Wednesday, March 11, 2020

ಬಿಜೆಪಿಗೆ ಸಿಂಧಿಯಾ ಪದಾರ್ಪಣ, ಮಧ್ಯಪ್ರದೇಶದಿಂದ ರಾಜ್ಯಸಭಾ ಅಭ್ಯರ್ಥಿಯಾಗಿ ಘೋಷಣೆ

ಬಿಜೆಪಿಗೆ ಸಿಂಧಿಯಾ ಪದಾರ್ಪಣ,  ಮಧ್ಯಪ್ರದೇಶದಿಂದ ರಾಜ್ಯಸಭಾ ಅಭ್ಯರ್ಥಿಯಾಗಿ ಘೋಷಣೆ
ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ  2020 ಮಾರ್ಚ್ 10ರ ಮಂಗಳವಾರ ರಾಜೀನಾಮೆ ನೀಡಿ ಪಕ್ಷಕ್ಕೆ iಘಾತ ನೀಡಿದಭರವಸೆಯ ನಾಯಕಜ್ಯೋತಿರಾದಿತ್ಯ ಸಿಂಧಿಯಾ ಅವರು  2020 ಮಾರ್ಚ್ 11ರ ಬುಧವಾರ ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.. ಪಕ್ಷ ಸೇರಿದ ಬೆನ್ನಲ್ಲೇ ಅವರನ್ನು ಮಧ್ಯಪ್ರದೇಶದಿಂದ ರಾಜ್ಯಸಭಾ ಅಭ್ಯರ್ಥಿಯಾಗಿ ಹೆಸರಿಸಲಾಯಿತು.
ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ಸಿಂಧಿಯಾ ಅವರು ಬುಧವಾರ ಮಧ್ಯಾಹ್ನ  ಕೇಸರಿ ಪಕ್ಷವನ್ನು ಸೇರಿದರು.

ತನಗೆ ಬಿಜೆಪಿ ಕುಟುಂಬಕ್ಕೆ ಸೇರಲು ಅವಕಾಶ ನೀಡಿದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಜ್ಯೋತಿರಾದಿತ್ಯ ಸಿಂಧಿಯಾ ಸಂದರ್ಭದಲ್ಲಿ ಧನ್ಯವಾದ ಹೇಳಿದರು.

ನಂತರ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್ ಪಕ್ಷ ಈಗ ಬದಲಾಗಿದೆ. ಅದು ವಾಸ್ತವಕತೆಗೆ ದೂರವಾಗಿದೆ. ಕಾಂಗ್ರೆಸ್ಸಿನಲ್ಲಿ ಇದ್ದುಕೊಂಡು ಸಮಸ್ಯೆಗಳನ್ನು ಬಗೆಹರಿಸಲು ಸಾಧ್ವವಿಲ್ಲ ಎಂದು ಸಿಂಧಿಯಾ ನುಡಿದರು.

ಭಾರತೀಯ ಜನತಾ ಪಕ್ಷವು ಸಂಜೆ  2020 ಮಾರ್ಚ್ ೨೬ಕ್ಕೆ ನಿಗದಿಯಾಗಿರುವ ೧೭ ರಾಜ್ಯಗಳ ೫೫ ರಾಜ್ಯಸಭಾ ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿತು.

ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಮಧ್ಯಪ್ರದೇಶದಿಂದ ಪಕ್ಷದ ಒಬ್ಬ ಅಭ್ಯಥಿಯಾಗಿ ಬಿಜೆಪಿ ಪ್ರಕಟಿಸಿದೆ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಾಜಿ ಕಾಂಗ್ರೆಸ್ ನಾಯಕ ಭುವನೇಶ್ವರ ಕಲಿಟಾ (ಅಸ್ಸಾಂ), ವಿವೇಕ ಠಾಕೂರ್ (ಬಿಹಾರ), ಅಭಯ್ ಭಾರದ್ವಾಜ್  ಮತ್ತು ರಾಮೀಲಾಬೆನ್ ಬಾರಾ (ಗುಜರಾತ್) ದೀಪಕ್ ಪ್ರಕಾಶ್ (ಜಾರ್ಖಂಡ್), ಲೀಶೆಂಬಾ ಸನಾಜಾವೊಬಾ (ಮಣಿಪುರ),  ಉದಯನ್ರಾಜೆ ಬೋಸಲೆ (ಮಹಾರಾಷ್ಟ್ರ) ಮತ್ತು ರಾಜೇಂದ್ರ ಗೆಹ್ಲೋಟ್ (ರಾಜಸ್ಥಾನ) ಸೇರಿದ್ದಾರೆ. 

ಪಕ್ಷವು ತನ್ನ ಮಿತ್ರ ಪಕ್ಷಗಳಿಗೂ ಎರಡು ಸ್ಥಾನಗಳನ್ನು ಹಂಚಿದ್ದು ದಲಿತ ನಾಯಕ ಮತ್ತ ಕೇಂದ್ರ ಸಚಿವ ರಾಮದಾಸ್ ಅಠವಳೆ ಅವರನ್ನು ಮಹಾರಾಷ್ಟ್ರದಿಂದ ಮರುನಾಮಕರಣ ಮಾಡಲಾಗಿದೆ. ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ಬಿಸ್ವಜಿತ್ ದೈಮಾರಿ ಅವರು ಅಸ್ಸಾಂನಿಂದ ಸ್ಪರ್ಧಿಸಲಿದ್ದಾರೆ.

ಬಿಜೆಪಿ ಆಯಾ ವಿಧಾನಸಭೆಗಳಲ್ಲಿ ಹೊಂದಿರುವ ಬಲದ ಹಿನ್ನೆಲೆಯಲ್ಲಿ ಎಲ್ಲ ಅಭ್ಯರ್ಥಿಗಳೂ ಬಹುತೇಕ ರಾಜ್ಯಸಭೆಯನ್ನು ಪ್ರವೇಶಿಸುವುದು ಖಚಿತವಾಗಿದೆ.

೪೯ರ ಹರೆಯದ ಸಿಂಧಿಯಾ ಮಧ್ಯಪ್ರದೇಶದ ಪ್ರಭಾವೀ ನಾಯಕರಾಗಿದ್ದು ಅವರಿಗೆ ನಿಷ್ಠರಾದ ೨೨ ಮಂದಿ ಕಾಂಗ್ರೆಸ್ ಶಾಸಕರೂ ರಾಜ್ಯ ವಿಧಾನಸಭೆಗೆ ರಾಜೀನಾಮೆ ನೀಡಿದ್ದು ಕಮಲನಾಥ್ ನೇತೃತ್ವದ ಸರ್ಕಾರವನ್ನು ಪತನಗೊಳಿಸಲು ಸನ್ನದ್ಧರಾಗಿದ್ದಾರೆ.

No comments:

Advertisement