ಭಾರತದ ರಾಷ್ಟ್ರಪತಿ, ಪ್ರಧಾನಿ ಟ್ವಿಟರ್ ಖಾತೆ ಮೇಲೆ
ಶ್ವೇತ ಭವನದ ಕಣ್ಣು..!
ಶ್ವೇತ ಭವನದ ಕಣ್ಣು..!
ವಾಷಿಂಗ್ಟನ್: ಕೊರೋನಾವೈರಸ್ಸನ್ನು ನಿಭಾಯಿಸುತ್ರಿರುವ ಪರಿಯಿಂದಾಗಿ ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಜಗತ್ತಿನಲ್ಲಿ ಏರುಮುಖವಾಗಿ ಸಾಗುತ್ತಿದೆ.
ಇಡೀ ವಿಶ್ವದ ಕಣ್ಣು ಭಾರತದಲ್ಲಿ ನೆಟ್ಟಿರುವುದರ ಮಧ್ಯೆ ಇದೀಗ, ಭಾರತದ ಪ್ರಧಾನಿ ಮತ್ತು ರಾಷ್ಟ್ರಪತಿಯವರ ಟ್ವಿಟ್ಟರ್ ಖಾತೆಯನ್ನು ಅಮೆರಿಕದ ಶ್ವೇತ ಭವನ ಅನುಸರಿಸುತ್ತಿರುವ (ಫಾಲೋ ಮಾಡುತ್ತಿರುವ) ವಿಚಾರ 2020 ಏಪ್ರಿಲ್ 10ರ ಶುಕ್ರವಾರ ಬೆಳಕಿಗೆ ಬಂದಿತು.
ಅಮೆರಿಕ ಅಧ್ಯಕ್ಷರ ಸಚಿವಾಲಯವು ಕೇವಲ ೧೯ ಟ್ವಿಟ್ಟರ್ ಖಾತೆಗಳನ್ನು ಮಾತ್ರ ಅನುಸರಿಸುತ್ತಿದೆ. ಈ ಖಾತೆಯೆಲ್ಲವೂ ಅಮೆರಿಕದ ಮೂಲದ ಖಾತೆಗಳು. ಆದರೆ ಈಗ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಖಾತೆಯೂ ಈ ೧೯ ಖಾತೆಗಳ ಜೊತೆ ಸೇರ್ಪಡೆಯಾಗಿದೆ.
ಭಾರತದ ಇಬ್ಬರು ಗಣ್ಯರ ಟ್ವಿಟ್ಟರ್ ಖಾತೆಗಳನ್ನು ಹೊರತು ಪಡಿಸಿದರೆ ಅಮೆರಿಕ ಹೊರತಾಗಿ ಬೇರೆ ಯಾವುದೇ ದೇದ ಯಾವುದೇ ನಾಯಕರ ಖಾತೆಗಳನ್ನು ಕೂಡಾ ಶ್ವೇತಭವನ ಫಾಲೋ ಮಾಡುತ್ತಿಲ್ಲ ಎಂಬುದು ವಿಶೇಷ.
ಜಾಗತಿಕ ನಾಯಕರ ಪಟ್ಟಿಯಲ್ಲಿ ಅತಿ ಹೆಚ್ಚು ಬೆಂಬಲಿಗರನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ವಿಶ್ವದ ಪಟ್ಟಿಯಲ್ಲಿ ಮೂರನೆಯ ಸ್ಥಾನದಲ್ಲಿದ್ದಾರೆ. ಮೋದಿ ಅವರ ವೈಯಕ್ತಿಯ ಖಾತೆಗೆ ೪.೨೦ ಕೋಟಿ ಬೆಂಬಲಿಗರು ಇದ್ದರೆ, ಪ್ರಧಾನಿ ಎಂಬ ಹೆಸರಿನಲ್ಲಿ ಇರುವ ಖಾತೆಗೆ ೨.೬೦ ಕೋಟಿ ಬೆಂಬಲಿಗರಿದ್ದಾರೆ.
ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಟ್ರಂಪ್ ಅವರನ್ನು ಈ ಸಂದರ್ಭದಲ್ಲಿ ತಮ್ಮ ತವರು ಗುಜರಾತಿಗೂ ಕರೆದೊಯ್ದಿದ್ದರು. ಈ ಎರಡು ದೇಶಗಳ ಬಾಂಧವ್ಯ ವೃದ್ಧಿಗೆ ಸಂಬಂಧಿಸಿದಂತೆ ಮಾತುಕತೆಗಳೂ ನಡೆದಿದ್ದವು. ಈ ಎಲ್ಲ ಬೆಳವಣಿಗೆಗಳು ಅಮೆರಿಕದ ಮೇಲೆ ತೀವ್ರ ಪ್ರಭಾವ ಬೀರಿವೆ ಎಂದು ಹೇಳಲಾಗಿದೆ.
No comments:
Post a Comment