ಗ್ರಾಹಕರ ಸುಖ-ದುಃಖ
My Blog List
Saturday, April 4, 2020
ಕೋವಿಡ್-19 ಬಿಕ್ಕಟ್ಟು: ರೋಗಪತ್ತೆ ಕಿಟ್ ರಫ್ತಿಗೆ ನಿರ್ಬಂಧ
ಕೋವಿಡ್-19 ಬಿಕ್ಕಟ್ಟು: ರೋಗಪತ್ತೆ ಕಿಟ್ ರಫ್ತಿಗೆ ನಿರ್ಬಂಧ
ನವದೆಹಲಿ: ಕೊರೋನವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು 2020 ಏಪ್ರಿಲ್ 04ರ ಶನಿವಾರ ತತ್ ಕ್ಷಣದಿಂದ
ಜಾರಿಗೆ ಬರುವಂತೆ ರೋಗಪತ್ತೆ ಕಿಟ್‌ಗಳ ರಫ್ತಿಗೆ ನಿರ್ಬಂಧ ಹೇರಿತು.
"ಡಯಗ್ನೊಸ್ಟಿಕ್ (ರೋಗಪತ್ತೆ) ಕಿಟ್‌ಗಳ ರಫ್ತು (ಬೆಂಬಲ, ತಯಾರಿಕೆ, ರೋಗಪತ್ತೆ ಅಥವಾ ಪ್ರಯೋಗಾಲಯದ ಕಾರಕಗಳ (ಪ್ರತಿಕ್ರಿಯಾತ್ಮಕ ವಸ್ತು) ರಫ್ತನ್ನು ತತ್ ಕ್ಷಣದಿಂದ ಜಾರಿಗೆ ಬರುವಂತೆ
ನಿರ್ಬಂಧಿಸಲಾಗಿದೆ" ಎಂದು ವಿದೇಶ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್‌ಟಿ) ತನ್ನ ಅಧಿಸೂಚನೆಯಲ್ಲಿ ತಿಳಿಸಿತು.
ರೋಗಿಗಳ ಪರೀಕ್ಷೆಗೆ ಈ ಕಿಟ್‌ಗಳು ಅಗತ್ಯವಿರುವುದರಿಂದ ಕೋವಿಡ್ -೧೯ ಬಿಕ್ಕಟ್ಟನ್ನು ಎದುರಿಸಲು ಈ ಕ್ರಮವು ನೆರವಾಗುತ್ತದೆ.
ದೇಶದಲ್ಲಿ ಕೋವಿಡ್ -೧೯ ಪ್ರಕರಣಗಳು ೩,೦೦೦ದ ಸಮೀಪಕ್ಕೆ ಬಂದಿದ್ದು, ಇವುಗಳಲ್ಲಿ ೨,೬೫೦ ಸಕ್ರಿಯ ಪ್ರಕರಣಗಳಾಗಿವೆ. ೧೮೩ ಪ್ರಕರಣಗಳಲ್ಲಿ ರೋಗಿಗಳು ಚೇತರಿಸಿಕೊಂಡಿದ್ದು, ಮತ್ತು ೬೮ ಸಾವುಗಳು ಸಂಭವಿಸಿವೆ.
ಕೊರೋನವೈರಸ್ ಬಿಕ್ಕಟ್ಟನ್ನು ನಿರ್ವಹಿಸಲು ಆರೋಗ್ಯ ರಕ್ಷಣೆ ಮೂಲಸೌಕರ್ಯವನ್ನು ಹೆಚ್ಚಿಸಲು ಮತ್ತು ಕೋವಿಡ್ -೧೯ ವಿರುದ್ಧದ ಹೋರಾಟಕ್ಕೆ ಅನುಕೂಲವಾಗುವಂತೆ ರಕ್ಷಣಾ ಸಾಧನಗಳು ಮತ್ತು ಅಗತ್ಯ ವಸ್ತುಗಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಪ್ರಯತ್ನಿಸುತ್ತಿದೆ.
ರಾಷ್ಟ್ರ ರಾಜಧಾನಿಯು ವೈಯಕ್ತಿಕ ರಕ್ಷಣಾ ಸಾಧನಗಳ (ಪಿಪಿಇ) ಕೊರತೆಯನ್ನು ಎದುರಿಸುತ್ತಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಶನಿವಾರ ಹೇಳಿದರು.
"ನಮ್ಮ ಸಂಗ್ರಹದಲ್ಲಿ ಕೇವಲ ೭೦೦೦-೮೦೦೦ ಪಿಪಿಇ (ಪರ್ಸನಲ್ ಪ್ರೊಟೆಕ್ಟಿವ್ ಈಕ್ವಿಪ್‌ಮೆಂಟ್ ಕಿಟ್‌ಗಳು ಮಾತ್ರ ಉಳಿದಿವೆ, ಅವು ೨-೩ ದಿನಗಳವರೆಗೆ ಸಾಕಾಗುತ್ತದೆ. ನಾವು ತುರ್ತು ಆಧಾರದ ಮೇಲೆ ೫೦,೦೦೦ ಪಿಪಿಇ ಕಿಟ್‌ಗಳಿಗೆ ಒದಗಿಸುವಂತೆ ಬೇಡಿಕೆ ಇಟ್ಟಿದ್ದೇವೆ’ ಎಂದು ಸಚಿವರು ಸುದ್ದಿ ಸಂಸ್ಥೆಗೆ ತಿಳಿಸಿದರು.
ದೇಶದಲ್ಲಿ ಕೊರೋನಾಬಾಧೆಗೆ ಅತ್ಯಂತ ಹೆಚ್ಚು ತುತ್ತಾಗಿರುವ ಮೂರನೇ ದೊಡ್ಡ ರಾಜ್ಯವಾಗಿ ದೆಹಲಿಯ ಮೂಡಿಬಂದಿದ್ದು ಒಟ್ಟು ೩೮೬ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರ ಮತ್ತು ತಮಿಳುಡು ಕ್ರಮವಾಗಿ ಒಂದು ಮತ್ತು ಎರಡನೇ ಸ್ಥಾನದಲ್ಲಿವೆ. ಈ ಎರಡು ರಾಷ್ಟ್ರಗಳ ಬಳಿಕದ ಸ್ಥಾನದಲ್ಲಿ ರಾಷ್ಟ್ರ ರಾಜಧಾನಿ ಇದೆ.
ದೆಹಲಿ ಆರೋಗ್ಯ ಸಚಿವರು ರಾಷ್ಟ್ರ ರಾಜಧಾನಿಯಲ್ಲಿನ ಒಟ್ಟು ಕೊರೋನವೈರಸ್ ರೋಗಿಗಳ ಪೈಕಿ ೨೫೦ ಕ್ಕೂ ಹೆಚ್ಚು ಮಂದಿ ನಿಜಾಮುದ್ದೀನ್ ಪ್ರದೇಶದ ಮರ್ಕಾಜ್ ಸಮಾವೇಶದ ಜೊತೆಗೆ ಸಂಪರ್ಕ ಹೊಂದಿದವರಾಗಿದ್ದಾರೆ ಎಂದು ದೆಹಲಿಯ ಆರೋಗ್ಯ ಸಚಿವರು ವಿವರಿಸಿದರು.
Labels:
Coronavirus,
Flash News,
India,
Lockdown,
Nation,
News,
ಕೊರೋನಾವೈರಸ್,
ರಾಷ್ಟ್ರೀಯ,
ಲಾಕ್ಡೌನ್,
ಸುದ್ದಿ
Subscribe to:
Post Comments (Atom)
No comments:
Post a Comment