ಕೊರೋನಾವೈರಸ್
ಬದುಕು:
ಗಾಳಿಯಲ್ಲಿ ತಾಸುಗಟ್ಟಲೆ,
ಮೇಲ್ಮೈಗಳಲ್ಲಿ ಹಲವು ದಿನ..!
ನವದೆಹಲಿ:
ನೂತನ ಕೊರೋನಾವೈರಸ್ ಸೋಂಕು ಗಾಳಿಯಲ್ಲಿ ಗಂಟೆಗಳವರೆಗೆ ಮತ್ತು ಮೇಲ್ಮೈಗಳಲ್ಲಿ ದಿನಗಳವರೆಗೆ ಉಳಿಯಬಲ್ಲುದು ಎಂಬುದು ಮಹತ್ವದ ಅಧ್ಯಯನ ಒಂದರಿಂದ 2020 ಮಾರ್ಚ್
18ರ ಬುಧವಾರ ಬೆಳಕಿಗೆ
ಬಂದಿತು.
ವಿಶ್ವಾದ್ಯಂತ
ಸುಮಾರು ೮,೦೦೦ ಜನರನ್ನು
ಬಲಿಪಡೆದುಕೊಂಡು, ೨೦೦,೦೦೦ ಜನರಿಗೆ ಸೋಂಕು ತಗುಲಿರುವ ಕೊರೋನಾವೈರಸ್ ಹಲವಾರು ಗಂಟೆಗಳ ಕಾಲ ಗಾಳಿಯಲ್ಲಿ ಮತ್ತು ಹಲವಾರು ದಿನಗಳ ಕಾಲ ಮೇಲ್ಮೈಗಳಲ್ಲಿ ಉಳಿದುಕೊಂಡು ಸಾಂಕ್ರಾಮಿಕವಾಗಿ ಹರಡಬಲ್ಲುದು ಎಂದು ಸೋಂಕಿತ ಹನಿಗಳ ಮೂಲಕ ಮತ್ತು ಕಲುಷಿತ ಮೇಲ್ಮೈಗಳ ಸಂಪರ್ಕದಿಂದ ರೋಗಕಾರಕವು ಹೇಗೆ ವೇಗವಾಗಿ ಹರಡುತ್ತದೆ ಎಂಬುದನ್ನು ವಿವರಿಸುವ ಒಂದು ಅಧ್ಯಯನ ಹೇಳಿತು.
ಕೋವಿಡ್
-೧೯ ಕಾಯಿಲೆಗೆ ಕಾರಣವಾಗುವ ಸಾರ್ಸ್-ಕೋವಿ -೨ ವೈರಸ್, ವಾಯುದ್ರವಗಳಲ್ಲಿ
(ಏರೋಸಾಲ್) ಮೂರು ಗಂಟೆಗಳವರೆಗೆ, ತಾಮ್ರದ ಮೇಲ್ಮೈಯಲ್ಲಿ ನಾಲ್ಕು ಗಂಟೆಗಳವರೆಗೆ, ಹಲಗೆಯಲ್ಲಿ ೨೪ ಗಂಟೆಗಳವರೆಗೆ ಮತ್ತು
ಪ್ಲಾಸ್ಟಿಕ್ ಮತ್ತು ಸ್ಟೇನ್ಲೆಸ್ ಸ್ಟೀಲ್ ಮೇಲ್ಮೈಯಲ್ಲಿ ಎರಡು-ಮೂರು ದಿನಗಳವರೆಗೆ ಉಳಿಯುತ್ತದೆ ಎಂದು ’ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ (ಎನ್ಇಜೆಎಂ)’ ನಲ್ಲಿ ಪ್ರಕಟವಾದ ಅಧ್ಯಯನ ತಿಳಿಸಿತು.
ಅಧ್ಯಯನವು
ಪರಿಸರದಲ್ಲಿನ ಸಾರ್ಸ್-ಕೋವ್ -೨ ನ ಸ್ಥಿರತೆಯನ್ನು
೨೦೦೨-೨೦೦೩ರಲ್ಲಿ ಏಕಾಏಕಿಯಾಗಿ ವ್ಯಾಪಿಸಿ ೮೦೦೦ ಮಂದಿಯನ್ನು ಬಾಧಿಸಿದ್ದ ತೀವ್ರ ಉಸಿರಾಟದ ತೊಂದgಯ ’ಸಾರ್ಸ್’ಗೆ ಕಾರಣವಾದ ಸಾರ್ಸ್-ಕೋವ್ನೊಂದಿಗೆ ಹೋಲಿಕೆ ಮಾಡಿತು.
ಈ
ಎರಡೂ ವೈರಸ್ಗಳು ನಿಕಟ ಸಂಬಂಧ ಹೊಂದಿವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಏನಿದ್ದರೂ, ೨೦೦೪ ರಿಂದ ಯಾವುದೇ ಸಾರ್ಸ್ ಪ್ರಕರಣ ಪತ್ತೆಯಾಗಿಲ್ಲ.
ಪರಿಸರದಲ್ಲಿ
ವೈರಸ್ನ ಸ್ಥಿರತೆ
ಅಥವಾ ವಾಸದ ಅವಧಿಯು, ಸಾರ್ಸ್-ಕೋವಿ -೨ ಮತ್ತು ಪರೀಕ್ಷಿದ
ಸಂದರ್ಭಗಳಲ್ಲಿ ಸಾರ್ಸ್-ಕೋವಿಗೆ ಹೋಲುತ್ತದೆ ಎಂದು ಅಧ್ಯಯನದಿಂದ ಪತ್ತೆಯಾಯಿತು.
ಆದರೆ
ಸಾರ್ಸ್ಗೆ ವ್ಯತಿರಿಕ್ತವಾಗಿ, ಕೊರೋನಾವೈರಸ್ ತೀವ್ರವಾದ
ಸಾಮುದಾಯಿಕ ವರ್ಗಾವಣೆ ಪರಿಣಾಮವಾಗಿ ಹಲವಾರು ರಾಷ್ಟ್ರಗಳಲ್ಲಿ ಸಾಂಕ್ರಾಮಿಕ ಪಿಡುಗು ಆಗಿ ಪರಿವರ್ತನೆಗೊಂಡಿದೆ.
No comments:
Post a Comment