವಿಶ್ವ ಜನಸಂಖ್ಯೆಯ ಐದನೇ
ಒಂದು ಭಾಗzಷ್ಟನ್ನು ವ್ಯಾಪಿಸಿರುವುದರಿಂದ ನಾವು
ಜಾಗರೂಕರಾಗಿರಬೇಕು"
ಎಂದು ಆರಂಭಿಕ ಭಾಷಣ
ಮಾಡುತ್ತಾ ಪ್ರಧಾನಿ ಹೇಳಿದರು.
ಈ
ಪ್ರದೇಶದಲ್ಲಿ
ಆರೋಗ್ಯ ಸೌಲಭ್ಯಗಳಿಗೆ ಗಮನಾರ್ಹ ಸವಾಲುಗಳಿವೆ. ಆದ್ದರಿಂದ, "ನಾವೆಲ್ಲರೂ ಒಟ್ಟಾಗಿ ತಯಾರಿ
ಮಾಡಬೇಕು, ನಾವೆಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕು ಮತ್ತು
ನಾವೆಲ್ಲರೂ
ಒಟ್ಟಾಗಿ ಯಶಸ್ವಿಯಾಗಬೇಕು" ಎಂದು ಮೋದಿ
ಹೇಳಿದರು.
’ಕೊರೋನವೈರಸ್ sಸೋಂಕನ್ನು ಎದುರಿಸಲು ಭಾರತವು ತನ್ನ
ವೈದ್ಯಕೀಯ ಮೂಲಸೌಕರ್ಯವನ್ನು ನವೀಕರಿಸಲು ತ್ವರಿತ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು
ಯಾವುದೇ ಭೀತಿ ಇಲ್ಲ
ಎಂದು ಖಚಿತಪಡಿಸುತ್ತದೆ’ ಎಂದು
ಪ್ರಧಾನಿ ಹೇಳಿದರು.
’ತಯಾರಾಗಿ, ಆದರೆ ಭಯಪಡಬೇಡಿ, ಇದು ನಮ್ಮ
ಮಾರ್ಗದರ್ಶಿ
ಮಂತ್ರವಾಗಿದೆ.
ನಾವು ಸಮಸ್ಯೆಯನ್ನು ಕಡಿಮೆ
ಅಂದಾಜು ಮಾಡದಂತೆ ಎಚ್ಚರಿಕೆ ವಹಿಸಿದ್ದೇವೆ, ನವೀಕರಿಸಿದ ಪ್ರತಿಕ್ರಿಯೆ ಕಾರ್ಯವಿಧಾನಗಳು ಸೇರಿದಂತೆ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿದ್ದೇವೆ. ನಾವು ಜನವರಿ
ಮಧ್ಯದಲ್ಲಿಯೇ
ವೈದ್ಯಕೀಯ ತಪಾಸಣೆಗಳನ್ನು
ಪ್ರಾರಂಭಿಸಿದ್ದೇವೆ.
ಹಂತ ಹಂತದ ಸಿದ್ಧತೆಯ ವಿಧಾನವು ಭೀತಿ
ನಿವಾರಣೆಗೆ
ಸಹಾಯ ಮಾಡಿದೆ’ ಎಂದು
ಪ್ರಧಾನಿ ಹೇಳಿದರು.
ದುರ್ಬಲ ಗುಂಪುಗಳನ್ನು ತಲುಪಲು ಭಾರತವು ವಿಶೇಷ
ಪ್ರಯತ್ನಗಳನ್ನು
ಮಾಡಿದೆ ಎಂದು ಪ್ರಧಾನಿ ಹೇಳಿದರು.
’ನಮ್ಮ ವೈದ್ಯಕೀಯ ಸಿಬ್ಬಂದಿಯ ತರಬೇತಿ ಸೇರಿದಂತೆ ನಮ್ಮ
ವ್ಯವಸ್ಥೆಗಳನ್ನು
ತ್ವರಿತವಾಗಿ
ಬಲಪಡಿಸಲು ನಾವು ಕೆಲಸ
ಮಾಡಿದ್ದೇವೆ"
ಎಂದು ಅವರು ಹೇಳಿದರು.
ಕೊರೋನಾವೈರಸ್ ಹಾವಳಿ
ಎದುರಿಸಲು ಸಾರ್ಕ್ ಪ್ರದೇಶದಲ್ಲಿ ಜಂಟಿ
ಕಾರ್ಯತಂತ್ರ
ರೂಪಿಸಲು ವಿಡಿಯೋ ಕಾನ್ಫರೆನ್ಸ್ ನಡೆಸುವಂತೆ ಪ್ರಧಾನಿ ಮೋದಿ
ಗುರುವಾರ ಸಲಹೆ ಮಾಡಿದ್ದರು. ನೇಪಾಳಿ ಪ್ರಧಾನಿ ಕೆ.ಪಿ.ಶರ್ಮಾ
ಒಲಿ, ಭೂತಾನ್ ಪ್ರಧಾನಿ ಲೋಟೇ
ತ್ಸೆರಿಂಗ್,
ಶ್ರೀಲಂಕಾದ
ಅಧ್ಯಕ್ಷ ಗೋಟಬಯಾ ರಾಜಪಕ್ಸೆ, ಬಾಂಗ್ಲಾದೇಶದ ಪ್ರಧಾನಿ ಶೇಖ್
ಹಸೀನಾ, ಮಾಲ್ಡೀವಿಯನ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಈ
ನಾಯಕರು ಮತ್ತು ಅಫಘಾನ್ ಸರ್ಕಾರದಿಂದ ಈ
ಪ್ರಸ್ತಾಪಕ್ಕೆ
ಸ್ವಾಗತ ವ್ಯಕ್ತವಾಗಿತ್ತು.
No comments:
Post a Comment